* ಅಪ್ರಾಪ್ತ ಶಾಲಾ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ* ಸಿನಿಮಾ ಗ್ರೂಪ್ ಡ್ಯಾನ್ಸರ್ ಮಾತು ಕೇಳಿ ಮೋಸ ಹೋದ ಬಾಲಕಿ* ಡ್ಯಾನ್ಸರ್ ಪ್ರೀತಿಸುತ್ತಾನೆಂದು ನಂಬಿದ ಅಪ್ರಾಪ್ತೆ

ಚೆನ್ನೈ(ಏ.26): ಅಪ್ರಾಪ್ತ ಶಾಲಾ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸಿನಿಮಾ ಗ್ರೂಪ್ ಡ್ಯಾನ್ಸರ್ ಸೇರಿದಂತೆ ಮೂವರನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಚೆನ್ನೈನ ಅರುಂಬಕ್ಕಂನ 14 ವರ್ಷದ ಶಾಲಾ ಬಾಲಕಿಗೆ ಅದೇ ಪ್ರದೇಶದ ಜಯಸೂರ್ಯ ಜೊತೆ ಪರಿಚಯವಾಗಿದ್ದಳು. ಜಯಸೂರ್ಯ ತಾನು ಚಿತ್ರರಂಗದಲ್ಲಿ ಗ್ರೂಪ್ ಡ್ಯಾನ್ಸರ್ ಎಂದು ಪರಿಚಯಿಸಿಕೊಂಡಿದ್ದಾನೆ ಹಾಗೂ ತಾನು ಆ ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿ ನಂಬಿಸಿದ್ದಾನೆ. ನಂತರ ಪ್ರೀತಿಯ ನೆಪದಲ್ಲಿ ಅಪ್ರಾಪ್ತೆಯನ್ನು ಕರೆದುಕೊಂಡು ಹೋಗಿ ಖಾಸಗಿ ಹೋಟೆಲ್‌ನಲ್ಲಿ ಕೊಠಡಿ ಬಾಡಿಗೆಗೆ ಪಡೆದು ತನ್ನೊಂದಿಗೆ ಇರುವಂತೆ ಮಾಡಿ ಅತ್ಯಾಚಾರ ಎಸಗಿದ್ದಾನೆ.

ಏತನ್ಮಧ್ಯೆ, ಆಕೆಯ ತಾಯಿ ಕಾಣೆಯಾದ ವ್ಯಕ್ತಿಯ ದೂರನ್ನು ನೀಡಿದ ನಂತರ ಅರುಂಬಕ್ಕಂ ಪೊಲೀಸರು ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಯುವಕರು ನಿತ್ಯವೂ ಹೆಣ್ಣು ಮಕ್ಕಳನ್ನು ಈ ಹೋಟೆಲ್‌ಗೆ ಕರೆತಂದು ವಾಸ್ತವ್ಯ ಹೂಡುತ್ತಿದ್ದಾರೆ ಎಂಬ ರಹಸ್ಯ ಮಾಹಿತಿ ಲಭಿಸಿದೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿ ಬಾಲಕಿಯನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಅವರು ಜಯಸೂರ್ಯ ಮತ್ತು ಆತನಿಗೆ ಸಹಾಯ ಮಾಡಿದ ಇತರ ಇಬ್ಬರನ್ನು ಬಂಧಿಸಿದ್ದು ಮತ್ತು ಮೂವರನ್ನೂ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಅಪ್ರಾಪ್ತ ಬಾಲಕಿಯ ಅಪಹರಣ, ಮದುವೆಯಾಗಿ ದೈಹಿಕ ಸಂಪರ್ಕ!

ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಮದುವೆಯಾಗಿ ದೈಹಿಕ ಸಂಬಂಧ ಬೆಳೆಸಿದ ಆರೋಪಿಗೆ ಶಿಕ್ಷೆ ವಿ​ಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ. 

28 ವರ್ಷದ ಮಹೇಶ ಎಂಬ ವ್ಯಕ್ತಿ ಕಳೆದ 2019ರ ಮಾರ್ಚ್ 7ರಂದು 15 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿಕೊಂಡು ಮದುವೆಯಾಗಿ ನಂತರ ಬೆಂಗಳೂರಿಗೆ ತೆರಳಿ ಬಾಲಕಿಯೊಂದಿಗೆ ದೈಹಿಕ ಸಂಬಂಧ ಮಾಡಿದ ಆರೋಪ ದೃಢಪಟ್ಟ ಹಿನ್ನೆಲೆ ವಿಚಾರಣೆ ನಡೆದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾ. ಬಿ.ಎಸ್‌.ಭಾರತಿ ಅವರು ಆರೋಪಿತ ವ್ಯಕ್ತಿಗೆ ಶಿಕ್ಷೆ ವಿಧಿಸಿದೆ.

Bengaluru Crime: ಶೀಲ ಶಂಕಿಸಿ ಪತ್ನಿಯ ಇರಿದು ಕೊಂದು ಪೊಲೀಸರಿಗೆ ಶರಣು

ಹೌದು ಭಾರತೀಯ ದಂಡ ಸಂಹಿತೆ ಕಲಂ 366ಕ್ಕೆ 5 ವರ್ಷ ಸಾದಾ ಸಜೆ, 10 ಸಾವಿರ ರು. ದಂಡ ದಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳ ಸಜೆ, 376 ಐಪಿಸಿಗೆ ಮತ್ತು ಫೋಕ್ಸೋ ಕಾಯ್ದೆ ಕಲಂ 4ರ ಅನ್ವಯ 20 ವರ್ಷ ಸಾದಾ ಸಜೆ 10 ಸಾವಿರ ರು. ದಂಡ ಹಾಗೂ ದಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳು ಸಜೆ ಮತ್ತು ಐಪಿಸಿ ಕಲಂ 376 ಮತ್ತು ಫೋಕ್ಸೊ ಕಾಯ್ದೆ ಕಲಂ 6ರ ಅನ್ವಯ 20 ವರ್ಷ ಕಠಿಣ ಶಿಕ್ಷೆ 10 ಸಾವಿರ ರು. ದಂಡ, ದಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳು ಸಜೆ, ಫೋಕ್ಸೊ ಕಾಯ್ದೆ ಕಲಂ 12ರ ಅನ್ವಯ ಒಂದು ವರ್ಷ ಸಾದಾ ಸಜೆ 5 ಸಾವಿರ ರು. ದಂಡ, ದಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳ ಸಜೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 9ರ ಅನ್ವಯ 2 ವರ್ಷ ಸಾದಾ ಸಜೆ ಶಿಕ್ಷೆ ವಿ​ಸಿ ತೀರ್ಪು ನೀಡಿದ್ದಾರೆ.

ಅಲ್ಲದೇ ಕಾನೂನು ಸೇವಾ ಪ್ರಾಧಿ​ಕಾರದಿಂದ ನೊಂದ ಬಾಲಕಿಗೆ ಪರಿಹಾರದ ರೂಪದಲ್ಲಿ 5 ಲಕ್ಷ ರು. ಹಣವನ್ನು ಒಂದು ತಿಂಗಳೊಳಗೆ ನೀಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ. ಯೋಗೇಶ್‌ ವಾದ ಮಂಡಿಸಿದ್ದರು.