ನವದೆಹಲಿ (ಅ.30): ಸಚಿವರು, ಸಂಸದರು, ಶಾಸಕರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರಿಗೆ ನೀಡಲಾಗಿದ್ದ ಪೊಲೀಸ್‌ ಭದ್ರತಾ ವ್ಯವಸ್ಥೆಯನ್ನು 2016-17ರಲ್ಲಿ 3360 ಜನರಿಂದ ಹಿಂಪಡೆಯಲಾಗಿದೆ. 20,828 ರಷ್ಟಿದ್ದ ಈ ಸಂಖ್ಯೆ 17,468ಕ್ಕೆ ಇಳಿಕೆ ಕಂಡಿದೆ.

ಉದ್ಧಾರ! ಸಚಿವರು, ಅಧಿಕಾರಿಗಳ 13000 ಕೋಟಿ ವಿದ್ಯುತ್ ಬಿಲ್ ಬಾಕಿ

ಇದು ಶೇ.16 ರಷ್ಟುಇಳಿಕೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ. ಉತ್ತರಪ್ರದೇಶವು ಅತಿಹೆಚ್ಚು ಗಣ್ಯರಿಗೆ ಭದ್ರತೆಯನ್ನು ಕಡಿತ ಮಾಡಿದೆ. 2016ರಲ್ಲಿ 1901 ಮತ್ತು 2017 ರಲ್ಲಿ 110 ಜನರಿಗೆ ನೀಡಲಾಗಿದ್ದ ಭದ್ರತೆಯನ್ನು ಯೋಗಿ ಆದಿತ್ಯನಾಥ್‌ ಸರ್ಕಾರ ಹಿಂಪಡೆದಿದೆ . ಇನ್ನು ಪಶ್ಚಿಮಬಂಗಾಳ ಮತ್ತು ಪಂಜಾಬ್‌ನಲ್ಲಿ ಭದ್ರತೆ ಪಡೆಯುವ ಗಣ್ಯರ ಸಂಖ್ಯೆ ಏರಿಕೆ ಕಂಡಿದೆ.

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕಲಹ ಹೆಚ್ಚಾದ ಕಾರಣ 2016ರಲ್ಲಿ 2207 ಮತ್ತು 2017ರಲ್ಲಿ 2698 ಜನರಿಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಒದಗಿಸಲಾಗಿದೆ. ಅದರಂತೆ ಪಂಜಾಬ್‌ನಲ್ಲಿಯೂ 2016ರಲ್ಲಿ 1852 ಮತ್ತು 2017ರಲ್ಲಿ 2344 ಜನರಿಗೆ ಪೊಲೀಸ್‌ ಭದ್ರತೆ ನಿಯೋಜಿಸಲಾಗಿದೆ. ದೇಶದಲ್ಲಿಯೇ ಅತಿ ಹೆಚ್ಚಾಗಿ ಬಿಹಾರದಲ್ಲಿ 3052 ಜನರಿಗೆ ಭದ್ರತೆ ನೀಡಲಾಗುತ್ತಿದೆ.