* ಚೆನ್ನೈ ಐಐಟಿ ಹಳೆಯ ವಿದ್ಯಾರ್ಥಿಗಳ ಟ್ರಸ್ಟ್‌ನಿಂದ ರಾಜ್ಯಕ್ಕೆ 200 ಆಮ್ಲಜನಕ ಸಾಂದ್ರಕ ಕೊಡುಗೆ* ಕರ್ನಾಟಕದ ಕೊರೋನಾ ಸಂಕಷ್ಟಕ್ಕೆ ಮಿಡಿದ ವಿದ್ಯಾರ್ಥಿಗಳು* 20 ದಶಲಕ್ಷ ಡಾಲರ್‌ ಮೊತ್ತದ 200 ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆ

ಬೆಂಗಳೂರು(ಜೂ. 11) ಚೆನ್ನೈನ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಹಳೆಯ ವಿದ್ಯಾರ್ಥಿಗಳ ಚಾರಿಟಬಲ್‌ ಟ್ರಸ್ಟ್‌ ರಾಜ್ಯದ ಕೋವಿಡ್‌ ಪರಿಸ್ಥಿತಿ ನಿರ್ವಹಣೆಗೆ ನೆರವಾಗಿದ್ದು, 20 ದಶಲಕ್ಷ ಡಾಲರ್‌ ಮೊತ್ತದ 200 ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿದೆ.

ಬೆಂಗಳೂರಿನಲ್ಲಿ ಶುಕ್ರವಾರ ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ 10 KL ಸಾಮರ್ಥ್ಯದ 200 ಆಮ್ಲಜನಕ ಸಾಂದ್ರಕಗಳನ್ನು ಟ್ರಸ್ಟ್ ಪರವಾಗಿ ಕೃಷ್ಣನ್‌ ನಾರಾಯಣನ್‌, ರಮಾ ಹರಿನಾಥ್‌ ಅವರು ಹಸ್ತಾಂತರ ಮಾಡಿದರು.

ಹೊಸ ಮಾರ್ಗಸೂಚಿಯಲ್ಲಿ ಏನಿದೆ?

ಸಂದರ್ಭದಲ್ಲಿ ಮಾತನಾಡಿದ ಡಾ.ಅಶ್ವತ್ಥನಾರಾಯಣ, "ಐಐಟಿ ಹಳೆಯ ವಿದ್ಯಾರ್ಥಿಗಳ ಕೊಡುಗೆಯನ್ನು ಮನಸಾರೆ ಶ್ಲಾಘಿಸಿದರಲ್ಲದೆ, ಶೈಕ್ಷಣಿಕವಾಗಿ ಉತ್ತುಂಗಕ್ಕೇರಿದ ಹಳೆಯ ವಿದ್ಯಾರ್ಥಿಗಳು ಕೋವಿಡ್‌ ಸಂಕಷ್ಟಕ್ಕೆ ಮಿಡಿಯುತ್ತಿರುವುದು ಅಭಿಮಾನದ ಸಂಗತಿ" ಎಂದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಸಲಹೆಗಾರ ಪ್ರಶಾಂತ ಪ್ರಕಾಶ ಇದ್ದರು.

Scroll to load tweet…