Asianet Suvarna News Asianet Suvarna News

ಪಾದ್ರಿ ಸೂಚನೆ, ಪ್ರಧಾನಿ ಕರೆ; ಅನಿಲ್ ಆ್ಯಂಟಿನಿ ಬಿಜೆಪಿ ಸೇರಿದ ಹಿಂದಿನ ಕಾರಣ ಬಿಚ್ಚಿಟ್ಟ ತಾಯಿ!

ಕಾಂಗ್ರೆಸ್ ಹಿರಿಯ ನಾಯಕ ಎಕೆ ಆ್ಯಂಟಿನಿ ಪುತ್ರ ಅನಿಲ್ ಆ್ಯಂಟಿನಿ ಬಿಜೆಪಿ ಸೇರ್ಪಡೆ ಹಿಂದಿನ ಕಾರಣವನ್ನು ಕಾಯಿ ಎಲಿಜಬೆತ್ ಬಿಚ್ಚಿಟ್ಟಿದ್ದಾರೆ. ಈ ಕುರಿತು ಮಾತನಾಡಿರುವ ವಿಡಿಯೋ ಭಾರಿ ವೈರಲ್ ಆಗಿದೆ. ಬಿಜೆಪಿ ಸೇರುವ ಚರ್ಚೆ ಕುರಿತು ತಾಯಿಗೆ ಮಾತ್ರ ತಿಳಿಸಿದ್ದ ಆನಿಲ್ ಆ್ಯಂಟಿನಿಗೆ, ಚರ್ಚ್ ಪಾದ್ರಿ ಪಾರ್ಥಿಸಿ ಗ್ರೀನ್ ಸಿಗ್ನಿಲ್ ನೀಡಿದ್ದ ರೋಚಕ ಘಟನೆಯನ್ನು ಅನಿಲ್ ತಾಯಿ ಹೇಳಿದ್ದಾರೆ.
 

Church Priest green signal and PM call help Anil Antony to joins BJP mother Elizabeth reveals Reason ckm
Author
First Published Sep 23, 2023, 9:25 PM IST | Last Updated Sep 23, 2023, 10:36 PM IST

ತಿರುವನಂತಪುರಂ(ಸೆ.23) ಕಾಂಗ್ರೆಸ್ ಹಿರಿಯ ಹಾಗೂ ಅತ್ಯಂತ ನಿಷ್ಠೆಯ ಕೆಲವೇ ಕೆಲವು ನಾಯಕರಲ್ಲಿ ಎಕೆ ಆ್ಯಂಟಿನಿ ಒಬ್ಬರು. ಯುಪಿಎ ಅಧಿಕಾರದಲ್ಲಿ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದ ಎಕೆ ಆ್ಯಂಟಿನಿ ಕಾಂಗ್ರೆಸ್ ಪಕ್ಷದಲ್ಲಿ ಹಲವು ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದಾರೆ. ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಆ್ಯಂಟಿನಿ ಹಾಗೂ ಕುಟುಂಬ ಪಕ್ಕಾ ಕಾಂಗ್ರೆಸ್. ಆದರೆ ಇತ್ತೀಚೆಗೆ ಎಕೆ ಆ್ಯಂಟಿನಿ ಪುತ್ರ ಅನಿಲ್ ಆ್ಯಂಟಿನಿ ದಿಢೀರ್ ಬಿಜೆಪಿ ಸೇರ್ಪಡೆಗೊಳ್ಳುವ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದರು. ಈ ಕುರಿತು ಆ್ಯಂಟಿನಿ ಕುಟಂಬದಲ್ಲೂ ಕೋಲಾಹಲವೇ ಎದ್ದಿತ್ತು. ಆದರೆ ಪುತ್ರನ ಬಿಜೆಪಿ ಸೇರ್ಪಡೆಗೆ ಮೊದಲು ಗ್ರೀನ್ ಸಿಗ್ನಿಲ್ ನೀಡಿದ್ದೇ ತಾಯಿ ಎಲಿಜಬೆತ್. ಬಿಜೆಪಿ ಕಡು ವಿರೋಧಿಯಾಗಿದ್ದ ಎಲಿಜಬೆತ್‌ಗೆ ಚರ್ಚ್ ಪಾದ್ರಿ ನೀಡಿದ ಸೂಚನೆ ಹಾಗೂ ಅನಿಲ್ ಆ್ಯಂಟಿನಿಗೆ ಬಂದ ಪ್ರಧಾನಿ ಮೋದಿ ಕಾರ್ಯಾಲಯದ ಕರೆ ಕುರಿತು ರಹಸ್ಯ ಮಾಹಿತಿ ಬಹಿರಂಗವಾಗಿದೆ. ಎಲಿಜಬೆತ್ ಚರ್ಚ್‌ನಲ್ಲಿ ಮಾತನಾಡಿದ ವಿಡಿಯೋ ಭಾರಿ ವೈರಲ್ ಆಗಿದೆ.

ಎಕೆ ಆ್ಯಂಟಿನಿ ಕಾಂಗ್ರೆಸ್‌ಗೆ ನೀಡಿದ ಸೇವೆಯನ್ನು ನಾನು ಬಿಡಿಸಿ ಹೇಳಬೇಕಿಲ್ಲ. ನಮ್ಮ ಇಡೀ ಕುಟುಂಬ ಕಾಂಗ್ರೆಸ್ ಜೊತೆ ಮಿಳಿತಗೊಂಡ ಕುಟುಂಬ. ನಮ್ಮ ಯೋಚನೆ, ನಿರ್ಧಾರ, ನಡೆ ಎಲ್ಲವೂ ಕಾಂಗ್ರೆಸ್. ಪತಿ ಎಕೆ ಆ್ಯಂಟನಿ ರೀತಿ ನನ್ನ ಪುತ್ರ ಅನಿಲ್ ಆ್ಯಂಟನಿಗೆ ರಾಜಕೀಯ ಸೇರಲು ತುಡಿತ ಹೆಚ್ಚಾಗಿತ್ತು. ಕಾಂಗ್ರೆಸ್‌ನಲ್ಲಿ ಉತ್ತಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ನಿರ್ಧರಿಸಿದ್ದರು. ಆದರೆ ಕುಟುಂಬ ರಾಜಕಾರಣ ಅಂತ್ಯಗೊಳಿಸುವ ಕುರಿತು ಕಾಂಗ್ರೆಸ್ ಚಿಂತನ್ ಶಿವಿರ್‌ನಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಈ ನಿರ್ಣಯ ನನ್ನ ಪುತ್ರ ಅನಿಲ್ ಆ್ಯಂಟನಿಗೆ ತೀವ್ರ ಹಿನ್ನಡೆ ತಂದಿತ್ತು. ಅನಿಲ್ ಆ್ಯಂಟನಿಗೆ ಕಾಟಾಚಾರಕ್ಕೆ ಒಂದು ಜವಾಬ್ದಾರಿ ನೀಡಿತ್ತು. ಆದರೆ ಯಾವುದೇ ಭವಿಷ್ಯ ಇರಲಿಲ್ಲ. ರಾಜಕೀಯ ಸೇರುವ ಅನಿಲ್ ಆ್ಯಂಟಿನಿ ಕನಸಿಗೆ ಕಾಂಗ್ರೆಸ್ ಕೊಳ್ಳಿ ಇಟ್ಟಿತ್ತು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ನಾನು ದೇಶಕ್ಕಾಗಿ ಕೆಲಸ ಮಾಡ್ತೇನೆ, ಕುಟುಂಬಕ್ಕಾಗಿ ಅಲ್ಲ..' ಟ್ರೋಲ್‌ ಮಾಡಿದ ರಾಹುಲ್‌ ಗಾಂಧಿಗೆ ಅನಿಲ್‌ ಆಂಟನಿ ತಿರುಗೇಟು!

ಕಾಂಗ್ರೆಸ್ ನಿರ್ಣಯದಿಂದ ನನ್ನ ಇಬ್ಬರೂ ಮಕ್ಕಳಿಗೆ ರಾಜಕೀಯ ಪ್ರವೇಶಕ್ಕೆ ತಡೆಯಾಯಿತು. ಅನಿಲ್ ಆ್ಯಂಟಿನಿಗೆ 39 ವರ್ಷ ವಯಸ್ಸು. ರಾಜಕೀಯದಲ್ಲಿ ಉತ್ತಮ ಭವಿಷ್ಯ ರೂಪಿಸುವ ಸಂದರ್ಭದಲ್ಲಿ ತಡೆ ಎದುರಾಯಿತು. ಹೀಗಿರುವಾಗ ನನಗೆ ಕರೆ ಮಾಡಿದ ಅನಿಲ್ ಆ್ಯಂಟಿನಿ, ಅಮ್ಮ ನನಗೆ ಪ್ರಧಾನಿ ಕಾರ್ಯಾಲಯದಿಂದ ಕರೆ ಬಂದಿತ್ತು. ಬಿಜೆಪಿ ಸೇರಲು ಆಹ್ವಾನ ನೀಡಿದ್ದಾರೆ. ಬಿಜೆಪಿಯಲ್ಲಿ ಉತ್ತಮ ಅವಕಾಶ ಹಾಗೂ ರಾಜಕೀಯ ಭವಿಷ್ಯವಿದೆ ಎಂದು ಹೇಳಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದ. ನಮ್ಮ ಜೀವನವೇ ಕಾಂಗ್ರೆಸ್. ಇದರ ನಡುವೆ ಬಿಜೆಪಿ ಸೇರಿಕೊಳ್ಳುವುದು ಊಹಿಸಲು ಅಸಾಧ್ಯದ ಮಾತು. ಹೀಗಾಗಿ ತಕ್ಷಣ ನಾನು ಚರ್ಚ್‌ಗೆ ತೆರಳಿ ಪಾದ್ರಿ ಜೊಸೆಫ್ ಬಳಿ ಈ ನಿರ್ಧಾರದ ಕುರಿತು ಅಭಿಪ್ರಾಯ ಕೇಳಿದ್ದೆ.

ಈ ವೇಳೆ ಚರ್ಚ್ ಪಾದ್ರಿ ಜೊಸೆಫ್ ಪಾರ್ಥನೆ ಸಲ್ಲಿಸಿ ನನ್ನ ಬಳಿ ಹೇಳಿದರು. ನಿಮ್ಮ ಪುತ್ರನ ನಿರ್ಧಾರದಿಂದ ಹಿಂದೆ ಸರಿಯುವಂತೆ ನೀವು ಪ್ರಾರ್ಥಿಸಬೇಡಿ. ಪುತ್ರನಿಗೆ ಬಿಜೆಪಿಯಲ್ಲಿ ಉತ್ತಮ ಭವಿಷ್ಯ ಕಾಣಿಸುತ್ತಿದೆ. ಹೀಗಾಗಿ ಆತನ ನಿರ್ಧಾರ ಸರಿಯಾಗಿದೆ ಎಂದು ಜೊಸೆಫ್ ಪಾದ್ರಿ ನನಗೆ ಹೇಳಿದ್ದರು. ಅಲ್ಲವರೆಗೆ ಬಿಜೆಪಿಯನ್ನು ದ್ವೇಷಿಸುತ್ತಿದ್ದ ಹಾಗೂ ಬಿಜೆಪಿ ಎಂದರೆ ವೈರತ್ವ ತುಂಬಿಕೊಂಡಿದ್ದ ನನ್ನ ಮನಸ್ಸಿ ಶಾಂತಗೊಂಡಿತು. ಬಿಜೆಪಿ ವಿರುದ್ಧ ಇದ್ದ ನನ್ನ ಎಲ್ಲಾ ದ್ವೇಷಗಳು ಮಾಯವಾಯತು. ಬಿಜೆಪಿ ಮೇಲಿದ್ದ ಅಸಹ್ಯ, ದ್ವೇಷ ಎಲ್ಲವನ್ನೂ ಬದಲಾಯಿಸಿದ ದೇವರು ನನಗೆ ಹೊಸ ಹೃಹಯ ನೀಡಿದರು ಎಂದು ಅನಿಲ್ ಆ್ಯಂಟಿನಿ ತಾಯಿ ಎಲಿಜಬೆತ್ ಚರ್ಚ್‌ನಲ್ಲಿ ಹೇಳಿದ್ದಾರೆ. ಈ ಹೇಳಿಕೆ ಇದೀಗ ವೈರಲ್ ಆಗಿದೆ.

ಅನಿಲ್ ಆ್ಯಂಟಿನಿ ಬೆನ್ನಲ್ಲೇ ಮತ್ತಷ್ಟು ಕಾಂಗ್ರೆಸ್ ನಾಯಕರು ಬಿಜೆಪಿ ಸೇರ್ಪಡೆಗೆ ತಯಾರಿ!
 

Latest Videos
Follow Us:
Download App:
  • android
  • ios