ಸುಪ್ರೀಂಕೋರ್ಟ್‌ನ ನೂತನ ಮುಖ್ಯನ್ಯಾಯಮೂರ್ತಿ ಎನ್‌.ವಿ. ರಮಣ|  ಎನ್‌.ವಿ. ರಮಣ ಅವರ ಹೆಸರಿನಲ್ಲಿ ನಕಲಿ ಟ್ವೀಟರ್‌ ಖಾತೆ ಸೃಷ್ಟಿಸಿ ನಕಲಿ ಸಂದೇಶ

ನವದೆಹಲಿ(ಏ.27): ಸುಪ್ರೀಂಕೋರ್ಟ್‌ನ ನೂತನ ಮುಖ್ಯನ್ಯಾಯಮೂರ್ತಿ ಎನ್‌.ವಿ. ರಮಣ ಅವರ ಹೆಸರಿನಲ್ಲಿ ನಕಲಿ ಟ್ವೀಟರ್‌ ಖಾತೆ ಸೃಷ್ಟಿಸಿ ನಕಲಿ ಸಂದೇಶಗಳನ್ನು ಹರಿಬಿಟ್ಟಪ್ರಕರಣ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ರಾಷ್ಟ್ರೀಯ ಭದ್ರತಾ ಸಲಹೆಗಾರ ದೋವಲ್‌ ಅವರ ರಾಜತಾಂತ್ರಿಕತೆಯ ಫಲವಾಗಿ ಅಮೆರಿಕ ಲಸಿಕೆಗೆ ಬೇಕಾಗಿರುವ ಕಚ್ಚಾ ವಸ್ತುಗಳ ಪೂರೈಕೆಗೆ ಒಪ್ಪಿಕೊಂಡಿದೆ ಎಂದು ನಕಲಿ ಖಾತೆಯ ಮೂಲಕ ಟ್ವೀಟ್‌ ಮಾಡಲಾಗಿತ್ತು. ಆದರೆ, ನ್ಯಾ| ರಮಣ ಅವರು ಯಾವುದೇ ಟ್ವೀಟರ್‌ ಖಾತೆಯನ್ನು ಹೊಂದಿಲ್ಲ. ತಮ್ಮ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿರುವ ಬಗ್ಗೆ ನ್ಯಾ| ರಮಣ ಅವರು ಪೊಲೀಸ್‌ ದೂರು ದಾಖಲಿಸಿದ್ದರು. ಬಲಿಕ ನಕಲಿ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ.

ಎನ್‌.ವಿ. ರಮಣ ಹಿನ್ನೆಲೆ

ಎನ್​.ವಿ.ರಮಣ 1957ರ ಆಗಸ್ಟ್​ 27ರಂದು ಆಂಧ್ರಪ್ರದೇಶದ ಪೊನ್ನಾವರಂ ಗ್ರಾಮದಲ್ಲಿ ಜನಿಸಿದ್ದಾರೆ. 1983ರ ಫೆಬ್ರವರಿ 10ರಿಂದ ವಕೀಲಿ ವೃತ್ತಿ ಪ್ರಾರಂಭಿಸಿದ ರಮಣರವರು 2000ರ ಜೂನ್​ 27ರಂದು ಆಂಧ್ರಪ್ರದೇಶ ಹೈಕೋರ್ಟ್​​ನ ಮುಖ್ಯನ್ಯಾಯಾಧೀಶರಾಗಿ ನೇಮಕಗೊಂಡರು. 

2014ರ ಫೆಬ್ರವರಿ 17ರಂದು ಸುಪ್ರಿಂಕೋರ್ಟ್ ಜಡ್ಜ್​ ಆಗಿ ನೇಮಕಗೊಂಡಿದ್ದಾರೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್​.ಜಗನ್​ ಮೋಹನ್​ ರೆಡ್ಡಿ ಮತ್ತು ಎನ್​.ವಿ.ರಮಣ ಮಧ್ಯೆ ವಿವಾದವೊಂದು ಎದ್ದಿತ್ತು. ಜಗನ್​ ಮೋಹನ್​ ರೆಡ್ಡಿಯವರು ರಮಣ ವಿರುದ್ಧ ಗಂಭೀರ ಆರೋಪ ಮಾಡಿ, ಸಿಜೆಐ ಬೋಬ್ಡೆಯವರಿಗೆ ಪತ್ರ ಬರೆದಿದ್ದರು. ಇತ್ತೀಚೆಗಷ್ಟೇ ಈ ಆರೋಪದಿಂದ ಇವರಿಗೆ ಕ್ಲೀನ್​ಚಿಟ್​ ಪಡೆದಿದ್ದಾರೆ.