Asianet Suvarna News Asianet Suvarna News

Punjab Assembly Polls: ಚನ್ನಿ ಎರಡೂ ಕ್ಷೇತ್ರಗಳಲ್ಲೂ ಸೋಲುತ್ತಾರೆ: ಕೇಜ್ರಿವಾಲ್‌

ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಸ್ಫರ್ಧಿಸುತ್ತಿರುವ 2 ಕ್ಷೇತ್ರಗಳಲ್ಲೂ ಸೋಲುತ್ತಾರೆ. ಇದನ್ನು 3 ಬಾರಿ ನಾವು ನಡೆಸಿರುವ ಸಮೀಕ್ಷೆ ದೃಢಪಡಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಭಾನುವಾರ ಹೇಳಿದ್ದಾರೆ.

Charanjit Singh Channi to lose from both seats claims Arvind Kejriwal gvd
Author
Bangalore, First Published Feb 14, 2022, 12:37 AM IST | Last Updated Feb 14, 2022, 12:38 AM IST

ಅಮೃತಸರ (ಫೆ.14): ಪಂಜಾಬ್‌ (Punjab) ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ (Charanjit Singh Channi) ಅವರು ಸ್ಫರ್ಧಿಸುತ್ತಿರುವ 2 ಕ್ಷೇತ್ರಗಳಲ್ಲೂ ಸೋಲುತ್ತಾರೆ. ಇದನ್ನು 3 ಬಾರಿ ನಾವು ನಡೆಸಿರುವ ಸಮೀಕ್ಷೆ ದೃಢಪಡಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ (Arvind Kejriwal) ಭಾನುವಾರ ಹೇಳಿದ್ದಾರೆ. ಅಮೃತಸರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ‘ಚನ್ನಿ ಅವರು ಚಮಕೌರ್‌ ಸಾಹಿಬ್‌ ಮತ್ತು ಭದೌರ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ 2 ಕ್ಷೇತ್ರಗಳಲ್ಲೂ ನಾವು ಮೂರು ಬಾರಿ ಚುನಾವಣಾ ಸಮೀಕ್ಷೆ ನಡೆಸಿದ್ದೇವೆ. 

ಚನ್ನಿ ಅವರು 2 ಕ್ಷೇತ್ರದಲ್ಲೂ ಸೋಲುತ್ತಾರೆ. ಅವರು ಈ ಬಾರಿ ಶಾಸಕರೂ ಆಗುವುದಿಲ್ಲ. ಹಾಗಾದರೆ ಪಂಜಾಬ್‌ನ ಮುಖ್ಯಮಂತ್ರಿ ಯಾರಾಗುತ್ತಾರೆ’ ಎಂದು ವ್ಯಂಗ್ಯವಾಡಿದರು. ‘ಆಮ್‌ಆದ್ಮಿ ಪಕ್ಷ ಚಮಕೌರ್‌ನಲ್ಲಿ ಶೇ.52 ಮತ್ತು ಭದೌರ್‌ನಲ್ಲಿ ಶೇ.48ರಷ್ಟುಮತ ಪಡೆಯಲಿದೆ. ಕಾಂಗ್ರೆಸ್‌ ಪಕ್ಷ ತನ್ನ ಒಳಜಗಳಗಳಿಂದ ಸರ್ಕಸ್‌ ಆಗಿ ಮಾರ್ಪಟ್ಟಿದೆ. ಒಳಗೊಳಗೇ ಜಗಳ ಆಡುತ್ತಿರುವವರು ಪಂಜಾಬ್‌ ಅನ್ನು ರಕ್ಷಿಸಲು ಹೇಗೆ ಸಾಧ್ಯ?’ ಎಂದು ಕೇಳಿದರು.

ಎಎಪಿ ಲೂಟಿ ಮಾಡಲು ಪಂಜಾಬ್‌ಗೆ ಬಂದಿದೆ: ಪಂಜಾಬ್‌ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಎಎಪಿ ವಿರುದ್ಧ ವಾಗ್ದಾಳಿ ನಡೆಸಿರುವ ಪಂಜಾಬ್ ಸಿಎಂ  ಚರಣ್‌ಜಿತ್‌ ಸಿಂಗ್‌ ಚನ್ನಿ ಭಾರತಕ್ಕೆ ಬ್ರಿಟಿಷರು ಲೂಟಿ ಮಾಡಲು ಬಂದಂತೆ ಪಂಜಾಬ್‌ಗೆ ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರೀವಾಲ್‌ ಹಾಗೂ ಅವರ ದೆಹಲಿ ಕುಟುಂಬವಾದಂತಹ ರಾಘವ್‌ ಚಡ್ಡಾ ಮುಂತಾದವರು ಪಂಜಾಬ್‌ನ್ನು ಲೂಟಿ ಮಾಡಲು ಬಂದಿದ್ದಾರೆ. 

AAP ಪ್ರಾಮಾಣಿಕ ಎಂಬ ಪುರಾವೆಯನ್ನು ಮೋದಿಯೇ ನೀಡಿದ್ದಾರೆ: Arvind Kejriwal

ಆದರೆ ಪಂಜಾಬ್‌, ಬ್ರಿಟಿಷರು ಮೊಘಲರಿಗೆ ಮಾಡಿದಂತೆ ಹೊರಗಿನವರಿಗೆ(ಎಎಪಿ) ಅವರ ನಿಜವಾದ ಜಾಗ ತೋರಿಸಲಿದೆ ಎಂದು  ಚರಣ್‌ಜಿತ್‌ ಸಿಂಗ್‌ ಚನ್ನಿ ಹೇಳಿದರು.  117 ಸದಸ್ಯ ಬಲದ ಪಂಜಾಬ್‌ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 20ರಂದು ಪಂಜಾಬ್ ಚುನಾವಣೆ ನಡೆಯಲಿದ್ದು, ಮಾರ್ಚ್‌ 10 ರಂದು ಫಲಿತಾಂಶ ಹೊರ ಬರಲಿದೆ.  

ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಯ ನಡುವೆಯೇ ಎಲ್ಲಾ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯುವ ಯತ್ನದಲ್ಲಿವೆ. ಏತನ್ಮಧ್ಯೆ, ಇಂಡಿಯಾ ನ್ಯೂಸ್- ಜನ್ ಕಿ ಬಾತ್ ಮಾದರಿಯನ್ನು ಆಧರಿಸಿ ಅಭಿಪ್ರಾಯ ಸಂಗ್ರಹ ಸಮೀಕ್ಷೆಯನ್ನು ನಡೆಸಿದೆ.  ಇದರ ಪ್ರಕಾರ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು ಗೆಲುವನ್ನು ಸಾಧಿಸುವ ನಿರೀಕ್ಷೆ ಇದೆ. 60-66 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಶೇಕಡಾ 41ರಿಂದ - 42% ಮತ ಹಂಚಿಕೆಯಾಗುವ ಅಂದಾಜು ಇದೆ ಎಂದು ಸಮೀಕ್ಷೆ ತಿಳಿಸಿದೆ. 

ಇತ್ತೀಚೆಗಷ್ಟೇ ಕಾಂಗ್ರೆಸ್‌ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದು, ಕಾಂಗ್ರೆಸ್ ಕೇವಲ 33-39 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಹೀಗಿದ್ದರೂ 34% - 35% ಮತ ಹಂಚಿಕೆಯನ್ನು ನಿರೀಕ್ಷಿಸಲಾಗಿದೆ. ಮಾಲ್ವಾ ಮತ್ತು ಮಜಾದಲ್ಲಿ ಆಮ್ ಆದ್ಮಿ ಪಕ್ಷವು ಭಾರೀ ಲಾಭವನ್ನು ಗಳಿಸುವ ನಿರೀಕ್ಷೆಯಿದೆ. 

ಸೋಫಾ ಮಾರಲು ಹೋಗಿ 34,000 ಕಳೆದುಕೊಂಡ ಸಿಎಂ ಕೇಜ್ರಿವಾಲ್‌ ಪುತ್ರಿ!

ಅದೇ ಸಮಯದಲ್ಲಿ, ಕಾಂಗ್ರೆಸ್ ದೋವಾಬ್‌ನಿಂದ ಲಾಭ ಪಡೆಯುವ ನಿರೀಕ್ಷೆಯಿದೆ. ಈ ಸಮೀಕ್ಷೆಗಾಗಿ ಸುಮಾರು 8 ಸಾವಿರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಜನವರಿ 31 ರಿಂದ ಫೆಬ್ರವರಿ 5 ರ ನಡುವೆ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ, 18-25 ವರ್ಷ ವಯಸ್ಸಿನ 10%, 25-35 ವರ್ಷದ 30%, 35-45 ವರ್ಷ ವಯಸ್ಸಿನ 45% ಮತ್ತು 55+ ವರ್ಷ ವಯಸ್ಸಿನ 15% ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ.

Latest Videos
Follow Us:
Download App:
  • android
  • ios