Asianet Suvarna News Asianet Suvarna News

Ayodhya Ground Report: ರಾಮಮಂದಿರ ಮಾದರಿ ರಚನೆ ಮಾಡಿದ ವ್ಯಕ್ತಿ ಇವರು!

ಇಂದು ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರ ಹೀಗೇ ಇರಬೇಕು ಎನ್ನುವ ನಿಟ್ಟಿನಲ್ಲಿ ರಾಮ ಮಂದಿರದ ಮಾದರಿ ಮೂರು ದಶಕಗಳ ಹಿಂದೆಯೇ ನಿರ್ಮಾಣವಾಗಿತ್ತು  ಶ್ರೀರಾಮ ಜನ್ಮಭೂಮಿ ದೇವಸ್ಥಾನದ ಮಾದರಿಯನ್ನು ಕರಸೇವಕಪುರಂನಲ್ಲಿ ಸ್ಥಾಪಿಸಲಾಗಿದೆ. ಅದರ ತಯಾರಿಯ ಹಿಂದಿನ ಕಥೆ ಇಲ್ಲಿದೆ.
 

Chandrakant Sompura The Architect Who Has Designed Shri Ram Janmabhoomi temple model san
Author
First Published Dec 20, 2023, 6:55 PM IST

ಅಯೋಧ್ಯೆ (ಡಿ.20): ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಿಂದ ಅಯೋಧ್ಯೆ ರಾಮಮಂದಿರ ವಿವಾದ ತಲೆದೋರಿತ್ತು. ಇನ್ನೇನು ಈ ವಿವಾದ ಇತ್ಯರ್ಥವೇ ಆಗೋದಿಲ್ಲ ಎನ್ನುವ ಹಂತದಲ್ಲಿ ಈಗ ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣವಾಗಿದೆ. ಮುಂದಿನ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ. ನೀವು ಅಯೋಧ್ಯೆಗೆ ಹೋಗಿದ್ದರೆ, ಕರೆಸವಕಪುರಂನ ಕಟ್ಟಡದಲ್ಲಿ ಇರಿಸಲಾಗಿರುವ ಶ್ರೀ ರಾಮ ಜನ್ಮಭೂಮಿ ದೇವಾಲಯದ ಮಾದರಿಯನ್ನು ನೀವು ನೋಡಿರಬಹುದು. ಇಲ್ಲದಿದ್ದಲ್ಲಿ, ಅಯೋಧ್ಯೆ ರಾಮಮಂದಿರ ಎಂದು ಅಂತರ್ಜಾಲದಲ್ಲಿ ಸರ್ಚ್‌ ಮಾಡಿದಾಗ ಸಿಗುವ ದೇವಾಲಯದ ಮಾದರಿಯ ಚಿತ್ರವನ್ನು ನೋಡಿರಬೇಕು. ರಾಮಮಂದಿರದ ರೀತಿಯಲ್ಲೇ ಇದ್ದ ಮಾದರಿ ಅದಾಗಿತ್ತು.  ಶ್ರೀರಾಮ ಜನ್ಮಭೂಮಿ ದೇವಸ್ಥಾನದ ಮಾದರಿಯನ್ನು ಸಿದ್ಧಪಡಿಸಿದ್ದು ಹೇಗೆ ಎನ್ನುವ ವಿಚಾರ ಇಲ್ಲಿ ತಿಳಿಸಲಿದ್ದೇವೆ. ಇದೇ ಮಾದರಿಯನ್ನು ಇರಿಸಿಕೊಂಡು ಈಗಿರುವ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ.

1989ರ ಪ್ರಯಾಗ್‌ರಾಜ್‌ ಕುಂಭಮೇಳದಲ್ಲಿ ಪಾಸ್ ಆಗಿದ್ದ ಮಾದರಿ: ರಾಮ ಮಂದಿರದ  ಮಾದರಿಯನ್ನು 1989 ರ ಪ್ರಯಾಗ್ರಾಜ್ ಕುಂಭಮೇಳದಲ್ಲಿ ಸಂತರು ಒಪ್ಪಿಗೆ ನೀಡಿದ್ದರು. ಈ ಮಾದರಿಯನ್ನು ಪ್ರತಿ ಮನೆಯಲ್ಲೂ ಪೂಜಿಸಲಾಗುತ್ತದೆ. ಈ ಮಾದರಿಯ ಪ್ರಕಾರ ರಾಮಮಂದಿರದ ಅಡಿಪಾಯವನ್ನು ಹಾಕಲಾಗಿದೆ. ಆದರೆ, 2020ರಲ್ಲಿ ಅಡಿಗಲ್ಲು ಹಾಕುವ ವೇಳೆ ದೇವಾಲಯವನ್ನು ಮೂಲ ಮಾದರಿಯ ಎರಡು ಅಂತಸ್ತಿಗಿಂತ ಮೂತು ಅಂತಸ್ತಿಗೆ ಬದಲಾವಣೆ ಮಾಡಲಾಯಿತು.  ಈಗ ನೆಲ ಅಂತಸ್ತಿನ ಹೊರತಾಗಿ ಮೊದಲ ಮಹಡಿ ಮತ್ತು ಎರಡನೇ ಮಹಡಿ ಇದೆ. ಇದರ ಉದ್ದ ಅಗಲವೂ ಹೆಚ್ಚಿದೆ. ಮೊದಲು ಇದು 128 ಅಡಿ ಉದ್ದ ಮತ್ತು 155 ಅಡಿ ಅಗಲವಿತ್ತು. ಈಗ ಉದ್ದ 350 ಅಡಿ, ಅಗಲ 250 ಅಡಿ ಮತ್ತು ಎತ್ತರ 161 ಅಡಿ ಆಗಿದೆ ಆದರೆ ಮಾದರಿಯ ಭಾಗಗಳು ಒಂದೇ ಆಗಿವೆ. ದೇವಾಲಯದ ಎದುರಿನ ಸಿಂಹ, ನೃತ್ಯ ಮಂಟಪ, ಪವಿತ್ರ ಗರ್ಭಗುಡಿ. ಅದರಲ್ಲಿ ಕೀರ್ತನ ಮಂಟಪ ಮತ್ತು ಸತ್ಸಂಗ ಮಂಟಪಗಳನ್ನೂ ನಿರ್ಮಿಸಲಾಗಿದೆ. ಈಗ ಈ ಮಾದರಿಯೂ ವ್ಯಾಪಕವಾಗಿ ವೈರಲ್‌ ಆಗುತ್ತಿದೆ ಎಂದು ವಿಎಚ್‌ಪಿಯ ಪ್ರಾಂತೀಯ ಮಾಧ್ಯಮ ಉಸ್ತುವಾರಿ ಶರದ್ ಶರ್ಮಾ ಹೇಳುತ್ತಾರೆ.

ಗುಜರಾತಿನ ನಿವಾಸಿ ಚಂದ್ರಕಾಂತ್‌ ವಿ ಸೋಮ್‌ಪುರ ಅವರು ದೇವಾಲಯದ ನಿಜವಾದ ಮಾದರಿಯನ್ನು ನಿರ್ಮಾಣ ಮಾಡಿದ್ದರು. ಅವರ ಪೂರ್ವಜರು ಸೋಮನಾಥ ದೇವಾಲಯವನ್ನು ನಿರ್ಮಿಸಿದ್ದರು. ಅವರು ತಯಾರಿಸಿದ ಮಾದರಿಯು ಮರದಿಂದ ಮಾಡಲ್ಪಟ್ಟಿದೆ, ಅದನ್ನು ಕಾರ್ಯಾಗಾರದಲ್ಲಿ ಇರಿಸಲಾಗಿದೆ. ಜೈಪುರದ ನಿವಾಸಿ ವಿಜಯ್ ದುಡಿ ಎಂಬುವವರು ತಮ್ಮ ಇಚ್ಛೆಯಂತೆ ತಾಜ್ ಮಹಲ್ ಮತ್ತು ಇತರ ಕಲಾಕೃತಿಗಳನ್ನು ಯಾರಾದರೂ ಮಾಡಬಹುದಾದರೆ, ರಾಮಮಂದಿರದ ಮಾದರಿಯನ್ನು ಏಕೆ ಮಾಡಬಾರದು? ಎಂದು ಯೋಚನೆ ಮಾಡಿದ್ದರಯ. ಅವರು 2000 ರಲ್ಲಿ ದೇವಾಲಯದ ಮಾದರಿಯನ್ನು ತಯಾರಿಸಲು ಪ್ರಾರಂಭಿಸಿದರು ಮತ್ತು ದೇವಾಲಯವನ್ನು ನಿರ್ಮಿಸುವ ರೀತಿಯಲ್ಲಿಯೇ ನಿರ್ಮಿಸಿದರು. ಪ್ರತಿ ಸ್ತಂಭದಲ್ಲೂ ದೇವ-ದೇವತೆಗಳ ಚಿತ್ರಗಳನ್ನು ಕೆತ್ತಿದ್ದರು. ಈ ಮಾದರಿಯನ್ನು ತಯಾರಿಸಲು ಥರ್ಮಾಕೋಲ್ ಮತ್ತು ಮಾರ್ಬಲ್ ಧೂಳನ್ನು ಬಳಸಿಕೊಂಡಿದ್ದರು ಎಂದು ಶರದ್‌ ಶರ್ಮ ಹೇಳಿದ್ದಾರೆ.

ಮಾದರಿಯ ಒಳಭಾಗವನ್ನು 51000 ಸಣ್ಣ ಬಲ್ಬ್‌ಗಳನ್ನು ಬಳಸಿ ರಚಿಸಲಾಗಿದೆ. ಒಮ್ಮೆ ವಿಶ್ವ ಹಿಂದೂ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಗಿರಿರಾಜ್ ಕಿಶೋರ್ ಜೈಪುರಕ್ಕೆ ಹೋದಾಗ, ಅವರು ಆ ಮಾದರಿಯನ್ನು ನೋಡಿ ಅದನ್ನು ಪ್ರಯಾಗ್‌ರಾಜ್‌ಗೆ ತಂದಿದ್ದರು. ದೇವಾಲಯದ ಈ ಮಾದರಿಯನ್ನು 2001 ರಲ್ಲಿ ಪ್ರಯಾಗರಾಜ್‌ನ ಕುಂಭದಲ್ಲಿ ಇರಿಸಲಾಗಿತ್ತು. ರಾಮಮಂದಿರದ ಮಾದರಿಯನ್ನು ನೋಡಲು ಪ್ರವಾಸಿಗರು ಬರಲಾರಂಭಿಸಿದರು. ಕುಂಭ ಮುಗಿದ ನಂತರ, ಇದನ್ನು 2002 ರಲ್ಲಿ ಕರಸೇವಕಪುರಂನಲ್ಲಿರುವ ಕಟ್ಟಡಕ್ಕೆ ತರಲಾಯಿತು. ಅಂದಿನಿಂದ ದೇವಾಲಯದ ಈ ಮಾದರಿಯನ್ನು ಇಲ್ಲಿ ಸ್ಥಾಪಿಸಲಾಗಿದೆ. ಯಾವ ಮಾದರಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗುತ್ತಿದೆಯೋ ಅದೇ ಮಾದರಿಯಲ್ಲಿ ಶ್ರೀರಾಮ ಮಂದಿರವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಮಾದರಿಯನ್ನು ನಮ್ಮ ತೀರ್ಥಕ್ಷೇತ್ರದ ಜನರಿಗೆ ನೀಡಲಾಗುತ್ತಿದೆ.

Ayodhya Ground Report: ರಾಮರಾಜ್ಯದಂತೆ ಸಿಂಗಾರಗೊಳ್ಳುತ್ತಿದೆ ಶ್ರೀರಾಮನ ಅಯೋಧ್ಯೆ

ಶ್ರೀ ರಾಮ ಜನ್ಮಭೂಮಿ ದೇವಸ್ಥಾನದ ಮಾದರಿಯನ್ನು ಬಾಬಾ ಹಜಾರಿ ದಾಸ್ ನಿರ್ವಹಿಸುತ್ತಾರೆ. ಅವರು 1990 ರಲ್ಲಿ ಅಯೋಧ್ಯೆಗೆ ಬಂದಿದ್ದರು.  ಶಹಜಹಾನ್‌ಪುರದ ನಿವಾಸಿ ಬಾಬಾ ಹಜಾರಿ ದಾಸ್ ಅವರು ಬಾಬರಿ ಧ್ವಂಸದಿಂದ ಮಂದಿರ ನಿರ್ಮಾಣದವರೆಗೆ ಎಲ್ಲವನ್ನೂ ನೋಡಿಕೊಂಡು ಬಂದವರು. ಅವರು 1992 ರಲ್ಲಿ ಬಾಬ್ರಿ ಧ್ವಂಸ ಸಮಯದಲ್ಲಿ ಗಾಯಗೊಂಡಿದ್ದರು. ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ವರ್ಷಗಳಿಂದ ಶ್ರೀರಾಮ ದೇವಸ್ಥಾನದ ಮಾದರಿಯ ದರ್ಶನವನ್ನು ಭಕ್ತರಿಗೆ ನೀಡುತ್ತಿದ್ದಾರೆ ಎಂದು ಶರದ್‌ ಶರ್ಮ ಹೇಳಿದ್ದಾರೆ.

 Ayodhya Ground Report: ರಾಮಲಲ್ಲಾನ ಸಾರ್ವಜನಿಕ ದರ್ಶನ ಯಾವಾಗ ಆರಂಭ? ಇಲ್ಲಿದೆ ಡೀಟೇಲ್ಸ್‌

Follow Us:
Download App:
  • android
  • ios