Asianet Suvarna News Asianet Suvarna News

ಎಂದಿಗೂ ಈ ರೀತಿ ತಾಯಿ ಜೊತೆ ಮಾಡಬೇಡಿ; ಮಕ್ಕಳಿಗೆ ನೆಟ್ಟಿಗರಿಂದ ಕ್ಲಾಸ್

ಆ ಕ್ಷಣ ತಾಯಿ ಕಿರುಚಾಟ ಕೇಳಿದ್ರೆ ಕಲ್ಲಿನ ಹೃದಯದಲ್ಲಿಯೂ ಕಣ್ಣೀರು ಬರುತ್ತದೆ ಎಂದು ಭಾವುಕರಾಗಿದ್ದಾರೆ. 

children make prank with mother video  viral mrq
Author
First Published Jul 11, 2024, 5:46 PM IST

ಬೆಂಗಳೂರು: ಅಮ್ಮ ಅಂದ್ರೆ ಕಣ್ಣಿಗೆ ಕಾಣುವ ದೇವರು ಅಂತಾರೆ. ಕೆಲ ಮಕ್ಕಳು ತಾಯಿ ಜೊತೆ ನಡೆದುಕೊಳ್ಳೋದನ್ನು ನೋಡಿದ್ರೆ ಕೆಂಡದಂಥ ಕೋಪ ಬರುತ್ತದೆ. ಇನ್ನು ಕೆಲ ಮಕ್ಕಳು ವಯಸ್ಸಾದ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಕೈ ತೊಳೆದುಕೊಳ್ಳುತ್ತಾರೆ. ಇಂತಹ ಘಟನೆಗಳು ನಮ್ಮ ಸುತ್ತಮುತ್ತವೇ ನಡೆಯುತ್ತಿರುತ್ತವೆ. ಆದ್ರೆ ಕೆಲವೊಮ್ಮೆ ಏನೂ ಮಾಡದ ಸ್ಥಿತಿಯಲ್ಲಿ ನಾವಿರುತ್ತವೆ. ಇದು ಸೋಶಿಯಲ್ ಮೀಡಿಯಾ ದುನಿಯಾ. ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಕ್ಷಣಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಕಾಯಿಲೆ ಬಂದಾಗಿದೆ. ಖಾಸಗಿ ಜೀವನ ಅನ್ನೋದೇ ಇಂದಿನ ಯುವ ಸಮುದಾಯದವರಲ್ಲಿ ಉಳಿಯುತ್ತಿಲ್ಲ. ಆ ಸಮಯಕ್ಕೆ ಸುಂದರ ಕ್ಷಣ ಅನುಭವಿಸುವ ಬದಲು ವಿಡಿಯೋ ಮಾಡುತ್ತಾ ನಿಲ್ಲುತ್ತಾರೆ. 

ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಕ್ಕಳು ತಾಯಿಗೆ ಸರ್ಪೈಸ್ ನೀಡಿದ ನಡೆ ಕಂಡು ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಎಂದಿಗೂ ಮತ್ತೊಮ್ಮೆ ಈ ರೀತಿ ತಾಯಿಯ ಮನಸ್ಸಿಗೆ ನೋವುಂಟು ಮಾಡಬೇಡಿ ಎಂದು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡುವವರು ಸಹ ಈ ರೀತಿ ಸರ್ಪ್ರೈಸ್ ಕೊಡಬೇಡಿ ಎಂದು ಹೇಳಲಾಗಿದೆ. ಆ ಕ್ಷಣ ತಾಯಿ ಕಿರುಚಾಟ ಕೇಳಿದ್ರೆ ಕಲ್ಲಿನ ಹೃದಯದಲ್ಲಿಯೂ ಕಣ್ಣೀರು ಬರುತ್ತದೆ ಎಂದು ಭಾವುಕರಾಗಿದ್ದಾರೆ. 

ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ? 

ಮಲಗಿರುವ ತಾಯಿ ಬಳಿ ಬರೋ ಇಬ್ಬರು ಯುವಕರು ಜೋರು ಧ್ವನಿ ಮಾಡುತ್ತಾ, ಎರಡು ಕಡೆಯಿಂದ ಹೊರಗೆ ಕರೆದುಕೊಂಡು ಬರಲು ಪ್ರಯತ್ನಿಸುತ್ತಾರೆ. ನಿದ್ದೆಯ ಮಂಪರಿನಲ್ಲಿದ್ದ ತಾಯಿ ತನ್ನ ಸುತ್ತ ಏನೋ ನಡೆಯುತ್ತಿದೆ ಎಂದು ತಿಳಿದು ಜೋರಾಗಿ ಕೂಗುತ್ತಾ ಅಳಲು ಶುರು ಮಾಡುತ್ತಾರೆ. ಮಲಗಿದ್ದ ತಾಯಿಯನ್ನು ಬಲವಂತವಾಗಿ ಎಳೆದುಕೊಂಡು ಬೆಡ್‌ರೂಮ್‌ನಿಂದ ಹಾಲ್‌ವರೆಗೂ ಕರೆದುಕೊಂಡು ಬರುತ್ತಾರೆ. ಹಾಲ್‌ಗೆ ಬರುತ್ತಿದ್ದಂತೆ ಮಮ್ಮಿ...ನಿನ್ನ ಬರ್ತ್ ಡೇ ಅಂತ ಮಗ ಹೇಳುತ್ತಾನೆ. ಒಂದು ಕ್ಷಣ ಶಾಕ್ ಆಗುವ ತಾಯಿ ಮಗನಿಗೆ ಏಟು ಕೊಡುತ್ತಾರೆ. ಮಗನ ಜೊತೆಯಲ್ಲಿದ್ದ ಇನ್ನೋರ್ವ ಯುವಕನಿಗೆ ಏಟು ಬೀಳುತ್ತದೆ. 

ಡೆಲಿವರಿ ಬಾಯ್ ಕಣ್ಣೀರಿಗೆ ಕರಗಿದ ಕಟುಕರ ಮನಸ್ಸು, ದೋಚಿದ ವಸ್ತುಗಳಿಂದ ಮಾಡಿದ್ದೇನು?

ಲೇ ಜೀವ ಹೋಗಿ ವಾಪಸ್ ಬಂತಲ್ಲರೋ

ಇಷ್ಟಕ್ಕೆ ಸುಮ್ಮನಾಗದ ತಾಯಿ, ಬರ್ತ್‌ ಡೇ ಕೇಕ್ ತೆಗೆದುಕೊಂಡು ಮುಖಕ್ಕೆ ಮೆತ್ತುವ ಮೂಲಕ ಆಕ್ರೋಶ ಹೊರ ಹಾಕುತ್ತಾರೆ. ಈ ನಡುವೆ ಇವರೆಲ್ಲರ ಹಿಂದೆ ನಿಂತಿದ್ದ ಮಹಿಳೆಯೊಬ್ಬರು ಚಾಕು ನೀಡಿ ಕೇಕ್ ಕತ್ತರಿಸುವಂತೆ ಹೇಳುವದನ್ನು ಸಹ ವಿಡಿಯೋದಲ್ಲಿ ನೋಡಬಹುದು. ಈ ಎಲ್ಲಾ ದೃಶ್ಯಗಳನ್ನು ಮನೆಯ ಸದಸ್ಯರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾರೆ. @sarvamshivamaya ಹೆಸರಿನ ಎಕ್ಸ್ ಖಾತೆಯಲ್ಲಿ ಲೇ ಜೀವ ಹೋಗಿ ವಾಪಸ್ ಬಂತಲ್ಲರೋ.. ಆ ತಾಯಿದು ಎಂಬ ಸಾಲು ಬರೆದು ವಿಡಿಯೋ ಪೋಸ್ಟ್ ಮಾಡಿದ್ದಾರೆ. 

ಇದು ರಾಕ್ಷಸಿಯ ಆಚರಣೆ

ಹಲವರು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡು, ತಾಯಿಯ ಬರ್ತ್ ಡೇ ಯಾರಾದರೂ ಈ ರೀತಿ ಆಚರಣೆ ಮಾಡ್ತಾರಾ? ಸ್ವಲ್ಪವೂ ಬುದ್ಧಿ ಇಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ. ತಾಯಿ ಹುಟ್ಟಿದ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು. ಈ ರೀತಿ ರಾಕ್ಷಸರ ರೀತಿಯಾಗಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಧ್ಯರಾತ್ರಿ ಕೇಕ್ ತಂದು ಆಚರಣೆ ಮಾಡೋದರಲ್ಲಿ ಯಾವುದೇ ಅಭ್ಯಂತರವಿಲ್ಲ. ಮಕ್ಕಳು ಆಚರಣೆ ಮಾಡಿದ ರೀತಿ ಖಂಡನೀಯವಾದ್ದದ್ದು ಎಂದು ಕಮೆಂಟ್ ಮಾಡಲಾಗಿದೆ. ಆದರೆ ಈ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ.

ಇಂಥಾ ಮಕ್ಕಳು ಬೇಕಾ? ಅಪ್ಪ ಐ ಫೋನ್ ಕೊಡ್ಸಿಲ್ಲ ಅಂತ 18ರ ಬಾಲಕ ಆತ್ಮಹತ್ಯೆ

Latest Videos
Follow Us:
Download App:
  • android
  • ios