ಹಿಂದೂಗಳ ಪವಿತ್ರ ದೇವಾಲಯದ ಬದ್ರಿನಾಥ್‌ನಲ್ಲಿ ನಮಾಝ್ ? ಈದ್ ದಿನ ಬದ್ರಿನಾಥ್‌ನಲ್ಲಿ ನಮಾಝ್ ನಡೆದಿದ್ದು ಹೌದಾ?

ಚಮೊಲಿ(ಜು.23): ಹಿಂದೂಗಳ ಪವಿತ್ರ ದೇವಸ್ಥಾನ ಬದ್ರಿನಾಥ್‌ನಲ್ಲಿ ಮುಸ್ಲಿಮರು ನಮಾಝ್ ಮಾಡಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಈದ್ ಹಬ್ಬದ ದಿನ ಮುಸ್ಲಿಮರು ಬದ್ರಿನಾಥ್‌ನಲ್ಲಿ ಸಮಾಝ್ ಮಾಡಿದ್ದಾರೆನ್ನುವುದು ಸುಳ್ಳು ಸುದ್ದಿ ಎಂದು ಚಮೋಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಊಹಾಪೋಹಗಳಿಗೆ ತೆರೆ ಎಳೆದ ಚಮೋಲಿ ಎಸ್‌ಪಿ ಯಶ್ವಂತ್ ಸಿಂಗ್ ದಾರಿ ತಪ್ಪಿಸುವ ಸುದ್ದಿಯನ್ನು ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

2006 ಸ್ಕೂಲ್‌ಟ್ರಿಪ್‌ ನಂತರ ಹಾಸಿಗೆ ಹಿಡಿದ ಬೆಂಗಳೂರು ಯುವತಿಗೆ 88 ರೂ ಲಕ್ಷ ಪರಿಹಾರ

ಬದ್ರಿನಾಥ್‌ನಲ್ಲಿ ಮುಸ್ಲಿಮರು ನಮಾಝ್ ಮಾಡಿದ್ದಾರೆಂಬುದು ಸಂಪೂರ್ಣ ಸುಳ್ಳು ಸುದ್ದಿ. ಸತ್ಯವೇನೆಂದರೆ ದೇವಾಲಯದ ಪಾರ್ಕಿಂಗ್ ಲಾಟ್ ನಿರ್ಮಾಣದಲ್ಲಿದ್ದ ಕೆಲಸಗಾರರಲ್ಲಿ ಕೆಲವು ಮುಸ್ಲಿಮರು ಸಮೀಪದಲ್ಲಿದ್ದ ಕೋಣೆಯಲ್ಲಿ ನಮಾಝ್ ಮಾಡಿದ್ದಾರೆ. ಯಾವುದೇ ಧ್ವನಿವರ್ಧಕ ಬಳಸಿಲ್ಲ. ಅಲ್ಲಿ ಮೌಲ್ವಿಯೂ ಇರಲಿಲ್ಲ. ನಮಾಝ್ ಮಾಡಿದವೆಲ್ಲ ಕೊರೋನಾ ನಿಯಮ ಅನುಸರಿಸಿದ್ದರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Scroll to load tweet…

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಭಜರಂಗದಳದ ಸದಸ್ಯರು ಬುಧವಾರ ಉತ್ತರಾಖಂಡ ಕ್ಯಾಬಿನೆಟ್ ಸಚಿವ ಸತ್ಪಾಲ್ ಮಹಾರಾಜ್ ಅವರನ್ನು ಭೇಟಿಯಾಗಿ ಬದ್ರಿನಾಥ್ ಧಾಮ್ ನಲ್ಲಿ ಮುಸ್ಲಿಮರು ನಮಾಜ್ ನೀಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.