ಮಕ್ಕಳಿಗೆ ಲೈಂಗಿಕ ಶೋಷಣೆ: ಟೆಲಿಗ್ರಾಂ, ಫೋನ್‌ಪೇ ಪೇಟಿಎಂ ವಿರುದ್ಧ ಕೇಸ್
ಮೆಸೇಜಿಂಗ್ ಆ್ಯಪ್ ಟೆಲಿಗ್ರಾಮ್ ಹಾಗೂ ಡಿಜಿಟಲ್ ಪಾವತಿ ಆ್ಯಪ್‌ಗಳಾದ ಪೇಟಿಎಂ ಮತ್ತು ಫೋನ್‌ಪೇಗಳು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಕ್ಕಳ ಮಾರಾಟ ಮತ್ತು ಮಕ್ಕಳ ಮೇಲಿನ ಶೋಷಣೆಯನ್ನು ಅನುಮತಿಸುವ ಪರಿಸರವನ್ನು ನಿರ್ಮಿಸುತ್ತಿವೆ ಎಂಬ ಆರೋಪ ಕೇಳಿ ಬಂದಿದ್ದು, ಪ್ರಕರಣ ದಾಖಲಾಗಿದೆ.

ನವದೆಹಲಿ: ಮೆಸೇಜಿಂಗ್ ಆ್ಯಪ್ ಟೆಲಿಗ್ರಾಮ್ ಹಾಗೂ ಡಿಜಿಟಲ್ ಪಾವತಿ ಆ್ಯಪ್‌ಗಳಾದ ಪೇಟಿಎಂ ಮತ್ತು ಫೋನ್‌ಪೇಗಳು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಕ್ಕಳ ಮಾರಾಟ ಮತ್ತು ಮಕ್ಕಳ ಮೇಲಿನ ಶೋಷಣೆಯನ್ನು ಅನುಮತಿಸುವ ಪರಿಸರವನ್ನು ನಿರ್ಮಿಸುತ್ತಿವೆ ಎಂದು ಆರೋಪಿಸಿ ಹೈದರಾಬಾದ್ ಮೂಲದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಸುನೀತಾ ಕೃಷ್ಣನ್ ಪ್ರಕರಣ ದಾಖಲಿಸಿದ್ದಾರೆ.
ಟೆಲಿಗ್ರಾಂನಲ್ಲಿ(teligram) ಮಕ್ಕಳ ಮೇಲಿನ ದೌರ್ಜನ್ಯ ದೃಶ್ಯಗಳು ಅತ್ಯಂತ ಸುಲಭವಾಗಿ ಮಾರಾಟ ಮಾಡಲಾಗುತ್ತಿದೆ. ಇಂಥ ವ್ಯವಹಾರಗಳಿಗೆ ಹಣ ಪಾವತಿಗೆ ಪೇಟಿಎಂ, ಫೋನ್‌ಪೇ ಅವಕಾಶ ಕಲ್ಪಿಸಿವೆ. ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ಕ್ರಿಯೆಯ ವಿಡಿಯೋಗಳ ಮಾರಾಟ ಮತ್ತು ವಿತರಣೆ ತಡೆಗೆ ಈ ಸಂಸ್ಥೆಗಳು ಯಾವ ಕ್ರಮ ಕೈಗೊಂಡಿವೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸುನೀತಾ ಆಗ್ರಹಿಸಿದ್ದಾರೆ.
ರಶ್ಮಿಕಾ ಬಳಿಕ ಕತ್ರಿನಾ ಡೀಪ್ ಫೇಕ್ ಫೋಟೊ ವೈರಲ್: ಸಾಮಾಜಿಕ ಜಾಲತಾಣಗಳಿಗೆ ಎಚ್ಚರಿಕೆ ನೀಡಿದ ಕೇಂದ್ರ
ಡೀಪ್‌ಫೇಕ್‌ಗೆ ಡಿಸ್‌ಕ್ಲೇಮರ್ ಹಾಕದಿದ್ದರೆ ಯೂಟ್ಯೂಬಿಂದ ದಂಡ
ನವದೆಹಲಿ: ಯೂಟ್ಯೂಬ್‌ನಲ್ಲಿ ಬಳಕೆ ಮಾಡಲಾದ ವಿಡಿಯೋ ಹಾಗೂ ಫೋಟೋಗಳನ್ನು ಕೃತಕ ಬುದ್ದಿಮತ್ತೆ (ಡೀಪ್‌ಫೇಕ್)ಯ ಸಹಾಯದಿಂದ ತಯಾರಿಸಿದ್ದರೆ, ಡಿಸ್‌ಕ್ಲೇಮರ್ (Disclaimer) ಹಾಕುವುದು ಕಡ್ಡಾಯ ಎಂದು ಯುಟ್ಯೂಬ್ ಹೇಳಿದೆ. ಇಲ್ಲದಿದ್ದರೆ ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದೆ.
ಡೀಪ್‌ಫೇಕ್ (DeepFake) ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಇದರ ದುರ್ಬಳಕೆಯನ್ನು ತಡೆಗಟ್ಟುವುದಕ್ಕಾಗಿ ಈ ಸೂಚನೆಯನ್ನು ನೀಡಲಾಗಿದೆ. ಒಂದು ವೇಳೆ ಎಐ ಬಳಸಿದ್ದರೂ ಅದನ್ನು ಬಹಿರಂಗಪಡಿಸದೇ ಹೋದಲ್ಲಿ, ಅಂತಹ ವಿಡಿಯೋ ಅಥವಾ ಕಂಟೆಂಟ್ ಅನ್ನು ಡಿಲೀಟ್ ಮಾಡಲಾಗುವುದು ಮತ್ತು ದಂಡವನ್ನೂ ವಿಧಿಸಲಾಗುವುದು ಎಂದು ಎಚ್ಚರಿಸಿದೆ. ಇನ್ನು ಈ ನಿಯಮವು 2024ರಿಂದ ಜಾರಿಗೆ ಬರಲಿದೆ. ಈ ಪೈಕಿ ಯಾವುದೇ ವ್ಯಕ್ತಿ, ಯಟ್ಯೂಬ್‌ನಲ್ಲಿ ಏನನ್ನಾದರೂ ಪೋಸ್ಟ್ ಮಾಡುತ್ತಿದ್ದ ವೇಳೆ ‘ನೀವು ಎಐ ಬಳಸಿಕೊಂಡು ಈ ಕಂಟೆಂಟ್ ಅನ್ನು ತಯಾರಿಸಿದ್ದೀರಾ?’ ಎಂಬ ಆಯ್ಕೆಯ ಪ್ರಶ್ನೆಯನ್ನು ಸೇರಿಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.
ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವೈರಲ್ ವೀಡಿಯೋ; ಮೌನ ಮುರಿದ ವಿಜಯ್ ದೇವರಕೊಂಡ
ರಶ್ಮಿಕಾ ಡೀಪ್‌ಫೇಕ್ ವಿಡಿಯೋ: ಬಿಹಾರ ಯುವಕನ ವಿಚಾರಣೆ
ನವದೆಹಲಿ: ನಟಿ ರಶ್ಮಿಕಾ ಅವರ ಡೀಪ್‌ಫೇಕ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ 19 ವರ್ಷದ ಯುವಕನನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಕಲು ಮಾಡಿದ್ದ ವಿಡಿಯೋವನ್ನು ಮೊದಲು ಈ ಯುವಕನೇ ಸಾಮಾಜಿಕ ಮಾಧ್ಯಮವೊಂದರಲ್ಲಿ (Social Media) ಹಂಚಿಕೊಂಡಿದ್ದಾನೆ. ಬಳಿಕ ಅದು ಇತರೆಡೆ ವೈರಲ್ ಆಗಿದೆ ಎಂದು ಪತ್ತೆಯಾಗಿದೆ.
ಪ್ರಾಥಮಿಕ ವಿಚಾರಣೆ ವೇಳೆ ತಾನು ಇನ್‌ಸ್ಟಾಗ್ರಾಂನಿಂದ (Instagram) ವಿಡಿಯೋ ಡೌನ್‌ಲೋಡ್ ಮಾಡಿಕೊಂಡಿದ್ದಾಗಿ ಯುವಕ ತಿಳಿಸಿದ್ದಾನೆ. ಹೀಗಾಗಿ ಆತನಿಗೆ ಮೊಬೈಲ್ ಸಹಿತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಆರೋಪಿಯ ಖಾತೆಯ ವಿವರಗಳನ್ನು ನೀಡುವಂತೆ ಮೆಟಾಗೆ ಪತ್ರ ಬರೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ನ ರಿಯಲ್ ಫೇಸ್ ಜಾರಾ ಪಟೇಲ್, 'ನಾನು ಭಾಗಿಯಾಗಿಲ್ಲ' ಎಂದ ಎನ್ಆರ್‌ಐ!