ನವದೆಹಲಿ(ಏ.26): ಕೊರೋನಾ ವೈರಸ್ ದೇಶದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ತಂದಿಟ್ಟಿದೆ. ಆದರೆ ಇದೇ ಸಂದರ್ಭವನ್ನು ಬಳಸಿಕೊಂಡು ಹಲವರು ಸುಳ್ಳು ಸುದ್ದಿಗಳನ್ನು ಹರಡಿ ಜನರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ಕೆಲ ಮಾಧ್ಯಮಗಳು ಲಸಿಕೆಯಿಂದ ಅಪಾಯ ಹೆಚ್ಚು, ಲಸಿಕೆ ಅನುಮೋದನೆ ರಾಜಕೀಯ ನಾಟಕ ಎಂಬ ಕೆಲ ಇಂಗ್ಲೀಷ್ ಮಾಧ್ಯಮ ವರದಿಗೆ ರಾಜ್ಯಸಭಾ ಸದಸ್ಯ, ಬಿಜೆಪಿ ವಕ್ತಾರ ರಾಜೀವ್ ಚಂದ್ರಶೇಖರ್ ಗರಂ ಆಗಿದ್ದಾರೆ.

ಸೋಂಕಿತರ ನೆರವಿಗೆ ಧಾವಿಸಿದ ರಾಜೀವ್ ಚಂದ್ರಶೇಖರ್; ಬೆಂಗಳೂರು ಪ್ರತಿಷ್ಠಾನದಿಂದ ಆಕ್ಸಿಜನ್ ಪೂರೈಕೆ!...

ಇಂಗ್ಲೀಷ್ ಮಾಧ್ಯಮವೊಂದು ಲಸಿಕೆ ಕುರಿತು ಸುಳ್ಳು ಸುದ್ದಿಯನ್ನು ಪ್ರಕಟಿಸಿದೆ. ಇದರಲ್ಲಿ ಕೋವಾಕ್ಸಿನ್ ಲಸಿಕೆಗ ಅನುಮತಿ ನೀಡಿರುವುದು ರಾಜಕೀಯ ನಾಟಕ. ಆತ್ಮನಿರ್ಭರ್ ಹೆಸರಲ್ಲಿ ಮಾಡಿದ ನಾಟಕ ಎಂದು ವರದಿ ಪ್ರಕಟಿಸಿದೆ. ಭಾರತೀಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ. ಹೀಗಾಗಿ ಲಸಿಕೆಯಿಂದ ಭಾರತಕ್ಕೆ ಅಪಾಯ ಹೆಚ್ಚು ಎಂದು ವರದಿ ಪ್ರಕಟಿಸಿದೆ. ಈ ರೀತಿ ಸುಳ್ಳು ಸುದ್ದಿ ಕುರಿತು ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.

 

ಇದು ಬೇಜವಾಬ್ದಾರಿ ಹಾಗೂ ಅಸಮರ್ಪಕ ಪತ್ರಿಕೋದ್ಯಮ. ವಿಜ್ಞಾನ ಹಾಗೂ ಔಷಧಿ ಕುರಿತ ಸತ್ಯವನ್ನು ಮರೆಮಾಚಿ ಗೊಂದಲ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಕೊರೋನಾದಿಂದ ಮೃತರಾದ ಶೇಕಡಾ 99ರಷ್ಟು ಮಂದಿ ಲಸಿಕೆ ಹಾಕಿಲ್ಲ ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ, ನಂದನ್ ನೀಲೆಕೆಣಿ, ರತನ್ ಟಾಟಾ ಸೇರಿದಂತೆ ಹಲವರು ಲಸಿಕೆ ನೆರವಾಗಲು ದೇಣಿಗೆ ನೀಡಿದರೆ, ಇದನ್ನೇ ಇತರರು ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.