ಲಂಡನ್‌(ಜು.23):  ಕೊರೋನಾ ಸೋಂಕು ಬಂದು ಗುಣವಾದವರಲ್ಲಿ ಉತ್ಪತ್ತಿ ಆಗುವ ಪ್ರತಿಕಾಯಗಳು ದೀರ್ಘಾವಧಿ ಉಳಿಯುವುದಿಲ್ಲ. ಹೀಗಾಗಿ ಕೊರೋನಾದಿಂದ ಗುಣವಾದವರೂ ಕೆಲವೇ ದಿನಗಳಲ್ಲಿ ತಮ್ಮ ಪ್ರತಿಕಾಯ ಶಕ್ತಿಯನ್ನು ಕಳೆದುಕೊಂಡು ಭವಿಷ್ಯದಲ್ಲಿ ಮತ್ತೊಮ್ಮೆ ಸೋಂಕಿಗೆ ತುತ್ತಾಗುವ ಸಾಧ್ಯತೆ ಎಂಬ ಆಘಾತಕಾರಿ ಸಂಗತಿ ಅಧ್ಯಯನವೊಂದರಿಂದ ತಿಳಿದುಬಂದಿದೆ.

ಹೆಚ್ಚು ಗುಣಮುಖ: ಕರ್ನಾಟಕಕ್ಕೆ 10ನೇ ಸ್ಥಾನ!

ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಸಿನ್‌ನಲ್ಲಿ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ. ಕಿಂಗ್‌ ಕಾಲೇಜ್‌ ಲಂಡನ್‌ನ ಸಂಶೋಧಕರು ಇತ್ತೀಚೆಗೆ ಕೊರೋನಾದ ಸೌಮ್ಯ ರೋಗ ಲಕ್ಷಣಗಳಿಂದ ಚೇತರಿಸಿಕೊಂಡ 34 ರೋಗಿಗಳಲ್ಲಿ ಸರಾಸರಿ 37ದಿನಗಳ ಬಳಿಕ ಪ್ರತಿಕಾಯಗಳ ಇರುವಿಕೆಯನ್ನು ಅಧ್ಯಯನಕ್ಕೆ ಒಳಪಡಿಸಿದ್ದರು. ಬಳಿಕ 86 ದಿನಗಳ ಬಳಿಕ ಇನ್ನೊಮ್ಮೆ ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಆದರೆ, ಬಹುತೇಕರಲ್ಲಿ ಮೂರು ತಿಂಗಳ ಮೊದಲೇ ಪ್ರತಿಕಾಯಗಳು ನಶಿಸಿರುವುದು ಬೆಳಕಿಗೆ ಬಂದಿದೆ. ಸಾರ್ಸ್‌ ಹಾಗೂ ಇತರ ಸೊಂಕುಗಳಿಗಿಂತಲೂ ಬೇಗ ಕೊರೋನಾ ಪ್ರತಿಕಾಯಗಳು ದುರ್ಬಲಗೊಳ್ಳುತ್ತವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

ಗಣಿ ನಾಡಿನಲ್ಲಿ ವೈದ್ಯರಿಂದಲೇ ಕೊರೋನಾ ಆಸ್ಪತ್ರೆ!

ಹೀಗಾಗಿ ಜಗತ್ತಿನೆಲ್ಲಡೆ ಕೊರೋನಾ ಪ್ರತಿಕಾಯಗಳ ಸಮರ್ಥ್ಯವನ್ನು ಇನ್ನಷ್ಟುವಿಶ್ಲೇಷಣೆಗೆ ಒಳಪಡಿಸುವ ಅಗತ್ಯವಿದೆ. ಅಲ್ಲದೇ ಕೊರೋನಾ ವಿರುದ್ಧ ಪ್ರತಿಕಾಯಗಳ ಬೆಳವಣಿಗೆಗೆ ಹರ್ಡ್‌ ಇಮ್ಯುನಿಟಿಯನ್ನು ಪಾಲಿಸುವಾಗ ಎಚ್ಚರಿಕೆಯಿಂದ ಇರಬೇಕು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.