ಕೊರೋನಾತಂಕದ ನಡುವೆ ಸಮಾಜಕ್ಕೆ ಮಾದರಿಯಾದ ಐಪಿಎಸ್‌ ಆಫೀಸರ್| ಕೆಲಸ ಕಳೆದುಕೊಂಡು ಕಂಗಾಲಾಗಿದ್ದ ಮಹಿಳೆಗೆ ಕೆಲಸ ಕೊಡಿಸಿದ ಪೊಲೀಸ್| ಸಂಕಷ್ಟದಲ್ಲಿದ್ದಾಕೆಯ ಮುಖದಲ್ಲಿ ಆನಂದಭಾಷ್ಪ

ಚೆನ್ನೈ(ಜು.23): ಕೊರೋನಾತಂಕ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಸೋಂಕಿತರ ಹಾಗೂ ಮೃತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಿರುವಾಗ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‌ಡೌನ್ ಕೂಡಾ ಹೇರಲಾಗಿತ್ತು. ಕೊರೋನಾ ಭಯದಿಂದ ಎಲ್ಲರೂ ಅಂತರ ಕಾಯ್ದುಕೊಳ್ಳುತ್ತಿದ್ದಾರೆ, ಸೋಂಕಿತರಿದ್ದಾರೆಂಬ ಮಾಹಿತಿ ಸಿಕ್ಕರೆ ಅತ್ತ ಸುಳಿಯುವುದೂ ಇಲ್ಲ. ಇಂತಹ ಪರಿಸ್ಥಿತಿ ನಡುವೆ ಅನೇಕ ಮಂದಿ ತಮ್ಮ ಕೆಲಸ ಕಳೆದುಕೊಂಡು ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಹೀಗಿರುವಾಗ ಐಪಿಎಸ್‌ ಆಫೀಸರ್‌ ಒಬ್ಬರ ಮಾನವೀಯ ನಡೆ ಸದ್ಯ ಎಲ್ಲರ ಮನ ಗೆದ್ದಿದೆ.

ಕೊರೋನಾ ಪ್ರತಿಕಾಯ ಶಕ್ತಿ ದೀರ್ಘವಧಿ ಇರಲ್ಲ: ವರದಿ

ಹೌದು ಕೊರೋನಾ ಸೋಂಕು ತಗುಲಿದೆ ಎಂಬ ಮಾಹಿತಿ ಸಿಕ್ಕು, ಅವರು ಗುಣಮುಖರಾಗಿದ್ದರೂ ಅವರನ್ನು ಹತ್ತಿರ ಸೇರಿಸಿಕೊಳ್ಳಲು ಇಂದು ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ ಕೊರೋನಾ ವಾರಿಯರ್ ಚೆನ್ನೈನ ಐಪಿಸಿ​ ಅಧಿಕಾರಿಯೊಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದ ಮಹಿಳೆಯನ್ನು ಕೆಲಸಕ್ಕೆ ಮರಳಲು ಸಹಾಯ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮನೆ ಕೆಲಸ ಮಾಡುತ್ತಿದ್ದ ರಾಧಾ ಎಂಬವರಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಆಕೆ ಚಿಕಿತ್ಸೆ ಪಡೆದು ಗುಣಮುಖರಾಗಿ ವಾಪಸ್​ ಬಂದ ಬಳಿಕವೂ ಆಕೆ ಕೆಲಸಕ್ಕೆ ಬರೋದು ಬೇಡ ಅಂತ ಫ್ಲ್ಯಾಟ್​ ಅಸೋಸಿಯೇಷನ್ ಸದಸ್ಯರು ಹೇಳಿದ್ದರು. ಇದರಿಂದ ಬಡ ವರ್ಗದ ಈ ಮಹಿಳೆ ಕಂಗಾಲಾಗಿದ್ದರು. ಈ ಮಹಿಳೆಯ ನೋವನ್ನರಿತ ಟಿ. ನಗರದ ಡಿಸಿಪಿ ಹರಿಕಿರಣ್ ಖುದ್ದು ಫ್ಲ್ಯಾಟ್‌ಗೆ ತೆರಳಿ ರಾಧಾ ಅವರಿಗೆ ಮತ್ತೆ ಕೆಲಸ ಕೊಡುವಂತೆ ಅಸೋಸಿಯೇಷನ್ ಸದಸ್ಯರ ಮನವೊಲಿಸಿದ್ದಾರೆ.

Scroll to load tweet…

ಈ ಕುರಿತು ಐಪಿಎಸ್​​ ಅಸೋಸಿಯೇಷನ್​ ಹಾಗೂ ಡಿಸಿಪಿ ಆದ್ಯಾರ್​ ಟ್ವೀಟ್​ ಮಾಡಿ, ಹರಿ ಕಿರಣ್​​​ ಅವರ ಮಾನವೀಯ ಕಾರ್ಯದ ಬಗ್ಗೆ ತಿಳಿಸಿದ್ದಾರೆ. ಸಾರ್ವಜನಿಕರು ಹರಿ ಕಿರಣ್​ ಅವರ ಈ ಕಾರ್ಯವನ್ನ ಮೆಚ್ಚಿ ಧನ್ಯವಾದ ಹೇಳಿದ್ದಾರೆ.