ವೈವಾಹಿಕ ಅತ್ಯಾಚಾರ ಅಪರಾಧ ಅಲ್ಲ: ಸುಪ್ರೀಂಗೆ ಕೇಂದ್ರ ಹೇಳಿಕೆ
ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣನೆ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಹಾಗೇನಾದರೂ ಮಾಡಿದಲ್ಲಿ ಇದು ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.
ನವದೆಹಲಿ (ಅ.4): 'ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸುವ ಅಗತ್ಯವಿಲ್ಲ' ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ ಹಾಗೂ ವೈವಾಹಿಕ ಅತ್ಯಾಚಾರದ ವಿಷಯವು ಕಾನೂನು ಸಮಸ್ಯೆಗಿಂತ ಹೆಚ್ಚು ಸಾಮಾಜಿಕ ಸಮಸ್ಯೆಯಾಗಿದ್ದು, ಇದನ್ನು ಅಪರಾಧೀಕರಣ ಗೊಳಿಸಿದರೆ ಸಮಾಜದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಸ್ಪಷ್ಟಪಡಿಸಿದೆ. ವೈವಾಹಿಕ ಅತ್ಯಾಚಾರ ಅಪರಾಧವೇ ಎಂದು ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದ್ದು, ಈ ಬಗ್ಗೆ ಕೋರ್ಟಿಗೆ ಸರ್ಕಾರ ತನ್ನ ಅಭಿಪ್ರಾಯವನ್ನು ಅಫಿಡವಿಟ್ ಮುಖಾಂತರಸಲ್ಲಿಸಿದೆ. 'ಗಂಡನು ಹೆಂಡತಿಯ ಸಮ್ಮತಿ ಪಡೆದೇ ಸಂಬಂಧ ಬೆಳೆಸಬೇಕು ನಿಜ. ಇದನ್ನು ಉಲ್ಲಂಘಿಸುವ ಮೂಲಭೂತ ಹಕ್ಕು ಆತನಿಗಿಲ್ಲ. ಆದಾಗ್ಯೂ ಒಂದು ವೇಳೆ ಗಂಡನು ಹೆಂಡತಿಯೊಂದಿಗೆ ನಡೆಸುವ ಲೈಂಗಿಕ ಕ್ರಿಯೆಯನ್ನೂ ಅಪರಾಧ ವ್ಯಾಪ್ತಿಗೆ ತಂದರೆ ವೈವಾಹಿಕ ಜೀವನದ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ' ಎಂದು ಹೇಳಿದೆ. 'ಇದು ಕೋರ್ಟ್ ಅಧಿಕಾರ ವ್ಯಾಪ್ತಿಗೆ ಒಳಪಡುವುದಿಲ್ಲ.ಎಲ್ಲಪಾಲುದಾರರೊಂದಿಗೆ, ಹಾಗೂ ರಾಜ್ಯಗಳ ಜತೆ ಸರಿಯಾದ ಸಮಾಲೋಚನೆ ಮಾಡದೇ ಈ ಬಗ್ಗೆ (ವೈವಾ ಹಿಕ ಅತ್ಯಾಚಾರ) ನಿರ್ಧರಿಸಲು ಆಗದು' ಎಂದು ಸ್ಪಷ್ಟಪಡಿಸಿದೆ.
ವೈವಾಹಿಕ ಅತ್ಯಾಚಾರದ ವಿಷಯವು ಕಾನೂನು ಸಮಸ್ಯೆಗಿಂತ ಹೆಚ್ಚು ಸಾಮಾಜಿಕ ಸಮಸ್ಯೆಯಾಗಿದ್ದು, ಇದು ಸಮಾಜದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಹೇಳಿದೆ. ಎಲ್ಲಾ ಪಾಲುದಾರರೊಂದಿಗೆ ಸರಿಯಾದ ಸಮಾಲೋಚನೆ ಇಲ್ಲದೆ ಅಥವಾ ಎಲ್ಲಾ ರಾಜ್ಯಗಳ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳದೆ ಈ ಸಮಸ್ಯೆಯನ್ನು (ವೈವಾಹಿಕ ಅತ್ಯಾಚಾರ) ನಿರ್ಧರಿಸಲಾಗುವುದಿಲ್ಲ ಎಂದು ಕೇಂದ್ರ ಹೇಳಿದೆ.
ಆಕೆಗೆ ಒಪ್ಪಿಗೆ ಇಲ್ಲದಿದ್ದರೂ ಪತ್ನಿಯೊಂದಿಗೆ ಅಸಹಜ ಸಂಭೋಗ ಅತ್ಯಾಚಾರವಲ್ಲ!: ಮಧ್ಯ ಪ್ರದೇಶ ಹೈಕೋರ್ಟ್
ದಾಂಪತ್ಯದಲ್ಲಿ, ಒಬ್ಬರ ಸಂಗಾತಿಯಿಂದ ಸರಿಯಾದ ಲೈಂಗಿಕ ಸಂಬಂಧಗಳ ನಿರಂತರ ನಿರೀಕ್ಷೆಯಿದೆ, ಆದರೆ ಅಂತಹ ನಿರೀಕ್ಷೆಗಳು ಪತಿಗೆ ತನ್ನ ಹೆಂಡತಿಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುವ ಹಕ್ಕನ್ನು ನೀಡುವುದಿಲ್ಲ. ಅಂತಹ ಕೃತ್ಯಕ್ಕಾಗಿ ಅತ್ಯಾಚಾರ-ವಿರೋಧಿ ಕಾನೂನುಗಳ ಅಡಿಯಲ್ಲಿ ಒಬ್ಬ ವ್ಯಕ್ತಿಯನ್ನು ಶಿಕ್ಷಿಸುವುದು ವಿಪರೀತ ಮತ್ತು ಅಸಮಂಜಸವಾಗಿದೆ ಎಂದು ಕೇಂದ್ರ ಹೇಳಿದೆ.
ಮದುವೆಯೊಳಗೆ ವಿವಾಹಿತ ಮಹಿಳೆಯ ಒಪ್ಪಿಗೆಯನ್ನು ರಕ್ಷಿಸಲು ಸಂಸತ್ತು ಈಗಾಗಲೇ ಕ್ರಮಗಳನ್ನು ಒದಗಿಸಿದೆ. ಈ ಕ್ರಮಗಳು ವಿವಾಹಿತ ಮಹಿಳೆಯರಿಗೆ ಕ್ರೌರ್ಯವನ್ನು ದಂಡಿಸುವ ಕಾನೂನುಗಳನ್ನು ಒಳಗೊಂಡಿವೆ ಎಂದು ಕೇಂದ್ರ ಹೇಳಿದೆ. ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯಿದೆ, 2005 ವಿವಾಹಿತ ಮಹಿಳೆಯರಿಗೆ ಸಹಾಯ ಮಾಡುವ ಮತ್ತೊಂದು ಕಾನೂನು ಕೂಡ ಜಾರಿಯಲ್ಲಿದೆ ಎಂದು ತಿಳಿಸಿದೆ.
ಆ್ಯನಿಮಲ್‌ನಲ್ಲಿ ದಾಂಪತ್ಯ ಅತ್ಯಾಚಾರ, ಸಮಾಜದಲ್ಲಿ ಇರೋದು ಹೌದು: ಬಾಬ್ಬಿ ಡಿಯೋಲ್