Asianet Suvarna News Asianet Suvarna News

ಒಂದು ಕೋಣೆಯ ಮುರುಕಲು ಮನೆಯಿಂದ ಐಷಾರಾಮಿ ಬಂಗಲೆಯವರೆಗೆ: ಐಎಎಸ್‌ ಅಧಿಕಾರಿ ಸ್ಪೂರ್ತಿದಾಯಕ ಪಯಣ ಹೀಗಿದೆ..

.ತೆಂಗಿನ ಗರಿಯ ಛಾವಣಿಯಿಂದ ಸಂರಕ್ಷಿಸಲ್ಪಟ್ಟ ಒಂದು ಕೋಣೆಯ ಮನೆಯಲ್ಲಿ ನಾನು ತನ್ನ ಹೆತ್ತವರು ಮತ್ತು ನಾಲ್ವರು ಒಡಹುಟ್ಟಿದವರೊಂದಿಗೆ ವಾಸಿಸುತ್ತಿದ್ದೆ ಎಂದು ಐಎಎಸ್‌ ಅಧಿಕಾರಿ ಪೋಸ್ಟ್‌ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್‌ ಆಗಿದೆ. 

civil servant shows his progress from one room thatched house to sprawling bungalow ash
Author
First Published Sep 8, 2023, 4:39 PM IST

ನವದೆಹಲಿ (ಸೆಪ್ಟೆಂಬರ್ 8, 2023): ಶಿಕ್ಷಣವು ಜೀವನವನ್ನು ಬದಲಾಯಿಸುತ್ತದೆ ಮತ್ತು ಜನರನ್ನು ಬಡತನದಿಂದ ಮೇಲೆತ್ತುತ್ತದೆ ಎಂದು ಹೇಳಲಾಗುತ್ತದೆ. ಜನರು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ತಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಲು ಬಯಸುತ್ತಾರೆ. ಇದೇ ರೀತಿ, ಒಬ್ಬ ವ್ಯಕ್ತಿ ಒಂದು ಕೋಣೆಯ ಮುರುಕಲು ಶೆಡ್‌ ಹಾಗೂ ಗರಿಯ ಛಾವಣಿ ಮನೆಯಿಂದ ಎರಡು ಅಂತಸ್ತಿನ ಬಂಗಲೆಗೆ ತನ್ನ ಪ್ರಗತಿಯನ್ನು ತೋರಿಸುವ ಎರಡು ಫೋಟೋಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು, ಈ ಮೂಲಕ ನೆಟ್ಟಿಗರಿಗೆ ಸ್ಫೂರ್ತಿ ನೀಡಿದ್ದಾರೆ.

ನಾಗಾಲ್ಯಾಂಡ್ ಮುಖ್ಯಮಂತ್ರಿ ನೇಯ್‌ಫಿಯು ರಿಯೋಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿರುವ ನೆಲ್ಲಯಪ್ಪನ್ ಬಿ ಅವರು ತಮ್ಮ ಸ್ಪೂರ್ತಿದಾಯಕ ಪ್ರಯಾಣವನ್ನು ಎಕ್ಸ್‌ (ಈ ಹಿಂದಿನ ಟ್ವಿಟ್ಟರ್‌ನಲ್ಲಿ) ಹಂಚಿಕೊಂಡಿದ್ದಾರೆ. ತೆಂಗಿನ ಗರಿಯ ಛಾವಣಿಯಿಂದ ಸಂರಕ್ಷಿಸಲ್ಪಟ್ಟ ಒಂದು ಕೋಣೆಯ ಮನೆಯಲ್ಲಿ ನಾನು ತನ್ನ ಹೆತ್ತವರು ಮತ್ತು ನಾಲ್ವರು ಒಡಹುಟ್ಟಿದವರೊಂದಿಗೆ ವಾಸಿಸುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ಹಾಗೂ, ತಮ್ಮ ಹಳೆಯ ಮನೆ ಮತ್ತು ಪ್ರಸ್ತುತ ಮನೆ ಎರಡರ ಫೋಟೋಗಳನ್ನು ಹಂಚಿಕೊಂಡ ನಾಗರಿಕ ಸೇವಕ, ತಮ್ಮ ಯಶಸ್ಸಿಗೆ ಶಿಕ್ಷಣ, ಸಮರ್ಪಣೆ ಮತ್ತು ಕಠಿಣ ಪರಿಶ್ರಮವೇ ಕಾರಣ ಎಂದಿದ್ದಾರೆ.

ಇದನ್ನು ಓದಿ: ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳಾಗಿ ಖ್ಯಾತ ರಾಜಕಾರಣಿಗಳಾದವರು ಇವರು!

“ನಾನು 30 ವರ್ಷ ವಯಸ್ಸಿನವರೆಗೂ ಈ ಒಂದೇ ಕೋಣೆಯ ಮನೆಯಲ್ಲಿ (ತೆಂಗಿನ ಗರಿಯ ಛಾವಣಿ) ನನ್ನ ಪೋಷಕರು ಮತ್ತು 4 ಒಡಹುಟ್ಟಿದವರೊಂದಿಗೆ ವಾಸಿಸುತ್ತಿದ್ದೆ. ಶಿಕ್ಷಣ, ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಮೂಲಕ ಇಂದಿನ ಸ್ಥಾನವನ್ನು ತಲುಪಲು ಆಶೀರ್ವದಿಸಲಾಗಿದೆ’’ ಎಂದು ಅವರು ಪೋಸ್ಟ್‌ ಮಾಡಿದ್ದಾರೆ. ಬುಧವಾರ ಇದನ್ನು ಅವರು ಪೋಸ್ಟ್‌ ಮಾಡಿದ್ದು, ಈವರೆಗೆ 12 ಸಾವಿರಕ್ಕೂ ಹೆಚ್ಚು ಲೈಕ್‌ ಸಿಕ್ಕಿದೆ.

 "ಇದು X ಅಪ್ಲಿಕೇಶನ್‌ನಲ್ಲಿರುವ ಇಂದಿನ ಉತ್ತಮ ವಿಷಯ!" ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. “ಶ್ಲಾಘನೀಯ. ಸ್ಟೇ ಬ್ಲೆಸ್ಡ್’’ ಎಂದು ಮತ್ತೊಬ್ಬರು ಹೇಳಿದ್ದಾರೆ. ಹಾಗೂ, “ಇದು ತುಂಬಾ ಸ್ಫೂರ್ತಿದಾಯಕ ಸರ್! ಅಲ್ಲದೆ, ನೀವು ಸುಂದರವಾದ ಮನೆಯನ್ನು ಹೊಂದಿದ್ದೀರಿ’’ ಎಂದೂ ಸಾಮಾಜಕ ಜಾಲತಾಣದಲ್ಲಿ ಮತ್ತೊಬ್ಬರು ಬರೆದಿದ್ದಾರೆ. ಅದೇ ರೀತಿ ಹಲವರು ನೆಲ್ಲಯಪ್ಪನ್ ಬಿ ಅವರ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದು, ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಅಮೆರಿಕದಲ್ಲಿ ಕೆಲಸ ಬಿಟ್ಟು ಯುಪಿಎಸ್‌ಸಿ ಪರೀಕ್ಷೆಯಲ್ಲಿ ನಂ. 1 ರ‍್ಯಾಂಕ್ ಪಡೆದ ಐಐಟಿ ವಿದ್ಯಾರ್ಥಿಯ ಯಶಸ್ಸಿನ ಸೂತ್ರ ಹೀಗಿದೆ..

Follow Us:
Download App:
  • android
  • ios