* ಐಐಟಿ ಮದ್ರಾಸ್ ಲೆಕ್ಚರರ್‌ ಶವ ಸುಟ್ಟ ಸ್ಥಿತಿಯಲ್ಲಿ ಕ್ಯಾಂಪಸ್‌ನಲ್ಲಿ ಪತ್ತೆ* ಕೋಣೆಯಲ್ಲಿತ್ತು ಹನ್ನೊಂದು ಪುಟಗಳ ಡೆತ್‌ನೋಟ್‌* ಮೃತ ಲೆಕ್ಚರರ್ ತಂದೆ ಇಸ್ರೋ ಉದ್ಯೋಗಿ

ಚೆನ್ನೈ(ಜು.02): ಐಐಟಿ ಮದ್ರಾಸ್‌ ಕ್ಯಾಂಪಸ್‌ನಲ್ಲಿ ಲೆಕ್ಚರರ್ ಒಬ್ಬರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹಾಕಿ ಮೈದಾನದ ಬಳಿ ಶವ ಕಂಡ ಬಳಿಕ ಸಂಸ್ಥೆಯ ಕ್ರೀಡಾಧಿಕಾರಿ ಈ ಮಾಹಿತಿಉನ್ನು ಪೊಲೀಸರಿಗೆ ನೀಡಿದ್ದಾರೆ. ಮೃತ ವ್ಯಕ್ತಿಯನ್ನು 30 ವರ್ಷದ ಉನ್ನಿಕೃಷ್ಣನ್ ನಾಯರ್ ಎಂದು ಗುರುತಿಸಲಾಗಿದೆ. 2021ರ ಏಪ್ರಿಲ್‌ನಲ್ಲಿ ಬಿ. ಟೆಕ್ ಪೂರೈಸಿದ ಅವರು, ಪ್ರಾಜೆಕ್ಟ್ ಅಸೋಸಿಯೇಟ್‌ ಹಾಗೂ ಅತಿಥಿ ಉಪನ್ಯಾಸಕರಾಗಿ ಐಐಟಿ ಮದ್ರಾಸ್‌ಗೆ ಸೇರಿದ್ದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಳಗ್ಗೆ ಕೇರಳದಿಂದ ಮರಳಿದ್ದರು

ಮಾಧ್ಯಮ ವರದಿಯನ್ವಯ ಅವರು ಗುರುವಾರ ಬೆಳಗ್ಗೆ ಕೇರಳದಿಂದ ಕ್ಯಾಂಪಸ್‌ಗೆ ಮರಳಿದ್ದರು. ಆದರೆ ಹಾಕಿ ಮೈದಾನಕ್ಕೆ ಆಡಲು ಬಂದ ಕೆಲ ವಿದ್ಯಾರ್ಥಿಗಳು ಅವರ ಶವ ಕಂಡು ದಂಗಾಗಿದ್ದಾರೆ. ಕೊಟ್ಟೂರ್‌ಪುರಂ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು, ಆಸ್ಪತ್ರೆಗೆ ಕಳುಹಿಸಿದ್ದಾರೆ. 

ಮೃತನ ತಂದೆ ಇಸ್ರೋ ಉದ್ಯೋಗಿ

ಉನ್ನಿಕೃಷ್ಣನ್‌ರವರ ತಂದೆ ಇಸ್ರೋ ಉದ್ಯೋಗಿಯಾಗಿದ್ದಾರೆ. ಇನ್ನು ಉನ್ನಿಕೃಷ್ಣನ್‌ರವರ ಕೋಣೆಯಲ್ಲಿ ಹನ್ನೊಂದು ಪುಟಗಳ ಡೆತ್‌ನೋಟ್‌ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಕ್ಷನ್ 174 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.