ಸೋಂಕಿತರ ನೆರವಿಗೆ ಧಾವಿಸಿದ ರಾಜೀವ್ ಚಂದ್ರಶೇಖರ್; ಬೆಂಗಳೂರು ಪ್ರತಿಷ್ಠಾನದಿಂದ ಆಕ್ಸಿಜನ್ ಪೂರೈಕೆ!
ದೇಶದಲ್ಲಿ ಕೊರೋನಾ ತಾಂಡವವಾಡುತ್ತಿದೆ. ದೇಶದ ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಕಾಡುತ್ತಿದೆ. ಇದೀಗ ದೇಶ ವಿದೇಶಗಳಿಂದ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಈ ಸಂಕಷ್ಟದ ಸಮಯದಲ್ಲಿ ಸೋಂಕಿತರ ಜೀವ ಉಳಿಸಿಲು ಇದೀಗ ನಮ್ಮ ಬೆಂಗಳೂರು ಫೌಂಡೇಶನ್ ಸ್ಥಾಪಕ ಟ್ರಸ್ಟಿ ರಾಜೀವ್ ಚಂದ್ರಶೇಖರ್ ನೆರವು ನೀಡಿದ್ದಾರೆ.
ಬೆಂಗಳೂರು(ಏ.26): ಕೊರೋನಾ ವೈರಸ್ 2ನೇ ಅಲೆಗೆ ದೇಶವೇ ತತ್ತರಿಸಿದೆ. ಪ್ರತಿದಿನ 3 ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದೆ. ಸೋಂಕಿತರು ಆಸ್ಪತ್ರೆ ಬೆಡ್ ಸಿಗದೆ ಪರದಾಡುತ್ತಿದ್ದಾರೆ. ಬೆಡ್ ಸಿಕ್ಕವರು ಆಕ್ಸಿಜನ್ ಕೊರತೆ ಎದುರಿಸುತ್ತಿದ್ದಾರೆ. ಪರಿಣಾಮ ಹಲವು ಸೋಂಕಿತರು ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶದಲ್ಲಿನ ಆಕ್ಸಿಜನ್ ಕೊರತೆ ನೀಗಿಸಲು ಸರ್ಕಾರ ಅವಿರತ ಪ್ರಯತ್ನ ಮಾಡುತ್ತಿದೆ. ಇದರ ನಡುವೆ ನಮ್ಮ ಬೆಂಗಳೂರು ಪ್ರತಿಷ್ಠಾನ ಟ್ರಸ್ಟಿ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸೋಂಕಿತರ ನೆರವಿಗೆ ಧಾವಿಸಿದ್ದಾರೆ.
ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ ಲಸಿಕೆ ಅಭಿಯಾನ
ಕೊರೋನಾ ಸೋಂಕಿತರ ಜೀವ ಉಳಿಸಲು ರಾಜೀವ್ ಚಂದ್ರಶೇಖರ್ 15 ಆಕ್ಸಿಜನ್ ಕಂಟೈನರ್ ಉಚಿತವಾಗಿ ನೀಡಿದ್ದಾರೆ. ಕೊರೋನಾ ಸೋಂಕಿತರಿಗೆ ನೆರವಾಗಲು ನಮ್ಮ ಬೆಂಗಳೂರು ಫೌಂಡೇಶನ್ ಆಕ್ಸಿಜನ್ ಅಭಿಯಾನ ಆರಂಭಿಸಿದೆ. ಈ ಅಭಿಯಾನದಡಿ ರಾಜೀವ್ ಚಂದ್ರಶೇಖರ್ 15 ಆಕ್ಸಿಜನ್ ಸಾಂದ್ರಕಗಳನ್ನು ನೀಡಿದ್ದಾರೆ.
"
ನಮ್ಮ ಬೆಂಗಳೂರು ಫೌಂಡೇಷನ್ ಜೊತೆ ಗುರುತಿಸಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ ಈಗಾಗಲೇ ತುರ್ತು ಆಕ್ಸಿಜನ್ ಅಗತ್ಯವಿದ್ದ ಸೋಂಕಿತರು ಹಾಗೂ ಆಸ್ಪತ್ರೆಗಳನ್ನು ಗುರುತಿಸಿ ವಿತರಿಸುವ ಕೆಲಸದಲ್ಲಿ ತೊಡಗಿದ್ದಾರೆ.
4.5 ಲಕ್ಷ ಜನರಿಗೆ NBF ನಿಂದ ನೆರವಿನ ಹಸ್ತ; 24 ಕೋಟಿ ರೂ ಮೌಲ್ಯದ ಆಹಾರ ವಿತರಣೆ
ಕರ್ನಾಟಕ ಕೊರೋನಾ 2ನೇ ಅಲೆಗೆ ನಲುಗಿದೆ. ಅದರಲ್ಲೂ ಪ್ರಮುಖವಾಗಿ ಬೆಂಗಳೂರು ಅತೀ ದೊಡ್ಡ ಸಾಂಕ್ರಾಮಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸೋಂಕಿತರು ಆಮ್ಲಜನಕ ಕೊರತೆ ಎದುರಿಸುತ್ತಿದ್ದಾರೆ. ಹೀಗಾಗಿ ನಮ್ಮ ಬೆಂಗಳೂರು ಫೌಂಡೇಷನ್ ಆಕ್ಸಿಜನ್ ಕೊರತೆ ನೀಗಿಸಲು ನಿರಂತರ ಪ್ರಯತ್ನ ಮಾಡುತ್ತಿದೆ.
ಕಳೆದ ವರ್ಷ ಕೊರೋನಾ ವೈರಸ್ ವಕ್ಕರಿಸಿದ ವೇಳೆ ಭಾರತ ಲಾಕ್‌ಡೌನ್ ಸಂಕಷ್ಟ ಎದುರಿಸಿತ್ತು. ಸಂದರ್ಭದಲ್ಲಿ ನಮ್ಮ ಬೆಂಗಳೂರು ಫೌಂಡೇಷನ್ 24 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಬಳಿಕ ಲಾಕ್‌ಡೌನ್ ಅವಧಿಯಲ್ಲಿ ಬೆಂಗಳೂರಿನಾದ್ಯಂತ 4.5 ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರ ಹಾಗೂ ದಿನಸಿ ನೀಡಿ ನೆರವಾಗಿದೆ.
ಲಾಕ್‌ಡೌನ್: ನೀವೂ ಸಹಾಯ ಮಾಡ್ಬೇಕಂದ್ರೆ ನಮ್ಮ ಬೆಂಗ್ಳೂರು ಫೌಂಡೇಶನ್ ಜತೆ ಕೈಜೋಡಿಸಿ
ನಮ್ಮ ಬೆಂಗಳೂರ ಪ್ರತಿಷ್ಠಾನ ಈಗಾಗಲೇ ಬಿಬಿಎಂಪಿ, ಪ್ರಾಥಮಿಕ ಆರೋಗ್ಯ ಕೇಂದ್ರ, ರೋಟರಿ ಜೊತೆ ಸೇರಿ ಅಪಾರ್ಟ್‌ಮೆಂಟ್ ಹಾಗೂ ಇತರೆಡೆಗಳಲ್ಲಿ ಅತೀ ದೊಡ್ಡ ವಾಕ್ಸಿನೇಶನ್ ಡ್ರೈವ್ ಆಯೋಜಿಸುತ್ತಿದೆ. ವಿವಿಧ ವಾರ್ಡ್‌ಗಳಲ್ಲಿ ನಾಗರೀಕರಿಗೆ ಲಸಿಕೆ ನೀಡುವ ಮಹತ್ ಕಾರ್ಯವನ್ನು ನಮ್ಮ ಬೆಂಗಳೂರು ಫೌಂಡೇಷನ್ ಮಾಡುತ್ತಿದೆ.
ಆಕ್ಸಿಜನ್ ಅಭಿಯಾನ ಸೇರಿದಂತೆ ಕೊರೋನಾ ವಿರುದ್ಧ ಹೋರಾಟಕ್ಕೆ ಕಾರ್ಪೋರೇಟರ್‌ಗಳು, ಸಾರ್ವಜನಿಕರು ಮುಂದೆ ಬಂದು ನೆರವು ನೀಡಬೇಕು. ಇದರಿಂದ ದೇಣಿಗೆ ನೀಡುವ ವ್ಯಕ್ತಿಗಳು ಆದಾಯ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು ಎಂದು ನಮ್ಮ ಬೆಂಗಳೂರು ಫೌಂಡೇಷನ್ ಮನವಿ ಮಾಡಿದೆ.
ಹೆಚ್ಚಿನ ವಿವರಗಳಿಗಾಗಿ 9591143888/7749737737 ಸಂಪರ್ಕಿಸಬಹುದು.
ಇಮೇಲ್: vinod.jacob@namma-bengaluru.org
usha.dhanraj@namma-bengaluru.org.