ಪ್ರಿಯಾಂಕಾ ಗಾಂಧಿಗೆ ಡ್ರಾಪ್ ಕೊಟ್ಟು ದಂಡ ತೆತ್ತ ಬೈಕ್ ಚಾಲಕ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಬೈಕ್ನಲ್ಲಿ ಕರೆದುಕೊಂಡು ಹೋದ ಕಾಂಗ್ರೆಸ್ ಮುಖಂಡ ಈಗ ದಂಡ ತೆತ್ತಬೇಕಾಗಿದೆ. ಕಾರಣವೇನು..?
ಲಖನೌ, [ಡಿ.29]: ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಶನಿವಾರ ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಆರ್. ದರಾಪುರಿ ಕುಟುಂಬದ ಭೇಟಿಗೆ ಹೆಲ್ಮೆಟ್ ಧರಿಸದೇ ಬೈಕ್ನಲ್ಲಿ ಕರೆದುಕೊಂಡು ಹೋದ ಕಾಂಗ್ರೆಸ್ ಮುಖಂಡಗೆ 6,100 ರೂಪಾಯಿ ದಂಡ ವಿಧಿಸಲಾಗಿದೆ.
ಸಿಎಎ ಪ್ರತಿಭಟನೆಯಲ್ಲಿ ಬಂಧಿತರಾಗಿರುವ ನಿವೃತ್ತ ಅಧಿಕಾರಿ ಎಸ್.ಆರ್. ದರಾಪುರಿ ಕುಟುಂಬದ ಭೇಟಿಗೆ ಶನಿವಾರ ಪ್ರಿಯಾಂಕಾ ಹೊರಟಿದ್ದಾಗ ಪೊಲೀಸರು ಅವರನ್ನು ತಡೆದಿದ್ದರು. ಬಳಿಕ ಪ್ರಿಯಾಂಕಾ ಗಾಂಧಿ ಪಕ್ಷದ ಕಾರ್ಯಕರ್ತನ ಬೈಕ್ನಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಆರ್. ದರಾಪುರಿ ಅವರ ಮನೆಗೆ ತೆರಳಿದ್ದರು.
ಕತ್ತು ಹಿಡಿದು ನೂಕಿದರು ಎನ್ನುತ್ತಾರೆ ಪ್ರಿಯಾಂಕಾ, ಕರ್ತವ್ಯ ಮಾಡಿದೆ ಎನ್ನುತ್ತಾರೆ ಅಧಿಕಾರಿ!
ಆದ್ರೆ ಸ್ಕೂಟಿಯಲ್ಲಿ ಹೋಗುವಾಗ ಪ್ರಿಯಾಂಕ ಹೆಲ್ಮೆಟ್ ಧರಿಸದೇ ರಸ್ತೆ ಸಂಚಾರ ನಿಯಮ [ಟ್ರಾಫಿಕ್ ರೂಲ್ಸ್] ಉಲ್ಲಂಘಿಸಿದ್ದಾರೆ. ಇದರಿಂದ ಬೈಕ್ ಚಾಲಕನಿಗೆ [ಕಾಂಗ್ರೆಸ್ ಮುಖಂಡ] ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ.
ಕುಟುಂಬದ ಭೇಟಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕ, ನಾನು ಆವರ ಮನೆಗೆ ತೆರಳದಂತೆ ಪೊಲೀಸರು ತಡೆದರು. ಈ ವೇಳೆ ನನ್ನ ಕುತ್ತಿಗೆ ಹಿಸುಕಿದರು ಎಂದು ಗಂಭೀರ ಆರೋಪ ಮಾಡಿದ್ದರು. ಆದ್ರ, ಇದನ್ನು ಉತ್ತರ ಪ್ರದೇಶ ಪೊಲೀಸರು ತಳ್ಳಿಹಾಕಿದ್ದಾರೆ.