ಛತ್ತೀಸ್‌ಗಡ[ಫೆ.14]: ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಶಾಸಕಿ ಹಾಗೂ ಮಹಿಳಾ IPS ಅಧಿಕಾರಿ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಸಿಮೆಂಟ್ ಫ್ಯಾಕ್ಟರಿಯೊಂದರಲ್ಲಿ ಮೃತಪಟ್ಟ ಕಾರ್ಮಿಕನ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕಿ, ಮಹಿಳಾ IPS ವಿರುದ್ದ ಸಾರ್ವಜನಿಕವಾಗಿಯೇ ರೇಗಾಡಿದ್ದಾರೆ. ಈ ವೇಳೆ ನಾಯಕಿಯ ಬೆದರಿಕೆಗೆ ಅಂಜದ IPS ಅಧಿಕಾರಿಯೂ ಅದೇ ಧಾಟಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಘಿದೆ.

ವಿವಾದಕ್ಕೇನು ಕಾರಣ?

ಶಾಸಕಿ ಹಾಗೂ IPS ನಡುವಿನ ಈ ವಿವಾದದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಇಬ್ಬರೂ ಪರಸ್ಪರ ಪ್ರಶ್ನಿಸಿ, ಉತ್ತರಿಸುತ್ತಿರುವುದನ್ನು ನೋಡಬಹುದು. ಶಾಸಕಿ ತನ್ನ ಬೆಂಬಲಿಗರೊಂದಿಗೆ ಸೇರಿ ಮಹಿಳಾ IPS ಅಧಿಕಾರಿಯನ್ನು ಸುತ್ತುವರೆದು ಜಗಳವಾಡುತ್ತಿಡುವುದು ಸ್ಪಷ್ಟವಾಗಿದೆ. ಹೀಗಿರುವಾಗ ಅತ್ತ IPS ಅಧಿಕಾರಿ ತಾಳ್ಮೆಯಿಂದ ಜನ ನಾಯಕಿಗೆ ನಿಯಕಮ, ಕಾನೂನು ಕುರಿತು ತಿಳಿಸಿ ಉತ್ತರಿಸುತ್ತಾರೆ. 

ಪುಲ್ವಾಮಾ ಹುತಾತ್ಮರ ಹೆಣ್ಮಕ್ಕಳನ್ನು ದತ್ತು ಪಡೆದ ಮಹಿಳಾ IAS!

ಈ ನಡುವೆ ಶಾಸಕಿ ನಿನ್ನ ನೋಡ್ಕೊಳ್ತೀನಿ ಎಂದು ಬೆದರಿಕೆ ಹಾಕಿದ್ದಾರೆ. ನಾಯಕಿಯ ಈ ದರ್ಪಕ್ಕೆ ಹೆದರದ IPS ಅಧಿಕಾರಿ ಅದೇ ಧಾಟಿಯಲ್ಲಿ 'ನಿಮಗೆ ಯಾರಿಗೆ ಬೇಕೋ ಅವರಿಗೆ ಕರೆ ಮಾಡಿ' ಎಂದು ಉತ್ತರಿಸಿದ್ದಾರೆ.

ಲಭ್ಯವಾದ ಮಾಹಿತಿ ಅನ್ವಯ ಇಲ್ಲಿನ ಸಿಮೆಂಟ್ ಫ್ಯಾಕ್ಟರಿ ಒಂದರಲ್ಲಿ ಕೆಲಸಕ್ಕಿದ್ದ ಕಾರ್ಮಿಕ ಮೃತಪಟ್ಟಿದ್ದ. ಹೀಗಿರುವಾಗ ಮೃತನ ಕುಟುಂಬಸ್ಥರು ಪ್ರತಿಭಟನೆ ಆರಂಭಿಸಿದ್ದಾರೆ. ಹೀಗಿರುವಾಗಲೇ ಶಾಸಕಿ ಶಕುಂತಲಾ ಸಾಹೂ ಕೂಡಾ ತನ್ನ ಬೆಂಬಲಿಗರೊಂದಿಗೆ ಸ್ಥಳಕ್ಕಾಗಮಿಸಿ, ಅಧಿಕಾರಿಗಳ ವಿರುದ್ಧ ಕೂಗಾಡಿದ್ದಾಋಎ. ಈ ಮಾಹಿತಿ ಪಡೆದ IPS ಅಧಿಕಾರಿ ಅಂಕಿತಾ ಶರ್ಮಾ ಪೊಲೀಸರೊಂದಿಗೆ ಅಲ್ಲಿಗಾಗಮಿಸಿ, ಶಾಂತಿಯುತವಾಘಿ ಪ್ರತಿಭಟಿಸುವಂತೆ ಕುಟುಂಬ ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಆದರೆ ಪೊಲೀಸರ ಈ ಮನವಿ ಕೇಳಿ ಕೋಪಗೊಂಡ ಶಾಸಕಿ ಶಕುಂತಲಾ, IPS ವಿರುದ್ಧ ಕೂಗಾಡಿದ್ದಾರೆ. ಶಾಸಕಿಯನ್ನು ಸಮಾಧಾನಗೊಳಿಸಲು ಅಂಕಿತಾ ಶರ್ಮಾ ತಾನೇನೂ ತಪ್ಪು ಮಾಡಿಲ್ಲ, ಇಲ್ಲಿ ತಾನು ಕರ್ತವ್ಯ ನಿಭಾಯಿಸಲು ಬಂದಿದ್ದೇನೆ ಎಂದು ಅರ್ಥೈಸಲು ಯತ್ನಿಸಿದ್ದಾರೆ. ಆದರೆ ಸಮಾಧಾನಗೊಳ್ಳದ ಶಾಸಕಿ ಮತ್ತೆ ರೇಗಾಟ ಆರಂಭಿಸಿದ್ದು, ಅತ್ತ ಪೊಲೀಸ್ ಅಧಿಕಾರಿಯೂ ಅವರಿಗೆ ತಕ್ಕ ಉತ್ತರ ನೀಡಿದ್ದಾರೆ ಎನ್ನಲಾಗಿದೆ

ಫೆಬ್ರವರಿ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ