ನವದೆಹಲಿ(ಜು.31): ಭಾರತ ಹಾಗೂ ಚೀನಾ ನಡುವೆ 50 ವರ್ಷಗಳಲ್ಲೇ ಮೊದಲ ಬಾರಿಗೆ ಗಡಿಯಲ್ಲಿ ನೆತ್ತರು ಹರಿಯಲು ಕಾರಣವಾದ ಪೂರ್ವ ಲಡಾಖ್‌ ಸಂಘರ್ಷ ಇನ್ನೂ ಬಗೆಹರಿದಂತೆ ಕಾಣುತ್ತಿಲ್ಲ. ಗಡಿಯ ಬಹುತೇಕ ಕಡೆಗಳಿಂದ ಸೇನಾ ವಾಪಸಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಚೀನಾ ನೀಡಿದ್ದ ಹೇಳಿಕೆಯನ್ನು ಭಾರತ ಅತ್ಯಂತ ಸ್ಪಷ್ಟವಾಗಿ ಅಲ್ಲಗಳೆದಿದೆ.

ಚಳಿಗಾಲದಲ್ಲಿ ದಾಳಿ ನಡೆಸಲು ಚೀನಾ ಸಂಚು..? ಫ್ರಾನ್ಸ್‌ನಿಂದ ಹ್ಯಾಮರ್‌ ಕ್ಷಿಪಣಿ ಖರೀದಿಸಿದ ಭಾರತ

ಸೇನಾ ವಾಪಸಾತಿ ವಿಚಾರದಲ್ಲಿ ಒಂದಷ್ಟುಪ್ರಗತಿಯಾಗಿರುವುದೇನೋ ನಿಜ. ಆದರೆ ಅದು ಸಂಪೂರ್ಣವಾಗಿ ಮುಗಿದಿಲ್ಲ. ಈ ಪ್ರಕ್ರಿಯೆ ಮುಂದುವರಿಸಿಕೊಂಡು ಹೋಗಲು ಸದ್ಯದಲ್ಲೇ ಉಭಯ ದೇಶಗಳ ಮಿಲಿಟರಿ ಹಿರಿಯ ಕಮಾಂಡರ್‌ಗಳು ಸಭೆ ಸೇರಲಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅನುರಾಗ ಶ್ರೀವಾಸ್ತವ ತಿಳಿಸಿದ್ದಾರೆ.

ಗಡಿಯಿಂದ ಹಿಂದೆ ಸರಿದಿಲ್ಲ ಚೀನಾ, ಲಡಾಖ್ ಪ್ರಾಂತ್ಯದಲ್ಲಿ 40 ಸಾವಿರ ಸೈನಿಕರ ನಿಯೋಜನೆ!

ಗಡಿಯಿಂದ ಚೀನಾ ಸಂಪೂರ್ಣವಾಗಿ ಹಿಂದೆ ಸರಿಯಬೇಕು ಎಂದು ಭಾರತ ನಿರೀಕ್ಷಿಸುತ್ತದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ನಡುವಣ ಮಾತುಕತೆಯಂತೆ ಗಡಿಯಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಮರುಸ್ಥಾಪಿಸಬೇಕಾಗಿದೆ ಎಂದು ಹೇಳಿದ್ದಾರೆ.