ಚಾರ್‌ಧಾಮ್‌ ಯಾತ್ರೆ: 2 ತಿಂಗಳಲ್ಲಿ 203 ಭಕ್ತರ ಸಾವು: ಹೃದಯಾಘಾತದಿಂದ ಮೃತಪಟ್ಟವರೇ ಹೆಚ್ಚು

ಪವಿತ್ರ ಚಾರ್‌ಧಾಮ್‌ ಯಾತ್ರೆ ಆರಂಭವಾಗಿ 2 ತಿಂಗಳು ಪೂರ್ಣಗೊಳ್ಳುವುದಕ್ಕೂ ಮೊದಲೇ ಕಡಿಮೆ ಅವಧಿಯಲ್ಲೇ 203 ಯಾತ್ರಿಕರು ಸಾವಿಗೀಡಾಗಿದ್ದಾರೆ. ಇವರಲ್ಲಿ ಬಹುತೇಕರು ಹೃದಯಾಘಾತದಿಂದ ಮರಣ ಹೊಂದಿದ್ದಾರೆ ಎಂದು ಉತ್ತರಾಖಂಡ ತುರ್ತು ಕಾರ್ಯಾಚರಣೆ ಕೇಂದ್ರ ಬಿಡುಗಡೆ ಮಾಡಿರುವ ದತ್ತಾಂಶದಿಂದ ತಿಳಿದು ಬಂದಿದೆ.

Chardham Yatra Despite a health advisory 203 pilgrims have died so far due to harsh weather akb

ಡೆಹರಾಡೂನ್‌: ಪವಿತ್ರ ಚಾರ್‌ಧಾಮ್‌ ಯಾತ್ರೆ ಆರಂಭವಾಗಿ 2 ತಿಂಗಳು ಪೂರ್ಣಗೊಳ್ಳುವುದಕ್ಕೂ ಮೊದಲೇ ಕಡಿಮೆ ಅವಧಿಯಲ್ಲೇ 203 ಯಾತ್ರಿಕರು ಸಾವಿಗೀಡಾಗಿದ್ದಾರೆ. ಇವರಲ್ಲಿ ಬಹುತೇಕರು ಹೃದಯಾಘಾತದಿಂದ ಮರಣ ಹೊಂದಿದ್ದಾರೆ ಎಂದು ಉತ್ತರಾಖಂಡ ತುರ್ತು ಕಾರ್ಯಾಚರಣೆ ಕೇಂದ್ರ ಬಿಡುಗಡೆ ಮಾಡಿರುವ ದತ್ತಾಂಶದಿಂದ ತಿಳಿದು ಬಂದಿದೆ. 97 ಯಾತ್ರಿಗಳು ಕೇದಾರನಾಥ ಯಾತ್ರೆ ದಾರಿಯಲ್ಲಿ, 51 ಮಂದಿ ಬದರೀನಾಥ ಧಾಮ (Bhadarinath), 13 ಮಂದಿ ಗಂಗೋತ್ರಿ ಮತ್ತು 42 ಮಂದಿ ಯಮುನೋತ್ರಿ ಯಾತ್ರೆಯ ವೇಳೆ ಸಾವಿಗೀಡಾಗಿದ್ದಾರೆ. ಮೇ 3ರಿಂದ ಆರಂಭವಾದ ಯಾತ್ರೆಯಲ್ಲಿ ಈವರೆಗೆ ಸುಮಾರು 25ಕ್ಕೂ ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ. ಈ ಬಾರಿ ಯಾತ್ರಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುವಂತೆ ಸರ್ಕಾರ ಈ ಮೊದಲೇ ಸೂಚಿಸಿತ್ತು.

ಕಾಶಿಯಾತ್ರೆಗೆ 30000 ಜನರಿಗೆ ಸರ್ಕಾರದಿಂದ ತಲಾ 5000

ಕಾಶಿಯಾತ್ರೆಗೆ ರಾಜ್ಯದ ಜನರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಕಾಶಿ ಯಾತ್ರೆ ಯೋಜನೆಗೆ ಮಾರ್ಗಸೂಚಿ ಅಂತಿಮಗೊಳಿಸಿ ಸರ್ಕಾರ ಅಂತಿಮ ಆದೇಶ ಹೊರಡಿಸಿದ್ದು, ಏ.1ರಿಂದ ಪೂರ್ವಾನ್ವಯವಾಗುವಂತೆ 30 ಸಾವಿರ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ರೂ. ನೀಡುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ಇನ್ನು ಮುಂದೆ ಕಾಶಿ ಯಾತ್ರೆ ಕೈಗೊಳ್ಳುವ 18 ವರ್ಷ ಮೇಲ್ಪಟ್ಟವರು ಸೂಕ್ತ ದಾಖಲೆಗಳನ್ನು ಸಲ್ಲಿಸಿ 5 ಸಾವಿರ ರೂ. ಸಹಾಯಧನ ಪಡೆಯಬಹುದು. 2022ರ ಏ.1ರಿಂದ ಜೂ.30ರ ನಡುವೆ ಈಗಾಗಲೇ ಕಾಶಿಯಾತ್ರೆ ಕೈಗೊಂಡಿದ್ದರೆ ಅಂತಹವರು ಕಾಶಿಯಾತ್ರೆ ಮಾಡಿರುವ ಕುರಿತು ಸೂಕ್ತ ದಾಖಲೆಗಳನ್ನು ಸಲ್ಲಿಸಿ ಹಣ ಪಡೆಯಬಹುದು.

ಪ್ರೋತ್ಸಾಹಧನಕ್ಕೆ ಮಾರ್ಗಸೂಚಿಗಳು:

ಕರ್ನಾಟಕದ ಕಾಯಂ ನಿವಾಸಿಗಳು ಮಾತ್ರ ಧನ ಸಹಾಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಹೀಗಾಗಿ ಇದಕ್ಕೆ ಪೂರಕವಾದ ಯಾವುದಾದರೂ ಒಂದು ದಾಖಲೆ ಕಡ್ಡಾಯವಾಗಿ ನೀಡಬೇಕು. ಯಾತ್ರಾರ್ಥಿಗಳು ಏ.1ಕ್ಕೆ 18 ವರ್ಷ ವಯಸ್ಸು ಪೂರೈಸಿರಬೇಕು. ಇದಕ್ಕಾಗಿ ದಾಖಲೆಯನ್ನೂ ಸಲ್ಲಿಸಬೇಕು.

ಇನ್ನು ಏ.1ರಿಂದ ಜೂ.30ರ ನಡುವೆ ಯಾತ್ರೆ ಕೈಗೊಂಡಿರುವವರು ಕಾಶಿ ವಿಶ್ವನಾಥಸ್ವಾಮಿ ದೇವಾಲಯಕ್ಕೆ (Kashi vishwanath Temple) ತೆರಳಲು ಮುಂಗಡವಾಗಿ ಕಾಯ್ದಿರಿಸಿದ ಅಥವಾ ಹಿಂದಿರುಗಿದ ಬಗ್ಗೆ ಕಾಯ್ದಿರಿಸಿದ ಟಿಕೆಟ್‌, ಪೂಜಾ ರಶೀದಿ ಸೇರಿದಂತೆ ದೇವಾಲಯಕ್ಕೆ ಹೋಗಿ ಬಂದಿರುವ ಬಗ್ಗೆ ದಾಖಲೆಗಳನ್ನು ಖುದ್ದಾಗಿ ಧಾರ್ಮಿಕ ಇಲಾಖೆಯ ಆಯುಕ್ತರ ಕಚೇರಿಗೆ ಸಲ್ಲಿಸಬೇಕು.

Char Dham Road Project: 900 ಕಿಮೀ ಡಬಲ್‌ಲೇನ್‌ ರಸ್ತೆಗೆ ಸುಪ್ರೀಂ ಅಸ್ತು!

ಇನ್ನು ಜುಲೈ 1ರಿಂದ ಯಾತ್ರೆ ಕೈಗೊಳ್ಳುವವರು ಸಂಬಂಧಿಸಿದ ದಾಖಲೆಗಳನ್ನು ವಾರಣಾಸಿಯ (Varanasi) ಕರ್ನಾಟಕ (Karnataka) ರಾಜ್ಯ ಛತ್ರದ ಕಚೇರಿ ವ್ಯವಸ್ಥಾಪಕರ ಬಯೋಮೆಟ್ರಿಕ್‌ ದೃಢೀಕರಣದ ವಿವರಗಳೊಂದಿಗೆ ಆನ್‌ಲೈನ್‌ ಅಥವಾ ನೇರವಾಗಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಬಯೋಮೆಟ್ರಿಕ್‌ ದೃಢೀಕರಣ ಇಲ್ಲದಿದ್ದರೆ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಒಬ್ಬರಿಗೆ ಒಂದೇ ಬಾರಿ ಹಣ ಪಡೆಯಲು ಅವಕಾಶವಿದ್ದು ರಾಷ್ಟ್ರೀಕೃತ ಬ್ಯಾಂಕ್‌ ಖಾತೆಯನ್ನೇ ನೀಡಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಚಾರ್‌ಧಾಮ್‌ ಯಾತ್ರೆಗೆ ಷರತ್ತಿನ ಅನುಮತಿ

ವಿಶೇಷ ರೈಲು ವ್ಯವಸ್ಥೆ:

ಇನ್ನು ಕಾಶಿಯಾತ್ರೆ ಯೋಜನೆ ಜೊತೆಗೆ 'ಭಾರತ್‌ ಗೌರವ್‌' ಯೋಜನೆಯಡಿ ಕಾಶಿ (Kashi) ಯಾತ್ರೆಗೆ ವಿಶೇಷ ರೈಲು ವ್ಯವಸ್ಥೆ ಮಾಡಲು ಸಹ ಪ್ರಯತ್ನ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯ ಮುಜರಾಯಿ ಇಲಾಖೆಯು ಕೇಂದ್ರ ರೈಲ್ವೆ ಇಲಾಖೆಯೊಂದಿಗೆ ಚರ್ಚಿಸಿದ್ದು, ಸದ್ಯದಲ್ಲೇ ವಿಶೇಷ ರೈಲು ಕಾರ್ಯಾಚರಣೆ ಆರಂಭವಾಗಲಿದೆ ಎಂದು ಶಶಿಕಲಾ ಜೊಲ್ಲೆ (Shashikala jolle) ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios