ಅಯೋಧ್ಯೆ ರಾಮಮಂದಿರ ಗರ್ಭಗುಡಿ 2023ರ ಡಿಸೆಂಬರ್‌ನಲ್ಲಿ ಪೂರ್ಣ: ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ
Ram Mandir temple construction: ಬಹು ನಿರೀಕ್ಷಿತ ರಾಮಮಂದಿರ ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು, ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಗರ್ಭಗುಡಿ ಕೆಲಸ ಪೂರ್ಣವಾಗಲಿದೆ.
Ayodhya: ರಾಮಮಂದಿರ ನಿರ್ಮಾಣ ಕಾರ್ಯ (Ram Mandir construction) ಸುಮಾರು ಒಂದು ವರ್ಷದಿಂದ ನಡೆಯುತ್ತಿದ್ದು, ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಗರ್ಭಗುಡಿ ಪೂರ್ಣಗೊಳ್ಳಲಿದೆ ಎಂದು ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ (Ram Mandir Construction Committee Chairman Nripendra Mishra) ಅವರು ಏಷಿಯಾನೆಟ್ ನ್ಯೂಸ್‌ನ (Asianet News) ರಾಜೇಶ್ ಕಾಲ್ರಾ ಅವರ ಸಂದರ್ಶನದಲ್ಲಿ ಹೇಳಿದ್ದಾರೆ (Exclusive Interview of Nripendra Mishra). ಈಗಾಗಲೇ ಗಟ್ಟಿ ಬುನಾದಿ ನಿರ್ಮಾಣವಾಗಿದ್ದು, ಆರಂಭದಲ್ಲಿ ಆದ ತೊಡಕುಗಳು ಮತ್ತು ಸಮಸ್ಯೆಗಳ ಬಗ್ಗೆಯೂ ನೃಪೇಂದ್ರ ಮಿಶ್ರಾ ಮಾಹಿತಿ ಹಂಚಿಕೊಂಡಿದ್ದಾರೆ.
ಸದ್ಯ ತಾತ್ಕಾಲಿಕ ಗುಡಿಯಲ್ಲಿರುವ ರಾಮನ ವಿಗ್ರಹ ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಗರ್ಭಗುಡಿಗೆ ಸ್ಥಳಾಂತರವಾಗಲಿದೆ ಮತ್ತು 2024ರ ಡಿಸೆಂಬರ್ ವೇಳೆ ಇಡೀ ಮಂದಿರ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ ಎಂದು ನೃಪೇಂದ್ರ ಮಿಶ್ರಾ ಹೇಳಿದ್ದಾರೆ. ನೃಪೇಂದ್ರ ಮಿಶ್ರಾ ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷರಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರ (Prime Minister Narendra Modi) ಸೆಕ್ರೆಟರಿಯಾಗೂ ಸೇವೆ ಸಲ್ಲಿಸಿದ್ದಾರೆ.
ಫೆಬ್ರವರಿ 2020ರಲ್ಲಿ ರಾಮಮಂದಿರ ನಿರ್ಮಾಣ ಸಂಬಂಧಿಸಿದಂತೆ ತಜ್ಞರ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು (Supreme court direction on Ram Mandir). ಇದರ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ ನಿರ್ಮಾಣಕ್ಕಾಗಿ ಸಮಿತಿ ರಚನೆ ಮಾಡಿದ್ದರು. ಕೇಂದ್ರ ಸರ್ಕಾರ ನ್ರಿಪೇಂದ್ರ ಮಿಶ್ರಾ ಅವರನ್ನ ರಾಮಮಂದಿರ ಟ್ರಸ್ಟ್ (Ram Mandir Trust) ಅಧ್ಯಕ್ಷರಾಗಿ ಸರ್ಕಾರ ನೇಮಿಸಿತ್ತು. ಅಧ್ಯಕ್ಷರಾದ ಬಳಿಕ ಮಿಶ್ರ ಅವರು ಮಂದಿರ ನಿರ್ಮಾಣ ಜಾಗದ ಮಾಹಿತಿ ಕಲೆ ಹಾಕಿದ್ರು. ಪ್ರತೀ ತಿಂಗಳು ನಿರ್ಮಾಣ ಕಾರ್ಯದ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ.
"
ರಾಮಮಂದಿರ ನಿರ್ಮಾಣ ಸ್ಥಳದಲ್ಲೇ ನ್ರಿಪೇಂದ್ರ ಮಿಶ್ರಾ ಅವರನ್ನು ಏಷ್ಯಾನೆಟ್ ನ್ಯೂಸ್‌ನ ರಾಜೇಶ್ ಕಲ್ರಾ ಭೇಟಿ ಮಾಡಿ ಮಾತನಾಡಿದ್ರು. ಎಕ್ಸ್ಕ್ಲೂಸಿವ್ ಆಗಿ ಸಂದರ್ಶನವನ್ನೂ ನಡೆಸಿದ್ರು. ಈಗಾಗಲೇ ನಿಗದಿಯಾಗಿರುವ ಸಮಯದಲ್ಲೇ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸವನ್ನು ಮಿಶ್ರಾ ವ್ಯಕ್ತಪಡಿಸಿದ್ದಾರೆ.
ಇನ್ನೂ ರಾಮ ಮಂದಿರ ತಳಪಾಯ ನಿರ್ಮಾಣಕ್ಕೆ ಕರ್ನಾಟಕದಿಂದ ಗ್ರಾನೈಟ್ (Karnataka Granite), ರಾಜಸ್ಥಾನದಿಂದ ಕಲ್ಲು ಕೆತ್ತನೆಗಳನ್ನು ತರಿಸಲಾಗುವುದು. 15 ಮೀಟರ್ಗಳಷ್ಟು ಪಾಯ ತೆಗೆದು ಬಳಿಕ ಕಾಂಕ್ರಿಟ್ನಿಂದ ಸಮತಟ್ಟುಗೊಳಿಸಿ ಬಳಿಕ ಚಿಕ್ಕಬಳ್ಳಾಪುರದಿಂದ ತರುವ ಗ್ರಾನೈಟ್ಹಾಕಲಾಗುವುದು. 7 ಹಂತಗಳ ಗ್ರೆನೈಟ್ ಅಳವಡಿಸಲಾಗಿವುದು. ಮುಂದಿನ ಡಿಸೆಂಬರ್ ವೇಳೆಗೆ ಅಯೋಧ್ಯೆಯತ್ತ ಇಡೀ ಭಾರತದ ಗಮನ ಇರಲಿದೆ.
ರಾಮಮಂದಿರ ನಿರ್ಮಾಣ ಕಾರ್ಯದ ಎಕ್ಸ್ಕ್ಲೂಸಿವ್ ಇಂಟರ್ವ್ಯೂ ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ನಾಳೆ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ನಿರ್ಮಾಣ ಕಾರ್ಯದ ಇಂಚಿಂಚೂ ಮಾಹಿತಿ ಈ ಇಂಟರ್ವ್ಯೂನಲ್ಲಿ ಸಿಗಲಿದೆ. ಮಿಸ್ ಮಾಡದೇ ನೋಡಿ.
ಜತೆಗೆ ವಿಶೇಷ ಸಮಿತಿಯೊಂದು ಕಾರ್ಯನಿರ್ವಹಿಸುತ್ತಿದ್ದು, 5 ಐಐಟಿಯ ಹಿರಿಯ ತಜ್ಞರು ಈ ತಂಡದಲ್ಲಿದ್ದಾರೆ. ಮದ್ರಾಸ್ನಲ್ಲಿರೋ ಐಐಟಿಯ (IIT Madras) ಸಿವಿಲ್ ಇಂಜನಿಯರಿಂಗ್, ಮತ್ತು ಐಐಟಿ ದೆಹಲಿಯ (IIT Delhi) ಸಿವಿಲ್ ಇಂಜನಿಯರಿಂಗ್ ಪ್ರೊಫೆಸರ್‌ಗಳು ಇದ್ದಾರೆ. ಮತ್ತು ಐಐಟಿ ಸೂರತ್ (IIT Surat), ಐಐಟಿ ಕಾನ್ಪುರದವರು (IIT Kanpur) ಇದ್ದಾರೆ. ಎಲ್ಲಾ ಪರಿಣಿತರು ಸೇರಿ ನಿರ್ಧಾರ ತೆಗೆದುಕೊಂಡು ಸಮಸ್ಯೆಗಳನ್ನು ಸರಿಪಡಿಸುತ್ತಿದ್ದೀವಿ ಎಂದರು.
ರಾಮಮಂದಿರ ನಿರ್ಮಾಣಕ್ಕೆ ಬುನಾದಿ ಹಾಕುವಾಗ ಹಲವು ಸಮಸ್ಯೆಗಳು ಎದುರಾದವು, ಆ ಸಮಸ್ಯೆಗಳನ್ನು ನೃಪೇಂದ್ರ ಮಿಶ್ರಾ ಅವರ ತಂಡ ಹೇಗೆ ನಿಭಾಯಿಸಿತು. ಮತ್ತು ರಾಮ ಮಂದಿರಕ್ಕೆ ಕರ್ನಾಟಕದ ಕೊಡುಗೆ ಏನು? ಕೇವಲ ಮೂರು ದಿನಗಳಲ್ಲಿ 17 ಸಾವಿರ ಗ್ರಾನೈಟ್ ಸ್ಲಾಬ್‌ಗಳು ದಕ್ಷಿಣ ರಾಜ್ಯಗಳಿಂದ ಅಯೋಧ್ಯೆಗೆ ಸೇರಲು ಹೇಗೆ ಸಾಧ್ಯವಾಯಿತು, ಇವೆಲ್ಲದರ ಬಗ್ಗೆಯೂ ಮಿಶ್ರಾ ವಿವರವಾಗಿ ಮಾತನಾಡಿದ್ದಾರೆ. ಎಲ್ಲವನ್ನೂ ತಿಳಿಯಲು ಭಾನುವಾರ ಸಂಜೆ 7 ಗಂಟೆಗೆ ಏಷಿಯಾನೆಟ್ ಸುವರ್ಣ ನ್ಯೂಸ್ ವಾಹಿನಿ ವೀಕ್ಷಿಸಿ.