ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ ಇಲ್ಲೊಂದು ಕಡೆ ಗಂಡ ಹೆಂಡತಿ ಜಗಳ ಊಟದ ನಂತರವೂ ಮುಂದುವರೆದಿದ್ದು, ಪತ್ನಿ ಕೊಲೆಯಲ್ಲಿ ಅಂತ್ಯವಾಗಿದೆ. ಛತ್ತೀಸ್‌ಗಢದ ಜಶ್‌ಪುರ ಎಂಬಲ್ಲಿ ಈ ಘಟನೆ ನಡೆದಿದೆ.
ರಾಯ್‌ಪುರ: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ ಇಲ್ಲೊಂದು ಕಡೆ ಗಂಡ ಹೆಂಡತಿ ಜಗಳ ಊಟದ ನಂತರವೂ ಮುಂದುವರೆದಿದ್ದು, ಪತ್ನಿ ಕೊಲೆಯಲ್ಲಿ ಅಂತ್ಯವಾಗಿದೆ. ಛತ್ತೀಸ್‌ಗಢದ ಜಶ್‌ಪುರ ಎಂಬಲ್ಲಿ ಈ ಘಟನೆ ನಡೆದಿದೆ.
ಸಾಯಲೆಂದು ಕೆರೆಗೆ ಹಾರಿದ ಪತ್ನಿಯ ಜೀವ ಉಳಿಸಿದ ಪತಿ ಬಳಿಕ ಆಕೆಯನ್ನು ಹತ್ಯೆ ಮಾಡಿದ ವಿಚಿತ್ರ ಘಟನೆ ಛತ್ತೀಸ್‌ಗಢದ ಜಶ್‌ಪುರ ಎಂಬಲ್ಲಿ ಸೋಮವಾರ ನಡೆದಿದೆ. ಇಲ್ಲಿನ ಶಂಕರ್ (Shankar) ಮತ್ತು ಆತನ ಪತ್ನಿ ಆಶಾ (Asha) ಇಬ್ಬರೂ ಸೋಮವಾರ ರಾತ್ರಿ ಚೆನ್ನಾಗಿ ಕುಡಿದು ಮಲಗಿದ್ದರು. ಈ ವೇಳೆ ಶಂಕರ್, ಪತ್ನಿಯಿಂದ ಲೈಂಗಿಕ ಸುಖ ಬಯಸಿದ್ದಾನೆ. ಆದರೆ ಆಕೆ ಅದಕ್ಕೆ ನಿರಾಕರಿಸಿದಾಗ ಇಬ್ಬರ ನಡುವೆ ಗಲಾಟೆ ಆಗಿದೆ. ಈ ವೇಳೆ ಸಿಟ್ಟಿಗೆದ್ದ ಆಶಾ ಸೀದಾ ಹೋಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅಯ್ಯಯ್ಯೋ..ಜಗಳದಲ್ಲಿ ಗಂಡನ ನಾಲಗೆ ಕಚ್ಚಿದ ಹೆಂಡ್ತಿ, ತುಂಡಾಗಿ ಬಿತ್ತು ನಾಲಗೆ!
ಇದನ್ನು ನೋಡಿದ ಶಂಕರ್ ತಾನೂ ಬಾವಿಗೆ ಹಾರಿಗೆ ಆಕೆಯ ಜೀವ ಕಾಪಾಡಿ ಮೇಲೆ ಕರೆ ತಂದಿದ್ದಾನೆ. ಹೀಗೆ ಮೇಲೆ ಬಂದ ಬಳಿ ಮತ್ತೆ ಇಬ್ಬರ ನಡುವೆ ಗಲಾಟೆ ಆಗಿದೆ. ಈ ವೇಳೆ ಶಂಕರ್ ಪತ್ನಿಯ ಗುಪ್ತಾಂಗಳ ಮೇಲೆ ಹಲ್ಲೆ ಮಾಡಿ ಮತ್ತೆ ಆಕೆಯನ್ನು ಹತ್ಯೆ ಮಾಡಿದ್ದಾನೆ. ಬೆಳಗ್ಗೆಯಾದ ಬಳಿಕ ಗ್ರಾಮಸ್ಥರಿಗೆ ವಿಷಯ ತಿಳಿದುಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಶಂಕರ್‌ನನ್ನು ಬಂಧಿಸಿದ್ದಾರೆ.