Asianet Suvarna News Asianet Suvarna News

NewsClick Row: ನ್ಯೂಸ್‌ಕ್ಲಿಕ್‌ ಮಾಧ್ಯಮದ ಟ್ವಿಟರ್‌ ಖಾತೆ ಅಮಾನತು!

ಚೀನಾದಿಂದ ಹಣಸಹಾಯ ಪಡೆದುಕೊಂಡು ಭಾರತ ವಿರೋಧಿ ಸುದ್ದಿಗಳನ್ನು ಪ್ರಕಟಿಸುತ್ತಿದ್ದ ಆರೋಪದ ಮೇಲೆ ದೆಹಲಿ ಮೂಲದ ಆನ್‌ಲೈನ್‌ ಮಾಧ್ಯಮ ನ್ಯೂಸ್‌ ಕ್ಲಿಕ್‌ನ ಟ್ವಿಟರ್‌ ಖಾತೆಯನ್ನು ಶನಿವಾರ ಅಮಾನತು ಮಾಡಲಾಗಿದೆ.
 

Chinese propaganda case Twitter account of NewsClick suspended san
Author
First Published Aug 12, 2023, 9:11 PM IST | Last Updated Aug 12, 2023, 9:43 PM IST

ನವದೆಹಲಿ (ಆ.12): ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್ (ಹಿಂದೆ ಟ್ವಿಟರ್ ಆಗಿತ್ತು) ಆನ್‌ಲೈನ್ ನ್ಯೂಸ್ ಪೋರ್ಟಲ್ ನ್ಯೂಸ್‌ಕ್ಲಿಕ್ ಖಾತೆಯನ್ನು ಭಾರತದಲ್ಲಿ ಅಮಾನತು ಮಾಡಿದೆ. ಚೀನಾದಿಂದ ಫಂಡ್‌ ಪಡೆದು ಭಾರತದಲ್ಲಿ ಚೀನಾದ ಕುರಿತಾಗಿ ಪ್ರಚಾರ ಮಾಡಿದ ಆರೋಪವನ್ನು ಎದುರುಸಿದ ಕೆಲವೇ ದಿನಗಳಲ್ಲಿ ಟ್ವಿಟರ್‌ ಈ ಕ್ರಮ ಕೈಗೊಂಡಿದೆ. ಶನಿವಾರದ ವೇಳೆಗೆ ನ್ಯೂಸ್‌ ಕ್ಲಿನ್‌ ಮಾಧ್ಯಮದ ಟ್ವಿಟರ್‌ ಖಾತೆಯು, 'ಖಾತೆಯನ್ನು ಅಮಾನತು ಮಾಡಲಾಗಿದೆ.. ಟ್ವಿಟರ್‌ ನಿಯಮಗಳನ್ನು ಉಲ್ಲಂಘಿಸುವ ಖಾತೆಗಳನ್ನು ಟ್ವಿಟರ್‌ ಅಮಾನತು ಮಾಡುತ್ತದೆ' ಎನ್ನುವ ಸಂದೇಶವನ್ನು ಪ್ರಕಟಿಸಿದೆ. ಇತ್ತೀಚೆಗೆ ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌ ಬೃಹತ್‌ ತನಿಖಾ ವರದಿಯನ್ನು ಪ್ರಕಟಿಸಿತ್ತು. ಅದರಲ್ಲಿ ಅಮೆರಿಕ ಮೂಲಕ ಬಿಲಿಯನೇರ್‌ ನೆವಿಲ್ಲೆ ರಾಯ್‌ ಸಿಂಘಮ್ ಮೂಲಕ ಚೀನಾ ತನ್ನ ಜಾಗತಿಕ ನೆಟ್‌ವರ್ಕ್‌ಅನ್ನು ಹೇಗೆ ಕಟ್ಟಿದೆ ಎನ್ನವುದನ್ನು ವಿವರಿಸಲಾಗಿತ್ತು. ಇದೇ ವೇಳೆ ಈ ಬಿಲಿಯನೇರ್‌ ಭಾರತದ ನ್ಯೂಸ್‌ಕ್ಲಿಕ್‌ ಮಾಧ್ಯಮದ ಜೊತೆ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಲಾಗಿತ್ತು. ರಾಯ್‌ ಸಿಂಘಮ್‌, ಚೀನಾದ ಸರ್ಕಾರದ ಮೀಡಿಯಾ ಮಷಿನ್‌ ಜೊತೆ ನಿಕಟವಾದ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಲಾಗಿತ್ತು.

ನ್ಯೂಸ್‌ಕ್ಲಿಕ್‌ಗೆ ಹಾಕಿದ ಹಣವನ್ನು ಭಾರತ ವಿರೋಧಿ ವಾತಾವರಣವನ್ನು ಸೃಷ್ಟಿಸಲು ಬಳಸಲಾಗಿದೆ ಎಂದು ಬಿಜೆಪಿ ಆರೋಪ ಮಾಡಿದ ಬೆನ್ನಲ್ಲಿಯೇ ಈ ವಿಷಯವು ದೇಶದಲ್ಲಿ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಎಡರಂಗದ ನಾಯಕ ಪ್ರಕಾಶ್ ಕಾರಟ್ ಮತ್ತು ಸಿಂಘಂ ನಡುವಿನ ಇ-ಮೇಲ್ ವಿನಿಮಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿದ್ದಾರೆ ಎಂದು ಸಂಸತ್ತಿನಲ್ಲಿ ಹೇಳಿದ್ದಾರೆ.

 

NewsClick Row: ಭಾರತದ ವೆಬ್‌ಸೈಟ್‌ಗೆ ಚೀನಾ ಲಿಂಕ್‌, ದೇಶದ್ರೋಹಿಗಳ ಜತೆ ಕೈ ನಂಟು: ಸಂಸತ್ತಲ್ಲಿ ಬಿಜೆಪಿ ಆರೋಪ

ನ್ಯೂಸ್‌ಕ್ಲಿಕ್ ವಿರುದ್ಧದ ತನ್ನ ಕ್ರಿಮಿನಲ್ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು, ಕಂಪನಿಗೆ (PPK Newsclick Studio Pvt. Ltd.) ಸಿಂಘಮ್‌ಗೆ ಸಂಬಂಧಿಸಿರುವ ಘಟಕಗಳಿಂದ 86 ಕೋಟಿ ರೂಪಾಯಿಗೂ ಹೆಚ್ಚು ವಿದೇಶಿ ನಿಧಿಯ ವಂಚನೆಯನ್ನು ತನಿಖೆ ನಡೆಸುತ್ತಿದೆ ಮತ್ತು ಶೀಘ್ರದಲ್ಲೇ ಈ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸುವ ನಿರೀಕ್ಷೆಯಿದೆ.

ಭಾರತದಲ್ಲಿ ಚೀನಾ ಕುರಿತಾಗಿ ಪ್ರಚಾರ, ಅಮೆರಿಕದ ಕೋಟ್ಯಧಿಪತಿಯ ಮಹಾಸಂಚು

ಆನ್‌ಲೈನ್ ನ್ಯೂಸ್ ಪೋರ್ಟಲ್ ನ್ಯೂಸ್‌ಕ್ಲಿಕ್ ಮತ್ತು ಅದರ ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರಿಗೆ ಬಲವಂತದ ಕ್ರಮದಿಂದ ಮಧ್ಯಂತರ ರಕ್ಷಣೆ ನೀಡಿದ್ದ ತನ್ನ ಆದೇಶವನ್ನು ತೆರವು ಮಾಡುವಂತೆ ಇಡಿ ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದೆ.

Latest Videos
Follow Us:
Download App:
  • android
  • ios