Asianet Suvarna News Asianet Suvarna News

Amazon ವಿರುದ್ಧ ದೂರು: ಇಂಟರ್‌ನೆಟ್‌ನಲ್ಲಿ ವೈರಲ್ ಆಯ್ತು ವಾಯುಯಾನ ಇಲಾಖೆ ಪ್ರತಿಕ್ರಿಯೆ

ಇ-ಕಾಮರ್ಸ್ ದೈತ್ಯ ಅಮೇಜಾನ್ ಆನ್‌ಲೈನ್‌ ಮಾರ್ಕೆಟ್‌ಗೆ ಈಗ ವಿಶ್ವದಾದ್ಯಂತ ಪ್ರಸಿದ್ಧಿ, ಭಾರತದಲ್ಲಿ ಅತ್ಯಧಿಕ ಗ್ರಾಹಕರನ್ನು ಹೊಂದಿರುವ ಅಮೇಜಾನ್ ವಿರುದ್ಧ ಗ್ರಾಹಕರೊಬ್ಬರು ನೀಡಿರುವ ದೂರು ಈಗ ಆನ್‌ಲೈನ್‌ನಲ್ಲಿ ತಮಾಷೆಗೆ ಕಾರಣವಾಗಿದೆ.

Civil Aviation Ministry responding complaint against amazon about iPad Pro product after man Wrongly Tags the Ministry
Author
First Published Sep 15, 2022, 3:38 PM IST

ಮುಂಬೈ: ಇ-ಕಾಮರ್ಸ್ ದೈತ್ಯ ಅಮೇಜಾನ್ ಆನ್‌ಲೈನ್‌ ಮಾರ್ಕೆಟ್‌ಗೆ ಈಗ ವಿಶ್ವದಾದ್ಯಂತ ಪ್ರಸಿದ್ಧಿ, ಭಾರತದಲ್ಲಿ ಅತ್ಯಧಿಕ ಗ್ರಾಹಕರನ್ನು ಹೊಂದಿರುವ ಅಮೇಜಾನ್ ವಿರುದ್ಧ ಗ್ರಾಹಕರೊಬ್ಬರು ನೀಡಿರುವ ದೂರು ಈಗ ಆನ್‌ಲೈನ್‌ನಲ್ಲಿ ತಮಾಷೆಗೆ ಕಾರಣವಾಗಿದೆ. ಆಮೇಜಾನ್ ಗ್ರಾಹಕರೊಬ್ಬರು ಆಮೆಜಾನ್ ಸೇವೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ದೂರು ನೀಡಲು ಮುಂದಾಗಿದ್ದಾರೆ. ಆನ್‌ಲೈನ್‌ನಲ್ಲೇ ದೂರು ನೀಡಲು ಮುಂದಾದ ಗ್ರಾಹಕ ಟ್ವಿಟ್ಟರ್‌ನಲ್ಲಿ ದೂರನ್ನು ಟ್ವಿಟ್ ಮಾಡಿ, ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಗೆ ಟ್ಯಾಗ್ ಮಾಡುವ ಬದಲು ಕೇಂದ್ರ ನಾಗರಿಕ ವಾಯುಯಾನ ಇಲಾಖೆಗೆ ತಪ್ಪಾಗಿ ಟ್ಯಾಗ್ ಮಾಡಿದ್ದಾರೆ. ಅಲ್ಲದೇ ಅಮೇಜಾನ್ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

ಆದರೆ ಉದ್ದೇಶಪೂರ್ವಕವಲ್ಲದ ಈ ಟ್ಯಾಗ್‌ಗೆ ನಾಗರಿಕ ವಿಮಾನಯಾನ ಇಲಾಖೆ ಪ್ರತಿಕ್ರಿಯಿಸಿದೆ. ನಾಗರಿಕ ವಿಮಾನಯಾನ ಇಲಾಖೆಯ ಪ್ರತಿಕ್ರಿಯೆ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಅಂಕುರ್ ಶರ್ಮಾ (Ankur Sharma) ಎಂಬ ಟ್ವಿಟ್ಟರ್ ಬಳಕೆದಾರ ಐ ಪ್ಯಾಡ್ ಪ್ರೊ (iPad Pro) ಉತ್ಪನ್ನ ಮಾರಾಟಕ್ಕಿಟ್ಟಿರುವ ಅಮೇಜಾನ್ (Amazon) ಪೇಜ್‌ನ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದ್ದು, ಇದೊಂದು ಆಪಲ್ ಕಂಪನಿ ಉತ್ಪನ್ನವಾಗಿದ್ದು, ಇದರ ದರ 1,76,900 ಇದನ್ನು  ದೊಡ್ಡ ಮೊತ್ತದ ಡಿಸ್ಕೌಂಟ್‌ನೊಂದಿಗೆ 67,390  ದರಕ್ಕೆ ಮಾರಾಟ ಮಾಡುವುದಾಗಿ ಅಮೆಜಾನ್ ಹೇಳಿಕೊಂಡಿದೆ. 

ಅಮೆಜಾನ್ ಐ ಪ್ಯಾಡ್ ಪ್ರೋಗೆ 62 ಶೇಕಡಾ ರಿಯಾಯಿತಿ ದರ ಘೋಷಿಸಿ ಇದನ್ನು ಬಿಗ್ ಆಫರ್ ಎಂದು ಅಮೆಜಾನ್ ಘೋಷಿಸುತ್ತಿದೆ. ಆದರೆ ಇದಕ್ಕೆ ನಿಜವಾಗಿಯೂ 1,76,900. ಇಷ್ಟೊಂದು ದರ ಇಲ್ಲ ಎಂದು ಅವರು ಆರೋಪಿಸಿದ್ದಾರೆ. 11 ಇಂಚಿನ ಐ ಪ್ಯಾಡ್ ಪ್ರೊ ದರ 1,76,900 ರೂಪಾಯಿ ಇಲ್ಲ ಎಂದು ಬರೆದ ಅಂಕುರ್ ಶರ್ಮಾ ಅದನ್ನು (@MoCA_GoI) ನಾಗರಿಕ ವಿಮಾನಯಾನ ಇಲಾಖೆಗೆ ಟ್ಯಾಗ್ ಮಾಡಿ, ಈ ಅಸಂಬದ್ಧ ವ್ಯವಹಾರದ ಬಗ್ಗೆ ಕ್ರಮಕೈಗೊಳ್ಳಿ ಎಂದು ಟ್ಯಾಗ್ ಮಾಡಿದ್ದಾರೆ. ಅವರು ಇದನ್ನು ಗ್ರಾಹಕರ ವ್ಯವಹಾರಗಳ ಇಲಾಖೆಗೆ (Ministry of Consumer Affairs) ಟ್ಯಾಗ್ ಮಾಡಬೇಕಾಗಿತ್ತು. 

ದಿವ್ಯಾಂಗ ಮಗುವಿಗೆ ಪ್ರವೇಶ ನಿರಾಕರಿಸಿದ ಇಂಡಿಗೋ ಏರ್‌ಲೈನ್ಸ್

ಆದರೆ ಇದಕ್ಕೆ ನಾಗರಿಕ ವಿಮಾನಯಾನ ಇಲಾಖೆ ಪ್ರತಿಕ್ರಿಯಿಸಿದೆ. ನಾವು ಸಹಾಯ ಮಾಡಲು ಬಯಸಿದ್ದೇವೆ. ಆದರೆ ನಾವು ಭಾರತದಲ್ಲಿ ನ್ಯಾಯೋಚಿತವಾದ ದರದಲ್ಲಿ ವಿಮಾನಯಾನ ಸೌಲಭ್ಯವನ್ನು ನೀಡುವ ಕಾರ್ಯದಲ್ಲಿ ಬ್ಯುಸಿ ಆಗಿದ್ದೇವೆ ಎಂದು ವಿಮಾನಯಾನ ಇಲಾಖೆ (The Ministry of Civil Aviation) ಹೇಳಿಕೊಂಡಿದೆ. ವಿಮಾನಯಾನ ಇಲಾಖೆಯ ಈ ಹಾಸ್ಯಾಸ್ಪದ ಪ್ರತಿಕ್ರಿಯೆಗೆ 7,500ಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದು, 700ಕ್ಕೂ ಹೆಚ್ಚು ಜನ ರಿಟ್ವಿಟ್ ಮಾಡಿದ್ದಾರೆ. ಇತ್ತ ವಿಮಾನಯಾನ ಇಲಾಖೆಯ ಪ್ರತಿಕ್ರಿಯೆಗೆ ಅಮೇಜಾನ್ ಪ್ರತಿಕ್ರಿಯಿಸಿದ್ದು, ಈ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನೀಡುವಂತೆ ಕೇಳಿದೆ.

Festival Offers ಅಮೆಜಾನ್ ಗ್ರೇಟ್ ಇಂಡಿಯನ್‌ ಫೆಸ್ಟಿವಲ್ ಸೆ.23ರಿಂದ ಆರಂಭ, ಭರ್ಜರಿ ಕೊಡುಗೆ!

ಈ ವಿಚಾರವನ್ನು ನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು. ನೀವು ಹೇಳಿದ ಉತ್ಪನ್ನದ ಲಿಂಕ್ ಅನ್ನು ನಮಗೆ ತಿಳಿಸಿ. ನಾವು ಹಾಗೂ ನಮ್ಮ ಸಂಬಂಧಿತ ತಂಡ ಈ ವಿಚಾರದ ಬಗ್ಗೆ ವಿಮರ್ಶಿಸಿ ತಿಳಿಸುತ್ತೇವೆ ಎಂದು ಅಮೆಜಾನ್ ಹೇಳಿದೆ. ಇದರೊಂದಿಗೆ ಹಲವು ಟ್ವಿಟ್ಟರ್ ಬಳಕೆದಾರರು ಕೂಡ ಪ್ರತಿಕ್ರಿಯಿಸಿದ್ದು, ಭಾರತದಲ್ಲಿ ಅಂತರಿಕ ವಿಮಾನಯಾನ (Domestic air travel) ಸೌಲಭ್ಯ ದುಬಾರಿ ಆಗಿದೆ. ಮುಂಬೈನಿಂದ (Mumbai) ಥೈಲ್ಯಾಂಡ್‌ಗೆ (Thailand) ಹೋಗುವುದಕ್ಕಿಂತಲೂ ಭಾರತದೊಳಗೆ ಸಂಚರಿಸುವುದು ದುಬಾರಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದೆ. ವಿಮಾನಯಾನ ಇಲಾಖೆಯನ್ನು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮುನ್ನಡೆಸುತ್ತಿದ್ದಾರೆ. 
 

Follow Us:
Download App:
  • android
  • ios