Asianet Suvarna News Asianet Suvarna News

chandrayaan 3 Updates: ಇಸ್ರೋ ಯಶಸ್ಸಿಗಾಗಿ ಲಕ್ನೋದಲ್ಲಿ ಮುಸ್ಲಿಮರಿಂದ ನಮಾಜ್‌!

ಬಹುನಿರೀಕ್ಷಿತ ಚಂದ್ರಯಾನ-3 ಯೋಜನೆಯ ಯಶಸ್ಸಿಗಾಗಿ ದೇಶದಲ್ಲಿ ವಿವಿದೆಡೆ ಪೂಜೆಗಳು ನಡೆಯುತ್ತಿವೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಮುಸ್ಲಿಮರು ನಮಾಜ್‌ ಮಾಡಿ ಇಸ್ರೋ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ.

chandrayaan 3 Muslims offer Namaz for isro success in Lucknow san
Author
First Published Aug 23, 2023, 11:00 AM IST | Last Updated Aug 23, 2023, 11:00 AM IST

ನವದೆಹಲಿ (ಆ.23): ಚಂದ್ರನ ಮೇಲೆ ಕಾಲಿಡುವ ಹಾದಿಯಲ್ಲಿರುವ ಭಾರತದ ಚಂದ್ರಯಾನ-3 ಯೋಜನೆಯ ವಿಕ್ರಮ್‌ ಲ್ಯಾಂಡರ್‌ನ ಯಶಸ್ಸಿಗಾಗಿ ಭಾರತೀಯರು ದೇವಾಲಯಗಳಲ್ಲಿ ಪೂಜೆ ಹಾಗೂ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಕೆ ಮಾಡುತ್ತಿದ್ದಾರೆ. ಇಂದು ವಿಕ್ರಮ್‌ ಲ್ಯಾಂಡರ್‌ ಸಂಜೆ 6.04 ನಿಮಿಷಕ್ಕೆ ಚಂದ್ರನ ನೆಲ ಸ್ಪರ್ಶ ಮಾಡಲಿದೆ. ಇದರ ಯಶಸ್ಸಿಗೆ ಹಾರೈಸಿ ಸೋಮವಾರ ಮುಸ್ಲಿಮರು ಲಕ್ನೋನ ಮಸೀದಿಯಲ್ಲಿ ನಮಾಜ್‌ ಮಾಡಿದ್ದಾರೆ. ಅದರೊಂದಿಗೆ ಇಸ್ಲಾಮಿಕ್‌ ಸೆಂಟರ್‌ ಆಫ್‌ ಇಂಡಿಯಾ ಕೂಡ ಚಂದ್ರಯಾನಸ-3ಯ ಯಶಸ್ವಿ ಲ್ಯಾಂಡಿಂಗ್‌ಗಾಗಿ ಪ್ರಾರ್ಥನೆ ಮಾಡಿದೆ. ಚಂದ್ರಯಾನ-3 ರ ಯಶಸ್ಸಿಗಾಗಿ ಮುಸ್ಲಿಮರು ಪ್ರಾರ್ಥಿಸುತ್ತಿರುವ ಈ ವೀಡಿಯೊ ಕೂಡ ಬಿಡುಗಡೆಯಾಗಿದೆ. ಅದರೊಂದಿಗೆ ರಾಮೇಶ್ವರಂ ಅಗ್ನಿ ತೀರ್ಥಂ ಅರ್ಚಕರ ಕ್ಷೇಮಾಭಿವೃದ್ಧಿ ಸಂಘದ ಅರ್ಚಕರು ಚಂದ್ರಯಾನ-3 ರ ಯಶಸ್ವಿ ಚಂದ್ರನ ಲ್ಯಾಂಡಿಂಗ್‌ಗಾಗಿ ಅಗ್ನಿ ತೀರ್ಥಂ ಬೀಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅದರೊಂದಿಗೆ ರಾಜಸ್ಥಾನದ ಅಜ್ಮೀರ್‌ ಶರೀಫರ್‌ ದರ್ಗಾದಲ್ಲಿ ಕೂಡ ಮುಸ್ಲಿಮರು ಚಂದ್ರಯಾನದ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇನ್ನು ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಕಾರ್ಯಕರ್ತರು ಶ್ರೀಗಣೇಶ್‌ ಮಂದಿರದಲ್ಲಿ ಹವನ ಮಾಡಿ ಚಂದ್ರಯಾನದ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ. ಇನ್ನು ಶಿವಸೇನೆಯ ಕಾರ್ಯಕರ್ತರರು ಪುಣೆಯ ಶ್ರೀ ಸಿದ್ಧಿ ವಿನಾಯಕ ಮಂದಿರದಲ್ಲಿ ಪೂಜೆ ಸಲ್ಲಿಸಿದ್ದಾರೆ. ಉತ್ತರಾಖಂಡದಲ್ಲಿ ಚಂದ್ರಯಾನ-3 ರ ಯಶಸ್ವಿ ಲ್ಯಾಂಡಿಂಗ್‌ಗಾಗಿ ಡೆಹ್ರಾಡೂನ್‌ನ ಮಾತಾ ವೈಷ್ಣೋದೇವಿ ಗುಹೆ ಯೋಗ ದೇವಸ್ಥಾನ ತಪಕೇಶ್ವರ ಮಹಾದೇವ್, ಹರಿದ್ವಾರದಲ್ಲಿ ಇಂದು ವಿಶೇಷ ಗಂಗಾಪೂಜೆಯನ್ನು ಮಾಡಲಾಯಿತು. ಇನ್ನು ಎಕ್ಸ್‌ ಮಾಲೀಕ ಎಲಾನ್‌ ಮಸ್ಕ್‌ ಕೂಡ ಭಾರತದ ಅತ್ಯಂತ ಮಹತ್ವದ ಚಂದ್ರಯಾನ ಪ್ರಾಜೆಕ್ಟ್‌ಗೆ ಶುಭ ಹಾರೈಸಿದ್ದಾರೆ.

ಲಂಡನ್‌ನಲ್ಲಿ, ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಭಾರತದ ಹೈ ಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರು, ಚಂದ್ರಯಾನದ ಯಶಸ್ಸು ಭಾರತದ ಮಹತ್ವವನ್ನು ಜಗತ್ತಿಗೆ ಸಾರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ. "ನನಗೆ, ಒಂದು ರಾಷ್ಟ್ರವಾಗಿ ಭಾರತದ ಗಮನಾರ್ಹ ಯಶಸ್ಸಿಗೆ ಇದಕ್ಕಿಂತ ದೊಡ್ಡ ಕಾರಣ ಇನ್ನೊಂದಿಲ್ಲ. ನಾನು ಇದನ್ನು ಕೇವಲ ಭಾರತೀಯ ರಾಜತಾಂತ್ರಿಕನಾಗಿ ಹೇಳುತ್ತಿಲ್ಲ ಆದರೆ ಹೆಮ್ಮೆಯ ಭಾರತೀಯನಾಗಿ ಹೇಳುತ್ತಿದ್ದೇನೆ" ಎಂದು ಅವರು ತಿಳಿಸಿದ್ದಾರೆ.

Chandrayaan-3: ಬಾಹ್ಯಾಕಾಶದ ಕತ್ತಲಲೋಕದ ಬಗ್ಗೆ ನೀವು ಮಿಸ್‌ ಮಾಡದೇ ನೋಡಬೇಕಾದ ಸಿನಿಮಾಗಳು!

"ಭಾರತವು ಬಹಳ ಕಡಿಮೆ ಆರ್ಥಿಕತೆಯನ್ನು ಹೊಂದಿದ್ದ ಸಮಯದಲ್ಲಿ ನಾವು ನಮ್ಮ ಬಾಹ್ಯಾಕಾಶ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಇಂದು ಇದು ಮಾನವ ಕಲ್ಪನೆಗೆ ಸೀಮಿತವಾದ ಬಾಹ್ಯಾಕಾಶ ಕಾರ್ಯಕ್ರಮವಾಗಿದೆ. ಚಂದ್ರನ ಮೇಲೆ ನೌಕೆಯನ್ನು ಇಳಿಸಲು ಸಾಧ್ಯವಾಗುವ ಕೆಲವೇ ರಾಷ್ಟ್ರಗಳಲ್ಲಿ ನಾವು ಸೇರುತ್ತೇವೆ' ಎಂದಿದ್ದಾರೆ.

Chandrayaan-3: ಸಾಫ್ಟ್ ಲ್ಯಾಂಡಿಂಗ್‌ ಲೈವ್‌ಸ್ಟ್ರೀಮ್ ನೋಡೋದೇಗೆ? ಲ್ಯಾಂಡಿಂಗ್ ಸವಾಲಾಗಿರೋಕೆ! ಇಲ್ನೋಡಿ..

Latest Videos
Follow Us:
Download App:
  • android
  • ios