Asianet Suvarna News Asianet Suvarna News

ಮೆಟ್ರೋ ನಿಲ್ದಾಣದಿಂದ ಜಿಗಿದು ಆತ್ಮಹತ್ಯೆಗೆ ಯತ್ನ, ಯುವತಿ ರಕ್ಷಿಸಿದ ಪೊಲೀಸ್ ವಿಡಿಯೋ ವೈರಲ್!

  • ಮೆಟ್ರೋ ನಿಲ್ದಾಣದ ಕಟ್ಟದ ಮೇಲಿನಿಂದ ಜಿಗಿದು ಯುವತಿ ಆತ್ಮಹತ್ಯೆಗೆ ಯತ್ನ
  • ಮೆಟ್ರೋ ಸಿಬ್ಬಂದಿ, ಪೊಲೀಸ್ ಮನವಿಗೆ ಕಿವಿಗೊಡದೆ ಆತ್ಮಹತ್ಯೆಗೆ ಯತ್ನಿಸಿದ ಯುವತಿ
  • ತಕ್ಷಣ ಕಾರ್ಯಪ್ರವೃತ್ತರಾಗೋ ಮೂಲಕ ಯುವತಿಯನ್ನು  ಪೊಲೀಸ್ 
CISF police saved  girl when she trying to commit suicide Faridabad metro station delhi video goes viral ckm
Author
Bengaluru, First Published Jul 25, 2021, 3:33 PM IST

ನವದೆಹಲಿ(ಜು.25):  ಸಿಬ್ಬಂದಿಗಳ, ಪೊಲೀಸರ ಮನವಿಗೆ ಯುವತಿ ಕಿವಿಗೊಡಲೇ ಇಲ್ಲ. ಒಂದು ಕ್ಷಣ ವಿಳಂಬವಾಗಿದ್ದರೆ, ಯುವತಿಯ ಪ್ರಾಣ ಪಕ್ಷಿ ಹಾರಿಹೋಗುತ್ತಿತ್ತು. ಆದರೆ ಹಾಗಾಗಲು CISF ಪೊಲೀಸ್ ಬಿಡಲಿಲ್ಲ. ಹೌದು, ಮೆಟ್ರೋ ನಿಲ್ದಾಣದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು   CISF ಪೊಲೀಸ್ ತಕ್ಷಣ ಕಾರ್ಯಪ್ರವೃತ್ತರಾಗೋ ಮೂಲಕ  ರಕ್ಷಿಸಲಾಗಿದೆ. 

SSLC ಪರೀಕ್ಷೆ ಬರೆದು ಬಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

ಈ ಘಟನೆ ನಡೆದಿರುವುದು ದೆಹಲಿ ಫರಿದಾಬಾದ್ ಮೆಟ್ರೋ ನಿಲ್ದಾಣದಲ್ಲಿ. ಮಾನಸಿಕವಾಗಿ ನೊಂದಿದ್ದ ಯವತಿ ಫರೀದಾಬಾದ್ ಮೆಟ್ರೋ ನಿಲ್ದಾಣದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಯುವತಿಯ ಗಮನಿಸಿದ ಮೆಟ್ರೋ ಸಿಬ್ಬಂದಿಗಳು ಮನವೋಲಿಸುವ ಯತ್ನ ಮಾಡಿದ್ದಾರೆ. ಆದರೆ ಈ ಮನವಿಗೆ ಯುವತಿ ಸೊಪ್ಪು ಹಾಕಿಲ್ಲ.

ಕಟ್ಟದ ಅಂಚಿನಲ್ಲಿ ಕುಳಿತು ಕೆಳಕ್ಕೆ ಹಾರಲು ತಯಾರಿ ಮಾಡಿಕೊಂಡಿದ್ದಾಳೆ. ಪರಿಸ್ಥಿತಿ ಕೈಮೀರುತ್ತಿದೆ ಎಂದು ಅರಿತ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್(  CISF) ಪೊಲೀಸ್ ಕಟ್ಟದ ಮತ್ತೊಂದು ಬದಿಯಿಂದ ನೇರವಾಗಿ ಯುವತಿ ಬಳಿ ಬಂದು ತಕ್ಷಣ ಹಿಡಿದಿದ್ದಾರೆ. ಈ ವೇಳೆ ಮೆಟ್ರೋ ಸಿಬ್ಬಂದಿ ಕೂಡ ಯುವತಿಯನ್ನು ಹಿಡಿದು ಆತ್ಮಹತ್ಯೆಯಿಂದ ರಕ್ಷಿಸಿದ್ದಾರೆ.

 

ಯುವತಿಯನ್ನು ವಶಕ್ಕೆ ಪಡೆದ ಪೊಲೀಸರು ಕೌನ್ಸಲಿಂಗ್ ಕೇಂದ್ರಕ್ಕೆ ಕಳುಹಿಸಿದ್ದಾರೆ. ಯುವತಿಗೆ ಕೌನ್ಸಲಿಂಗ್ ನೀಡಿದ ಅಧಿಕಾರಿಗಳು ಬಳಿಕ ಯುವತಿ ಕುಟಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. CISF ಪೊಲೀಸ್ ಪೆದೆ ಸರ್ಫರಾಜ್ ಸಾಹಸಕ್ಕೆ ಪೊಲೀಸ್ ಕಮೀಶನರ್ ಒಪಿ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವತಿ ಆತ್ಮಹತ್ಯೆ ಪ್ರಸಂಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Follow Us:
Download App:
  • android
  • ios