Asianet Suvarna News Asianet Suvarna News

NSE Case: ನಿರೀಕ್ಷಣಾ ಜಾಮೀನು ಅರ್ಜಿ ವಜಾ: ಚಿತ್ರಾ ರಾಮಕೃಷ್ಣಗೆ ಬಂಧನ ಭೀತಿ

  • ಚಿತ್ರಾ ರಾಮಕೃಷ್ಣಗೆ ಬಂಧನ ಭೀತಿ
  • ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಹಗರಣ
  • ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್‌
Chitra Ramkrishna faces arrest in NSE case as her anticipatory bail gets rejected akb
Author
Bangalore, First Published Mar 5, 2022, 3:03 PM IST | Last Updated Mar 5, 2022, 3:10 PM IST

ನವದೆಹಲಿ(ಮಾ.5): ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮಾಜಿ ಎಂಡಿ ಮತ್ತು ಸಿಇಒ ಚಿತ್ರಾ ರಾಮಕೃಷ್ಣ ಅವರ ನಿರೀಕ್ಷಣಾ ಜಾಮೀನನ್ನು ಸಿಬಿಐ ವಿಶೇಷ ನ್ಯಾಯಾಲಯ  ತಿರಸ್ಕರಿಸಿದ್ದು, ಅವರಿಗೆ ಬಂಧನ ಭೀತಿ ಎದುರಾಗಿದೆ. ಎನ್‌ಎಸ್‌ಇ-ಹಿಮಾಲಯನ್ ಯೋಗಿ ಪ್ರಕರಣದಲ್ಲಿ ಅವರನ್ನು ಈಗ ಕೇಂದ್ರೀಯ ತನಿಖಾ ಸಂಸ್ಥೆ (CBI) ಬಂಧಿಸುವ ಸಾಧ್ಯತೆಯಿದೆ.

ಹಿಮಾಲಯದಲ್ಲಿ ವಾಸಿಸುವ ಯೋಗಿಯೊಬ್ಬರ ಜೊತೆ ಚಿತ್ರಾ ಅವರ ಸಂಪರ್ಕವನ್ನು ತನಿಖೆ ನಡೆಸುತ್ತಿರುವ ಸಿಬಿಐ, ಅವರ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಈ ಹಿಂದೆ ಎನ್‌ಎಸ್‌ಇಯ ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆಗಿದ್ದ ಆನಂದ್ ಸುಬ್ರಮಣಿಯನ್ (Anand Subramanian) ಅವರನ್ನು ಚೆನ್ನೈನಲ್ಲಿ ಬಂಧಿಸಿತ್ತು. ಬಳಿಕ ನ್ಯಾಯಾಲಯ ಸುಬ್ರಮಣಿಯನ್ ಅವರನ್ನು ಮಾರ್ಚ್ 6 ರವರೆಗೆ ಸಿಬಿಐ ಕಸ್ಟಡಿಗೆ ನೀಡಿತ್ತು.

Chitra Ramkrishna Case : ಯಾರೀಕೆ ಚಿತ್ರಾ ರಾಮಕೃಷ್ಣ ಅವರ ಹಿಂದಿದ್ದ ನಿಗೂಢ ಬಾಬಾ ಯಾರು?

 ಏಪ್ರಿಲ್ 2013 ರಲ್ಲಿ ಮುಖ್ಯ ಕಾರ್ಯತಂತ್ರದ ಸಲಹೆಗಾರರಾಗಿ  ಸೇರಿದ ಸುಬ್ರಮಣಿಯನ್ ಅವರು, 2015-16ರಲ್ಲಿ ಎನ್‌ಎಸ್‌ಇಯ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಚಿತ್ರಾ ರಾಮಕೃಷ್ಣ ಅವರ ಸಲಹೆಗಾರರಾಗಿದ್ದರು. ಸುಬ್ರಮಣಿಯನ್ ಅವರನ್ನು ಎಕ್ಸ್‌ಚೇಂಜ್‌ನ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಎಂಡಿ ಸಲಹೆಗಾರರಾಗಿ ನೇಮಿಸಲು ಚಿತ್ರಾ ಅವರು  ಹಿಮಾಲಯ ಶ್ರೇಣಿಗಳಲ್ಲಿ ವಾಸಿಸುವ ನಿಗೂಢ ಯೋಗಿಯಿಂದ ಮಾರ್ಗದರ್ಶನ  ಪಡೆದರು ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದ (ಸೆಬಿ) ಹೇಳಿದ ನಂತರ  ಚಿತ್ರಾ ರಾಮಕೃಷ್ಣ ರಾಷ್ಟ್ರದ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿದ್ದರು.

ಷೇರುಪೇಟೆಯ ಯಾವುದೇ ಹೆಚ್ಚಿನ ಅನುಭವ ಇಲ್ಲದೇ ಇದ್ದರೂ ಸುಬ್ರಮಣಿಯನ್‌ ಅವರನ್ನು ಚಿತ್ರಾ ಅವರು ಹಿರಿಯ ಹುದ್ದೆಗೆ ನೇಮಕ ಮಾಡಿಕೊಂಡಿದ್ದರು. ಜೊತೆಗೆ ಅವರಿಗೆ ಹಲವು ಬಾರಿ ಪದೋನ್ನತಿ ನೀಡಲಾಗಿತ್ತು. ವಿನಾಕಾರಣ ವೇತನ ಹೆಚ್ಚಳ ಮಾಡಲಾಗಿತ್ತು. ಜೊತೆಗೆ ಸುಬ್ರಮಣಿಯನ್‌ ಉನ್ನತ ಹುದ್ದೆ ವಹಿಸಿಕೊಂಡ ಅವಧಿಯಲ್ಲಿ ಎನ್‌ಎಸ್‌ಇದಲ್ಲಿ ಹಲವು ವಂಚನೆಗಳು ನಡೆದಿದ್ದವು.

ಈ ಕುರಿತು ಸುದೀರ್ಘ ತನಿಖೆ ನಡೆಸಿದ್ದ ಸೆಬಿ, ಇತ್ತೀಚೆಗೆ ಚಿತ್ರಾ, ಆನಂದ್‌ ಸೇರಿ ಹಲವರನ್ನು ಪ್ರಕರಣದಲ್ಲಿ ದೋಷಿ ಎಂದು ಹೇಳಿತ್ತು. ಅದರ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿತ್ತು. ಪ್ರಕರಣದ ತನಿಖೆ ವೇಳೆ ಹಿಮಾಲಯದಲ್ಲಿರುವ ಯೋಗಿಯ ಆಣತಿಯಂತೆ ಷೇರುಪೇಟೆ ನಡೆಸುತ್ತಿದ್ದ, ಹಲವು ನೇಮಕಾತಿ ಮಾಡಿಕೊಂಡಿದ್ದ ವಿಷಯವನ್ನು ಚಿತ್ರಾ ಒಪ್ಪಿಕೊಂಡಿದ್ದಾರೆ ಎಂದು ಸೆಬಿ ಹೇಳಿತ್ತು. ಆದರೆ ಯೋಗಿ ಯಾವುದೇ ವ್ಯಕ್ತಿಯಲ್ಲ. ಅದೊಂದು ದೈವಿಕ ಶಕ್ತಿ ಎಂದು ಚಿತ್ರಾ ಹೇಳಿದ್ದರೂ ಎಂದೂ ಹೇಳಿತ್ತು. ಆದರೆ ಇದೀಗ ಸ್ವತಃ ಸುಬ್ರಮಣಿಯನ್‌ ಅವರೇ ಈ ಬಾಬಾ ಎಂದು ಸಿಬಿಐ ಶಂಕೆ ವ್ಯಕ್ತಪಡಿಸಿದೆ.

Chitra Ramkrishna Case: ಷೇರುಪೇಟೆಯ ಹಿಮಾಲಯ ಯೋಗಿ ರಹಸ್ಯ ಬಯಲು!
 

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (National Stock Exchange) ಅಥವಾ ಜನಪ್ರಿಯವಾಗಿ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಎಂದು ಕರೆಯಲ್ಪಡುವ ಎನ್ಎಸ್ಇಯಲ್ಲಿ ಇತಿಹಾಸದ ಈವರೆಗಿನ ಅತೀದೊಡ್ಡ ಹಗರಣ ಇದು ಎಂದು ಹೇಳಲಾಗುತ್ತಿದೆ. ಎನ್ಎಸ್ಇ ಮಾಜಿ ಮುಖ್ಯಸ್ಥೆ ಹಾಗೂ ಸಿಇಒ ಚಿತ್ರಾ ರಾಮಕೃಷ್ಣ(Chitra Ramkrishna) ನೇರವಾಗಿ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಅವರೊಂದಿಗೆ ಇನ್ನೂ ಕೆಲ ಅಧಿಕಾರಿಗಳು ಇದರ ಹಿಂದಿದ್ದಿದ್ದಾರೆ ಎನ್ನಲಾಗಿದೆ. ಈ ಎಲ್ಲರ ವಿರುದ್ಧ ಭಾರತದ ಮಾರುಕಟ್ಟೆ ನಿಯಂತ್ರಕರಾದ ಸೆಕ್ಯುರಿಟಿ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (Securities Exchange Board of India) ಅಥವಾ ಸೆಬಿ 193 ಪುಟಗಳ ದೊಡ್ಡ ವರದಿಯನ್ನು ನೀಡಿದ್ದು, ಅದರ ಆಧಾರದಲ್ಲಿ ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ. 

Latest Videos
Follow Us:
Download App:
  • android
  • ios