ನವದೆಹಲಿ(ಫೆ.10): ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪುತ್ರಿ ಹರ್ಷಿತಾ ಕೇಜ್ರಿವಾಲ್‌ ಆನ್‌ಲೈನ್‌ ಮೂಲಕ ಹಳೆಯ ಸೋಫಾ ಮಾರಲು ಹೋಗಿ 34,000 ರು. ಕಳೆದುಕೊಂಡು ಘಟನೆ ನಡೆದಿದೆ.

ಹರ್ಷಿತಾ ಇ-ಕಾಮರ್ಸ್‌ ವೇದಿಕೆ ಒಎಲ್‌ಎಕ್ಸ್‌ನಲ್ಲಿ ಹಳೆಯ ಸೋಫಾ ಮಾರಲು ಹೋಗಿದ್ದಾರೆ. ವ್ಯಕ್ತಿಯೋರ್ವ ಆ ಸೋಫಾ ಕೊಂಡುಕೊಳ್ಳುವುದಾಗಿ ಆನ್‌ಲೈನ್‌ ಮೂಲಕವೇ ಹರ್ಷತಾರನ್ನು ಸಂಪರ್ಕಿಸಿದ್ದಾನೆ. ಮೊದಲಿಗೆ ಸೋಫಾದ ಹಣಕೊಡುವುದಾಗಿ ಹೇಳಿ ಬಾರ್‌ಕೋಡ್‌ ಕಳುಹಿಸಿ ಸ್ಕಾ್ಯನ್‌ ಮಾಡುವಂತೆ ಹೇಳಿದ್ದಾನೆ.

ನಂಬಿಕೆ ಗಳಿಸಲು ಸಣ್ಣಮೊತ್ತದ ಹಣವನ್ನೂ ಹಾಕಿದ್ದಾನೆ. ಬಳಿಕ ಮತ್ತೊಂದು ಬಾರ್‌ಕೋಡ್‌ ಕಳುಹಿಸಿದ್ದಾನೆ. ಅದರಲ್ಲಿ ಸ್ಕಾ್ಯನ್‌ ಮಾಡುತ್ತಿದ್ದಂತೆಯೇ ಹರ್ಷಿತಾ ಬ್ಯಾಂಕ್‌ ಖಾತೆಯಿಂದ ಎರಡು ಬಾರಿ ಒಟ್ಟು 34,000 ರು. ಕಡಿತಗೊಂಡಿದೆ. ಈ ಪ್ರಕರಣ ಸಂಬಂಧ ಸಿವಿಲ್‌ ಲೈನ್ಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.