ಲಂಡನ್‌(ಜೂ.16): ಗಡಿಯಲ್ಲಿ ಚೀನಾ ಹಾಗೂ ಪಾಕಿಸ್ತಾನಗಳು ಪದೇ ಪದೇ ಕ್ಯಾತೆ ತೆಗೆಯುತ್ತಿರುವ ನಡುವೆಯೇ, ಆ ಎರಡೂ ದೇಶಗಳಿಗೆ ಹೋಲಿಸಿದರೆ ಭಾರತದ ಬಳಿ ಅಣ್ವಸ್ತ್ರಗಳ ಸಂಖ್ಯೆ ಕಡಿಮೆ ಇದೆ ಎಂಬ ಕಳವಳಕಾರಿ ವರದಿಯೊಂದು ಬಿಡುಗಡೆಯಾಗಿದೆ.

ಸ್ವೀಡನ್‌ನ ಚಿಂತಕರ ಚಾವಡಿಯಾಗಿರುವ ‘ಸ್ಟಾಕ್‌ಹೋಮ್‌ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ’ಯ ವರದಿ ಪ್ರಕಾರ, ಕಳೆದೊಂದು ವರ್ಷದಲ್ಲಿ ಭಾರತದ ಬತ್ತಳಿಕೆಗೆ 10 ಅಣ್ವಸ್ತ್ರಗಳು ಸೇರ್ಪಡೆಯಾಗಿವೆ. ಈ ಮೂಲಕ ಭಾರತದ ಬಳಿ ಇರುವ ಅಣ್ವಸ್ತ್ರಗಳ ಸಂಖ್ಯೆ 150ಕ್ಕೇರಿಕೆಯಾಗಿದೆ. ಆದರೆ 320 ಅಣ್ವಸ್ತ್ರ ಸಿಡಿತಲೆ ಹೊಂದಿರುವ ಚೀನಾ, 160 ಅಣ್ವಸ್ತ್ರ ಸಿಡಿತಲೆ ಹೊಂದಿರುವ ಪಾಕಿಸ್ತಾನಕ್ಕೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ ಇದೆ ಎಂದು ಸೋಮವಾರ ಬಿಡುಗಡೆಯಾಗಿರುವ ವರದಿ ವಿವರಿಸಿದೆ. ಅಮೆರಿಕ 5800 ಸಿಡಿತಲೆ ಹೊಂದಿದ್ದರೆ, ರಷ್ಯಾ 6375 ಹಾಗೂ ಬ್ರಿಟನ್‌ 215 ಅಣ್ವಸ್ತ್ರಗಳನ್ನು ಹೊಂದಿದೆ ಎಂದು ವರದಿ ತಿಳಿಸಿದೆ.

ಬದಲಾಗಲಿದೆ ನ್ಯೂಕ್ಲಿಯರ್ ನೋ ಫಸ್ಟ್ ಪಾಲಿಸಿ?:ರಾಜನಾಥ್ ಹೇಳಿಕೆಗೆ ಪಾಕ್ ಕಸಿವಿಸಿ!

ಯಾರ ಬಳಿ ಎಷ್ಟು ಅಣ್ವಸ್ತ್ರ?

ದೇಶ| 2019| 2020

ಚೀನಾ| 290| 320

ಪಾಕಿಸ್ತಾನ| 150-160| 160

ಭಾರತ| 130-140| 150