ಬಿಹಾರ: ನೂತನ ಸೇನಾ ನೇಮಕಾತಿ ಅಗ್ನಿಪಥ್‌ಗೆ (Agnipath)ಸಂಬಂಧಿಸಿದಂತೆ ದೇಶಾದ್ಯಂತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಹಲವು ಬಸ್ ರೈಲುಗಳು ಬೆಂಕಿಯಾಗುತ್ತಿವೆ. ಪ್ರತಿಭಟನೆ ಉಗ್ರ ಸ್ವರೂಪ ಪಡೆಯುತ್ತಿದ್ದು, ದೇಶದ ಹಲವೆಡೆ ರಸ್ತೆ, ರೈಲು, ತಡೆದು ಯುವ ಸಮೂಹ ಪ್ರತಿಭಟನೆ ನಡೆಸುತ್ತಿದೆ.

ಬಿಹಾರ: ನೂತನ ಸೇನಾ ನೇಮಕಾತಿ ಅಗ್ನಿಪಥ್‌ಗೆ (Agnipath)ಸಂಬಂಧಿಸಿದಂತೆ ದೇಶಾದ್ಯಂತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಹಲವು ಬಸ್ ರೈಲುಗಳು ಬೆಂಕಿಯಾಗುತ್ತಿವೆ. ಪ್ರತಿಭಟನೆ ಉಗ್ರ ಸ್ವರೂಪ ಪಡೆಯುತ್ತಿದ್ದು, ದೇಶದ ಹಲವೆಡೆ ರಸ್ತೆ, ರೈಲು, ತಡೆದು ಯುವ ಸಮೂಹ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಬಿಹಾರದ ದರ್ಭಾಂಗ್‌ನಲ್ಲಿ (Darbhanga) ಶಾಲಾ ವಾಹನವೊಂದು ಈ ಪ್ರತಿಭಟನೆಯ ಮಧ್ಯೆ ಸಿಲುಕಿದೆ. ಶಾಲಾ ವಾಹನದಲ್ಲಿರುವ ಬಾಲಕನೋರ್ವ ಭಯಗೊಂಡು ಅಳುತ್ತಿರುವುದು ವಿಡಿಯೋದಲ್ಲಿ ಸೆರೆ ಅಗಿದೆ. ಸುದ್ದಿ ಸಂಸ್ಥೆ ಎಎನ್‌ಐ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಬಸ್ಸಿನ ಒಳಗಿನಿಂದ ಚಿತ್ರೀಕರಿಸಲಾದ ವೀಡಿಯೊದಲ್ಲಿ ಶಾಲಾ ಸಮವಸ್ತ್ರದಲ್ಲಿರುವ ಮಕ್ಕಳು ಹೊರಗಿನ ಪ್ರತಿಭಟನೆಗಳನ್ನು ಕಿಟಕಿಗಳ ಮೂಲಕ ಇಣುಕಿ ನೋಡುವುದನ್ನು ತೋರಿಸುತ್ತದೆ. ಅಲ್ಲದೇ ಓರ್ವ ಬಾಲಕ ಅಳುತ್ತಿರುವುದು ಕಾಣುತ್ತಿದೆ. ಈ ವೇಳೆ ವೀಡಿಯೊ ಚಿತ್ರೀಕರಿಸಿದ ವ್ಯಕ್ತಿಯು ಏಕೆ ಹೆದರುತ್ತಿದ್ದೀರಾ, ಭಯವಾಗುತ್ತಿದೆಯೇ ಪದೇ ಪದೇ ಮಕ್ಕಳಲ್ಲಿ ಕೇಳುತ್ತಿದ್ದಾರೆ. ಈ ವೇಳೆ ಬಾಲಕನೋರ್ವ ಅಳುತ್ತಿರುವುದನ್ನು ಕಾಣಬಹುದು. ನಂತರ ಪೊಲೀಸರ ಮಧ್ಯಪ್ರವೇಶದಿಂದ ಪ್ರತಿಭಟನಾಕಾರರು ದೂರ ಚದುರಿದ್ದು, ಬಸ್ ಅಲ್ಲಿಂದ ಹೊರಬರುವಲ್ಲಿ ಯಶಸ್ವಿಯಾಗಿದೆ. 

Scroll to load tweet…

ಇನ್ನೊಂದೆಡೆ ನಿನ್ನೆ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯಾದಲ್ಲಿ (Bettiah) ಬಿಹಾರ ಉಪ ಮುಖ್ಯಮಂತ್ರಿ ರೇಣು ದೇವಿ (Renu Devi) ಅವರ ಮನೆ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದರು. ಸೇನೆಯ ಹೊಸ ನೇಮಕಾತಿ ಯೋಜನೆಯ ವಿರುದ್ಧ ದೇಶದಲ್ಲಿ ಪ್ರತಿಭಟನೆಗಳು ಬೆಂಕಿ ಬಿರುಗಾಳಿ ಎಬ್ಬಿಸಿವೆ. ಇಂತಹ ಹಿಂಸಾಚಾರವು ಸಮಾಜಕ್ಕೆ ತುಂಬಾ ಅಪಾಯಕಾರಿ. ಇದರಿಂದ ಸಮಾಜಕ್ಕೆ ಭಾರಿ ನಷ್ಟವಾಗಿದೆ ಎಂಬುದನ್ನು ಪ್ರತಿಭಟನಾಕಾರರು ನೆನಪಿಟ್ಟುಕೊಳ್ಳಬೇಕು ಎಂದು ತಮ್ಮ ನಿವಾಸದ ಮೇಲೆ ನಡೆಸಿದ ದಾಳಿ ಬಗ್ಗೆ ರೇಣು ದೇವಿ ಪ್ರತಿಕ್ರಿಯಿಸಿದ್ದಾರೆ. 

Agneepath: ಭಾರತೀಯ ಸೇನೆಯಲ್ಲಿ 4 ವರ್ಷಗಳಿಗೆ 'ಅಗ್ನಿವೀರ್' ನೇಮಕ, ಏನಿದು? ಆಯ್ಕೆ ಹೇಗೆ? ಇಲ್ಲಿದೆ ವಿವರ

ಮತ್ತೊಂದೆಡೆ ಬಿಹಾರದ ಸಮಸ್ತಿಪುರ್ ಜಿಲ್ಲೆಯಲ್ಲಿ ಜಮ್ಮು ತಾವಿ ಎಕ್ಸ್‌ಪ್ರೆಸ್ ರೈಲಿನ (Jammu Tawi Express train) ಎರಡು ಕೋಚ್‌ಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಲಖಿಸರಾಯ್ (Lakhisarai) ಜಿಲ್ಲೆಯಲ್ಲಿ ಬಿಜೆಪಿ ಕಚೇರಿ ಮೇಲೆ ದಾಳಿ ನಡೆದಿದೆ. ನಳಂದದ ಇಸ್ಲಾಂಪುರ ನಿಲ್ದಾಣದಲ್ಲಿ ನಿಂತಿದ್ದ ಇಸ್ಲಾಂಪುರ-ಹತಿಯಾ ಎಕ್ಸ್‌ಪ್ರೆಸ್ ರೈಲಿಗೆ (Islampur-Hatia express train) ಗುಂಪೊಂದು ಬೆಂಕಿ ಹಚ್ಚಿದೆ. ಇದರಿಂದ ಮೂರು ಎಸಿ ಬೋಗಿಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಹಲವು ಬೋಗಿಗಳಿಗೆ ಹಾನಿಯಾಗಿವೆ. 

ಅಗ್ನಿಪಥ್ ಸತ್ಯ-ಮಿಥ್ಯ: ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಸರ್ಕಾರದ ಸ್ಪಷ್ಟನೆ

ಕೇಂದ್ರ ಸರ್ಕಾರವು ಮಂಗಳವಾರ (ಜೂನ್‌ 14) ಅಗ್ನಿಪಥ್ ಯೋಜನೆಯನ್ನು ಜಾರಿಗೆ ತಂದಿದೆ. ಇದನ್ನು ಪರಿವರ್ತನೆ ಯೋಜನೆ ಎಂದು ಸರ್ಕಾರ ಕರೆದಿದೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಸೈನಿಕರ ನೇಮಕಾತಿಗಾಗಿ, ಹೆಚ್ಚಾಗಿ ನಾಲ್ಕು ವರ್ಷಗಳ ಅಲ್ಪಾವಧಿಯ ಒಪ್ಪಂದದ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ. 

"