850 ಕೋಟಿ ರೂ ದಿಲ್ಲಿ ಭೂ ಹಗರಣ ಬೆಳಕಿಗೆ, ಕೇಜ್ರಿವಾಲ್ ಮುಖ್ಯ ಕಾರ್ಯದರ್ಶಿ ಅಮಾನತಿಗೆ ಶಿಫಾರಸು!
ಅಬಕಾರಿ ಹಗರಣದ ಕುಣಿಕೆ ಬಿಗಿಯಾಗುತ್ತಿರುವ ಬೆನ್ನಲ್ಲೇ ದೆಹಲಿಯಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಬರೋಬ್ಬರಿ 850 ಕೋಟಿ ರೂಪಾಯಿ ಭೂಹಗರಣ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಸಿಎಂ ಕೇಜ್ರಿವಾಲ್ ಮುಖ್ಯಕಾರ್ಯದರ್ಶಿ ಅಮಾನತಿಗೆ ಶಿಫಾರಸು ಮಾಡಲಾಗಿದೆ.

ದೆಹಲಿ(ನ.14) ಅಕ್ರಮ ಹಣ ವರ್ಗಾವಣೆ ಪ್ರಕರಣ, ಅಬಕಾರಿ ನೀತಿ ಹಗರಣ ಸೇರಿದಂತೆ ದೆಹಲಿ ಆಪ್ ಸರ್ಕಾರ ಒಂದರ ಮೇಲೊಂದರಂತೆ ಹಿನ್ನಡೆ ಅನುಭವಿಸುತ್ತಿದೆ. ಉಪಮುಖ್ಯಮಂತ್ರಿ, ಸಚಿವರು, ಸಂಸದರು ಜೈಲು ಸೇರಿದ್ದಾರೆ. ಇದರ ನಡುವೆ ಇದೀಗ ಭೂ ಹಗರಣ ಬೆಳಕಿಗೆ ಬಂದಿದೆ. 850 ಕೋಟಿ ರೂಪಾಯಿ ಭೂ ಹಗರಣದಲ್ಲಿ ಇದೀಗ ದೆಹಲಿ ಮುಖ್ಯಮಂತ್ರಿ ಮುಖ್ಯ ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿ ಶಾಮೀಲಾಗಿರುವುದು ಬಹಿರಂಗವಾಗಿದೆ. ಇದರ ಬೆನ್ನಲ್ಲೇ ಇಬ್ಬರನ್ನು ಅಮಾನತು ಮಾಡಲು ಸಚೆವ ಆತಿಶಿ ಶಿಫಾರಸು ಮಾಡಿದ್ದಾರೆ.
ದ್ವಾರಕಾ ಎಕ್ಸ್‌ಪ್ರೆಸ್ ಹೆದ್ದಾರಿಗಾಗಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭೂ ಸ್ವಾಧಿನ ಮಾಡಿತ್ತು. ಈ ವೇಳೆ ದೆಹಲಿ ಬಮ್ನೋಲಿ ಗ್ರಾಮದ ತುಂಡು ಭೂಮಿಯ ಪರಿಹಾರ ಹೆಚ್ಚಿಸುವಲ್ಲಿ ಕೇಜ್ರಿವಾಲ್ ಮುಖ್ಯಕಾರ್ಯದರ್ಸಿ ನರೇಶ್ ಕುಮಾರ್ ಹಾಗೂ ಹಿರಿಯ ಅಧಿಕಾರಿ ಅಶ್ವಾನಿ ಕುಮಾರ್ ಪ್ರಮುಖವಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಪರಿಹಾರದ ಹೆಚ್ಚುವರಿ ಹಣವನ್ನು ಕಂಪನಿಯೊಂದಕ್ಕೆ ಅಕ್ರಮವಾಗಿ ನೀಡಿದ್ದಾರೆ. ಈ ಕಂಪನಿ ಅವರ ಮುಖ್ಯಕಾರ್ಯದರ್ಶಿ ಪುತ್ರಿ ಕರಣ್ ಚವ್ಹಾಣ್ ಅವರಿಗೆ ಸೇರಿದ್ದಾಗಿದೆ.
ಅನಾರೋಗ್ಯಕ್ಕೆ ತುತ್ತಾದ ಪತ್ನಿಯ ಭೇಟಿಗೆ ದೆಹಲಿ ಮಾಜಿ ಡಿಸಿಎಂ ಸಿಸೋಡಿಯಾಗೆ ಬರಿ 6 ಗಂಟೆ ಅವಕಾಶ!
ಹೆದ್ದಾರಿ ಅಭಿವೃದ್ಧಿಗೆ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ದೆಹಲಿ ಮುಖ್ಯಕಾರ್ಯದರ್ಶಿ ಹಾಗೂ ಕೆಲ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಹಾರ ಹೆಚ್ಚುವರಿ ಹಣವನ್ನು ಪಡೆದುಕೊಂಡು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ರಾಷ್ಟ್ರೀ ಪ್ರಾಧಿಕಾರ 312 ಕೋಟಿ ರೂಪಾಯಿ ಪರಿಹಾರ ನೀಡಿತ್ತು. ಆದರೆ ಈ ಮೊತ್ತವನ್ನು 810 ಕೋಟಿ ರೂಪಾಯಿಗೆ ಹೆಚ್ಚಿಸಿದ ದೆಹಲಿಯ ಮುಖ್ಯಮಂತ್ರಿ ಮುಖ್ಯಕಾರ್ಯದರ್ಶಿ ಹಾಗೂ ಅಧಿಕಾರಿಗಳು, ಈ ಹೆಚ್ಚುವರಿ ಹಣವನ್ನು ತಮ್ಮ ಪುತ್ರನ ಕಂಪನಿಗೆ ವರ್ಗಾವಣೆ ಮಾಡಿದ್ದಾರೆ.
ಈ ಹಗರಣದ ಕುರಿತು ಮಾಹಿತಿ ನೀಡಿದ ದೆಹಲಿ ವಿಜಿಲೆನ್ಸ್ ಸಚಿವೆ ಅತಿಶಿ, ಭೂಮಾಲೀಕರನ್ನು ವಂಚಿಸಿರುವ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನೂ ವಂಚಿಸಿದ್ದಾರೆ. ನರೇಶ್ ಕುಮಾರ್ ಹಾಗೂ ಅಶ್ವಾನಿ ಕುಮಾರ್ ಇಬ್ಬರನ್ನೂ ಅಮಾನತು ಮಾಡಲು ಶಿಫಾರಸು ಮಾಡಲಾಗಿದೆ ಎಂದು ಅತಿಶಿ ಹೇಳಿದ್ದಾರೆ
ದೆಹಲಿ ಆಪ್ ಸರ್ಕಾರ ಇದೀಗ ಹಗರದಲ್ಲಿ ಸುಸ್ತಾಗಿದೆ. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲು ಸೇರಿದ್ದಾರೆ. ಜಾಮೀನಿಗಾಗಿ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ. ಇತ್ತ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ವಿಚಾರಣೆಗೆ ಹಾಜರಾಗಲು ಇಡಿ ಸಮನ್ಸ್ ನೀಡಿ ಭಾರಿ ಸಂಚಲನ ಸೃಷ್ಟಿಸಿತ್ತು. ಇತ್ತ ಸಂಸದ ಸಂಜಯ್ ಸಿಂಗ್, ಮಾಜಿ ಸಚಿವ ಸತ್ಯೇಂದ್ರ ಜೈನ್ ಕೂಡ ಸೆರೆಮನೆವಾಸ ಅನುಭವಿಸಿದ್ದಾರೆ.
ಕೇಜ್ರಿವಾಲ್ ಬಂಧನವಾದರೆ 'ವರ್ಕ್ ಫ್ರಂ ಜೈಲ್' : ಜೈಲಲ್ಲೇ ಸಂಪುಟ ಸಭೆ, ಅಲ್ಲಿಂದಲೇ ಕೆಲಸ: ಆಪ್ ನಿರ್ಣಯ