ಮತ್ತೆ ಈ ಬಾರಿಯೂ ಕಳೆದ ಬಾರಿಯಂತೆ ಕೊರೋನಾ ಮಹಾಮಾರಿ ಅಟ್ಟಹಾಸ ಜೋರಾಗಿದೆ. ಈ ನಿಟ್ಟಿನಲ್ಲಿ ಪವಿತ್ರ ಚಾರ್‌ಧಾಮ್ ಯಾತ್ರೆ ಸ್ಥಗಿತವಾಗುವ ಸಾಧ್ಯತೆ ಇದೆ. 

ಜಮ್ಮು/ಹೃಷಿಕೇಶ (ಏ.23): ದೇಶದಲ್ಲಿ ಕೊರೋನಾ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕಾಶ್ಮೀರದ ಅಮರನಾಥ ವಾರ್ಷಿಕ ಯಾತ್ರೆ ನೋಂದಣಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ಬಲ್ತಾಲ್‌ ಮತ್ತು ಚಂದಾನ್ವಾರಿ ಮಾರ್ಗದ ಅಮರನಾಥ ಯಾತ್ರೆಗೆ ಆಫ್‌ಲೈನ್‌ ಮತ್ತು ಆನ್‌ಲೈನ್‌ ನೋಂದಣಿಯು ಕ್ರಮವಾಗಿ ಏ.1 ಮತ್ತು ಏ.15ರಿಂದ ಆರಂಭವಾಗಿತ್ತು. ಸದ್ಯದ ವೇಳಾಪಟ್ಟಿಪ್ರಕಾರ, ಸುಮಾರು 3,880 ಮೀಟರ್‌ ಎತ್ತರದಲ್ಲಿರುವ ಅಮರನಾಥ ದೇಗುಲ ಯಾತ್ರೆ ಎರಡೂ ಮಾರ್ಗಗಳಿಂದ ಜೂ.28ರಂದು ಆರಂಭವಾಗಿ ಆಗಸ್ಟ್‌ 22ರಂದು ಮುಕ್ತಾಯಗೊಳ್ಳಬೇಕಿದೆ.

ಕೊರೋನಾ ಅಟ್ಟಹಾಸ : ವಿಜ್ಞಾನಿಗಳ ತಂಡ ನೀಡಿದೆ ಎಚ್ಚರಿಕೆ ! ...

ಚಾರ್‌ಧಾಮ ಯಾತ್ರೆ ಮೇಲೂ ಕರಿನೆರಳು: ಈ ನಡುವೆ ಕೊರೋನಾ ಭೀತಿ ಉತ್ತರಾಖಂಡದ ಪ್ರಸಿದ್ಧ ಚಾರ್‌ಧಾಮ ಯಾತ್ರೆ ಮೇಲೂ ಕರಿನೆರಳು ಬೀರಿದೆ. ಯಾತ್ರೆಯು ಮೇ.14ರಿಂದ ಆರಂಭವಾಗಲಿದೆ. ಆದರೂ ಈವರೆಗೆ ಯಾತ್ರಾರ್ಥಿಗಳು ಬಸ್‌ ಟಿಕೆಟ್‌ ಕಾಯ್ದಿರಿಸಿಲ್ಲ. ಸಾಮಾನ್ಯವಾಗಿ ಈ ಸಮಯದಲ್ಲಿ ಕನಿಷ್ಠ 500 ಬಸ್‌ಗಳ ಟಿಕೆಟ್‌ಗಳನ್ನು ಕಾಯ್ದಿರಿಸಲಾಗುತ್ತಿತ್ತು.

ಗಮನಿಸಿ : ನಾಡಿನ ಪ್ರಮುಖ ದೇಗುಲಗಳಿಗೆ ಸಾರ್ವಜನಿಕ ಪ್ರವೇಶ ಬಂದ್‌ ...

ಈಗಾಗಲೇ ದೇಶದಲ್ಲಿ ಲಕ್ಷ ಲಕ್ಷ ಸಂಖ್ಯೆಯಷ್ಟು ಪ್ರಕರಣಗಳು ವರದಿಯಾಗುತ್ತಿವೆ. ಸಾವಿನ ಸಂಖ್ಯೆಯೂ ಹೆಚ್ಚಾಗಿದ್ದು ಇನ್ನೂ ಮಹಾಮಾರಿ ಅಟ್ಟಹಾಸ ಏರಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.