ಚಾಯ್ ಬಿಸ್ಕೆಟ್ ಮಾತ್ರ, ಸಮೋಸಾ ಕೊಟ್ಟಿಲ್ಲ; ಕಾಂಗ್ರೆಸ್ ವಿರುದ್ಧ ಇಂಡಿ ಮೈತ್ರಿ ನಾಯಕ ಗರಂ!

ಇಂಡಿ ಒಕ್ಕೂಟದ ಸೀಟು ಹಂಚಿಕೆ ಸಭೆ ಬೆನ್ನಲ್ಲೇ ಮೈತ್ರಿಯಲ್ಲಿ ಅಪಸ್ವರಗಳು ಕೇಳಿಬರುತ್ತಿದೆ. ಇದೀಗ ಕಾಂಗ್ರಸ್ ಆಯೋಜಿಸಿದ ಇಂಡಿ ಒಕ್ಕೂಟದ ಸಭೆಯಲ್ಲಿ ಚಾಯ್ ಬಿಸ್ಕೆಟ್‌ ಮಾತ್ರ ನೀಡಿದ್ದಾರೆ. ಸಮೋಸಾ ನೀಡಿಲ್ಲ. ಕಾಂಗ್ರೆಸ್ ಈಗಾಲೇ ದುಡ್ಡಿಲ್ಲದೆ ಚಂದಾ ಎತ್ತುತ್ತಿದೆ ಎಂದು ಮೈತ್ರಿ ಪಕ್ಷ ಜೆಡಿಯು ನಾಯಕ ಟಾಂಗ್ ನೀಡಿದ್ದಾರೆ. 

Chai and Biscuit No samosa JDU leader mock congress after INDI Alliance meeting ckm

ನವದೆಹಲಿ(ಡಿ.20)ಲೋಕಸಭೆ ಚುನಾವಣೆಗೆ ಇಂಡಿ ಒಕ್ಕೂಟ ಪಕ್ಷಗಳು ಮಹತ್ವದ ಸಭೆ ನಡೆಸಿದೆ. ಕಾಂಗ್ರೆಸ್ ಆಯೋಜಿಸಿದ ಸಭೆಯಲ್ಲಿ ಇಂಡಿ ಒಕ್ಕೂಟ ಪ್ರಧಾನಿ ಅಭ್ಯರ್ಥಿ ವಿಚಾರ ಬಾರಿ ಸಂಚಲನ ಸೃಷ್ಟಿಸಿದೆ. ಮಲ್ಲಿಕಾರ್ಜುನ ಖರ್ಗೆಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನೀಡಿದ ಪ್ರಸ್ತಾಪ ಕೆಲವರ ಮುನಿಸಿಗೆ ಕಾರಣವಾಗಿದೆ. ಸೀಟು ಹಂಚಿಕೆಯಲ್ಲೂ ಕೆಲ ಗೊಂದಲಗಳು ಎರ್ಪಟ್ಟಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಇಂಡಿ ಒಕ್ಕೂಟದ ಮಿತ್ರ ಪಕ್ಷ ಜೆಡಿಯು ನಾಯಕ ಸುನಿಲ್ ಕುಮಾರ್ ಪಿಂಟು ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಪಿಂಟು ಕಾಂಗ್ರೆಸ್ ಕಾಲೆಳೆದಿದ್ದಾರೆ. ಚಂದಾ ಎತ್ತುತ್ತಿರುವ ಕಾಂಗ್ರೆಸ್ ಬಳಿ ಹಣ ಇಲ್ಲ. ಹೀಗಾಗಿ ಇಂಡಿ ಒಕ್ಕೂಟ ಸಭೆಯಲ್ಲಿ ಕೇವಲ ಚಹಾ ಹಾಗೂ ಬಿಸ್ಕೆಟ್ ನೀಡಲಾಗಿದೆ. ಈ ಬಾರಿಯ ಸಭೆಯಲ್ಲಿ ಸಮೋಸಾ ನೀಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಈ ಹಿಂದಿನ ಸಭೆಯಲ್ಲಿ ಚಹಾ ಹಾಗೂ ಸಮೋಸಾ ನೀಡಲಾಗಿತ್ತು. ಆದರೆ ದುಡ್ಡಿಲ್ಲದ ಕಾಂಗ್ರೆಸ್ ಕೇವಲ ಚಹಾ ಬಿಸ್ಕೆಟ್‌ಗೆ ಸೀಮಿತಗೊಳಿಸಿದೆ ಎಂದಿದ್ದಾರೆ. ಕಾಂಗ್ರೆಸ್ ಆರಂಭಿಸಿರುವ ದೇಣಿಗೆ ಸಂಗ್ರಹ ಕುರಿತು ಮಾತನಾಡಿದ ಸುನಿಲ್ ಕುಮಾರ್ ಪಿಂಟು, ಕಾಂಗ್ರೆಸ್‌ ಹಾಗೂ ಇಂಡಿ ಒಕ್ಕೂಟಕ್ಕೆ ಇರಿಸು ಮುರಿಸು ತಂದಿದ್ದಾರೆ.ಪ್ರಮುಖವಾಗಿ ಸೀಟು ಹಂಚಿಕೆ ಚರ್ಚೆ ಫಲಪ್ರಧವಾಗಿಲ್ಲ. ಇದು ಪಿಂಟು ಆಕ್ರೋಶಕ್ಕೆ ಕಾರಣವಾಗಿದೆ. 

2024ರಲ್ಲಿ ಮೋದಿ Vs ಖರ್ಗೆ? ಒಬಿಸಿ ಮೋದಿ ವಿರುದ್ಧ ದಲಿತ ಅಸ್ತ್ರ ಪ್ರಯೋಗ ಪಕ್ಕಾನಾ..?

ಈ ಹಿಂದೆ ಪಿಂಟು, ಎಲ್ಲೀವರೆಗೆ ಸೀಟು ಹಂಚಿಕೆ ಚರ್ಚೆ ನಡೆಯುವುದಿಲ್ಲವೋ ಅಲ್ಲೀವರೆಗೆ ಇಂತಹ ಸಭೆಗಳು ಚಹಾ ಸಮೋಸಾಗೆ ಸೀಮಿತ ಎಂದು ಹೇಳಿಕೆ ನೀಡಿದ್ದರು. ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಸಭೆಗಳು ಕೇವಲ ಚಹಾ ಮತ್ತು ಸಮೋಸಾಗಳಿಗೆ ಸೀಮಿತವಾಗಿದೆ. ಅಲ್ಲದೇ, ಉತ್ತರ ಭಾರತದ ಹೃದಯ ಭಾಗದ ಜನರು ಪ್ರಧಾನಿ ನರೇಂದ್ರ ಮೋದಿಯವರನ್ನು ನಂಬಿದ್ದಾರೆ ಎಂದೂ ಬಿಜೆಪಿ ಪರವಾಗಿ ಮಾತನಾಡಿದ್ದರು. ‘ಸೀಟು ಹಂಚಿಕೆಯಾಗುವವರೆಗೆ ಇಂಡಿಯಾ ಕೂಟದ ಸಭೆಗಳು ಕೇವಲ ಚಹಾ ಮತ್ತು ಸಮೋಸಾಗಳಿಗೆ ಸೀಮಿತವಾಗಿದೆ. ನಾನು ಹೃದಯದಲ್ಲಿ ಬಿಜೆಪಿಗನಾಗಿದ್ದೇನೆ. ನಮ್ಮ ನಾಯಕ ಬಿಹಾರ ಸಿಎಂ ನಿತೀಶ್‌ ಕುಮಾರ್ ಹೇಳಿದರೆ ರಾಜೀನಾಮೆಗೆ ಸಿದ್ಧ’ ಎಂದಿದ್ದಾರೆ. 

ಇದೀಗ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಪ್ರಸ್ತಾಪಕ್ಕೆ ಜೆಡಿಯು ನಾಯಕ ನಿತೀಶ್ ಕುಮಾರ್ ಗರಂ ಆಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟಿರುವ ನಿತೀಶ್ ಕುಮಾರ್‌ಗೆ ಈ ನಡೆ ತೀವ್ರ ಹಿನ್ನಡೆ ತರಲಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಇದರ ಬೆನ್ನಲ್ಲೇ ಪಿಂಟು ಹೇಳಿಕೆ ಮಹತ್ಪ ಪಡೆದಿದೆ. ಖರ್ಗೆ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿರುವ ಸ್ವತಃ ಕಾಂಗ್ರೆಸ್ ಕೆಲ ನಾಯರಿಗೆ ಇಷ್ಟವಿಲ್ಲ ಅನ್ನೋ ಮಾತುಗಳು ಹರಿದಾಡುತ್ತಿದೆ.  

Mimicry Row: 'ನಾನು ಕೂಡ 20 ವರ್ಷ ಇಂಥ ಅವಮಾನ ಎದುರಿಸಿದ್ದೆ..' ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಟೀಕೆ

Latest Videos
Follow Us:
Download App:
  • android
  • ios