ಚೀನಾ ಪ್ರಾಡಕ್ಟ್ ಬಾಯ್ಕಾಟ್ ಅಭಿಯಾನ ಆರಂಭವಾದ ಬೆನ್ನಲ್ಲೇ ಇದೀಗ ಚೀನಾ ವಸ್ತುಗಳಿಗೆ ಜಾಹೀರಾತು ನೀಡಬಾರದು ಎಂದು ಸಿಐಎಟಿ ಸಲೆಬ್ರಿಟಿಗಳಿಗೆ ಪತ್ರದ ಮೂಲಕ ತಿಳಿಸಿದೆ.

ಲಾಡಾಖ್‌ನ ಗಲ್ವಾನಾದಲ್ಲಿ ಚೀನಾ ಹಾಗೂ ಭಾರತದ ನಡುವಿನ ದಾಳಿ ಪ್ರತಿದಾಳಿ ಬೆಳವಣಿಗೆಯ ನಂತರ ಸಿಐಎಟಿ ಇಂತಹದೊಂದು ಸೂಚನೆ ನೀಡಿದೆ. 20 ಭಾರತೀಯ ಯೋಧರ ಹುತಾತ್ಮರಾದ ನಂತರ ಭಾರತೀಯ ವ್ಯಾಪಾರಿ ಒಕ್ಕೂಟ ಚೀನಾ ವಸ್ತುಗಳನ್ನು ಭಾರತದಿಂದ ನಿಷೇಧಿಸುವ ಅಭಿಯಾನವನ್ನೇ ಆರಂಭಿಸಿದೆ.

ಚೀನಾದ 371 ವಸ್ತುಗಳ ಆಮದಿಗೆ ನಿರ್ಬಂಧ

ಇದೀಗ ಇತ್ತೀಚಿನ ಬೆಳವಣಿಗೆಯಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಬಹಿರಂಗ ಪತ್ರ ಬರೆಯಲಾಗಿದ್ದು, ಚೈನೀಸ್ ಪ್ರಾಡಕ್ಟ್‌ಗಳಿಗೆ ಜಾಹೀರಾತು ನೀಡುವುದನ್ನು ನಿಲ್ಲಿಸುವಂತೆ ತಿಳಿಸಲಾಗಿದೆ. ಈ ಮೂಲಕ ಅಭಿಯಾನಕ್ಕೆ ಕೈ ಜೋಡಿಸುವಂತೆ ಸೂಚಿಸಲಾಗಿದೆ.

ಸಾರಾ ಅಲಿಖಾನ್, ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್, ಬಾದ್‌ಶಾ, ರಣಬೀರ್ ಕಫೂಋf, ರಣವೀರ್ ಸಿಂಗ್, ಸಲ್ಮಾನ್‌ ಖಾನ್, ಶ್ರದ್ಧಾ ಕಪೂರ್ ಸೇರಿದಂತೆ ಚೂನೀಸ್ ವಸ್ತುಗಳಿಗೆ ಜಾಹೀರಾತು ನೀಡುವ ಎಲ್ಲ ಸೆಲೆಬ್ರಿಟಿಗಳೂ ಜಾಹೀರಾತು ನೀಡದೆ ಅಭಿಯಾನದಲ್ಲಿ ಕೈಜೋಡಿಸಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಬೇಕೆಂದು ಕೇಳಿಕೊಂಡಿದ್ದಾರೆ. ಈ ಮೂಲಕ ಮಾಡುವುದರಿಂದ ಚೂನೀಸ್ ವಸ್ತುಗಳ ಆಮದು ಕಡಿಮೆಯಾಗುವುದಲ್ಲದೆ, ದೇಶೀಯ ವಸ್ತುಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದಿದ್ದಾರೆ.