Asianet Suvarna News Asianet Suvarna News

ಭ್ರಷ್ಟ, ಅದಕ್ಷ ಸರ್ಕಾರಿ ನೌಕರರಿಗೆ ಮೋದಿ ಶಾಕ್: ಕೇಂದ್ರದ ಆದೇಶಕ್ಕೆ ಸಿಬ್ಬಂದಿ ತತ್ತರ!

ಅದಕ್ಷ ಕೇಂದ್ರ ಸರ್ಕಾರಿ ನೌಕರರ ವಜಾಕ್ಕೆ ನಿರ್ಧಾರ| ಪಟ್ಟಿ ತಯಾರಿಸಲು ಸೂಚನೆ| ಎಲ್ಲಾ ಇಲಾಖೆಗಳಿಗೆ ಮಾರ್ಗದರ್ಶಿ ಸೂತ್ರ ಕಳಿಸಿದ ಸಿಬ್ಬಂದಿ ಸಚಿವಾಲಯ| 30 ವರ್ಷ ಸೇವೆ ಸಲ್ಲಿಸಿದ, 50/55 ವರ್ಷ ದಾಟಿದ ನೌಕರರಿಗಷ್ಟೇ ಅನ್ವಯ| ಇದು ಒಂದು ಸಲದ ಕ್ರಮವಲ್ಲ, ಇನ್ನುಮುಂದೆ ನಿರಂತರ ನಡೆಯುವ ಪ್ರಕ್ರಿಯೆ

Centre To Identify Inefficient and Corrupt Among 30 plus year Employees
Author
Bangalore, First Published Aug 31, 2020, 8:48 AM IST

ನವದೆಹಲಿ(ಆ.31): ಭ್ರಷ್ಟ ಹಾಗೂ ಅದಕ್ಷ ಸರ್ಕಾರಿ ನೌಕರರನ್ನು ಕೆಲಸದಿಂದ ವಜಾಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಅಂತಹ ನೌಕರರ ಪಟ್ಟಿತಯಾರಿಸುವಂತೆ ಎಲ್ಲಾ ಇಲಾಖೆಗಳಿಗೆ ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ.

ಜಿಎಸ್‌ಟಿ ವಿಚಾರ, ಕೇಂದ್ರಕ್ಕೆ ಶಾಕ್ ನೀಡಲು ಮುಂದಾಗಿವೆ ಈ ರಾಜ್ಯಗಳು!

ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಭ್ರಷ್ಟಹಾಗೂ ಅದಕ್ಷ ನೌಕರರನ್ನು ಶಾಶ್ವತವಾಗಿ ನಿವೃತ್ತಿಗೊಳಿಸಲು ಅಂತಹವರ ಪಟ್ಟಿಯನ್ನು ಎಲ್ಲಾ ಇಲಾಖೆಗಳು ಸಿದ್ಧಪಡಿಸಬೇಕು. ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮ 1972ರಡಿ ಮೂಲಭೂತ ನಿಯಮ (ಎಫ್‌ಆರ್‌) 56(ಜೆ) ಹಾಗೂ 56(ಐ) ಮತ್ತು ನಿಯಮ 48(ಐ) ಅಡಿ ಸರ್ಕಾರಿ ನೌಕರರ ಕಾರ್ಯದಕ್ಷತೆಯನ್ನು ಪರಾಮರ್ಶಿಸಬೇಕು. ನೌಕರರು ಭ್ರಷ್ಟರು ಅಥವಾ ಅದಕ್ಷರು ಎಂದು ಕಂಡುಬಂದರೆ ಮೂರು ತಿಂಗಳ ಮೊದಲೇ ನೋಟಿಸ್‌ ನೀಡಿ ಅಥವಾ ಒಮ್ಮೆಲೇ ಮೂರು ತಿಂಗಳ ವೇತನ ನೀಡಿ ಅವರನ್ನು ನಿವೃತ್ತಿಗೊಳಿಸಲು ಸಂಬಂಧಿಸಿದ ಮೇಲಧಿಕಾರಿಗೆ ಅಧಿಕಾರವಿರುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

50/55 ವರ್ಷ ದಾಟಿದ ಅಥವಾ ಸೇವೆಯಲ್ಲಿ 30 ವರ್ಷಗಳನ್ನು ಪೂರ್ಣಗೊಳಿಸಿದ ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ಇದು ಅನ್ವಯಿಸುತ್ತದೆ. ವಿಶೇಷವೆಂದರೆ, ಇದು ಒಂದು ಸಲದ ಕ್ರಮವಲ್ಲ. ನೌಕರರ ಕಾರ್ಯದಕ್ಷತೆ ಪಟ್ಟಿಯನ್ನು ನಿರಂತರವಾಗಿ ಪರಿಷ್ಕರಿಸುತ್ತಿರಬೇಕು. ಯಾರ ಪ್ರಾಮಾಣಿಕತೆಯು ಅನುಮಾನಾಸ್ಪದವಾಗಿದೆಯೋ ಅಂತಹವರನ್ನು ಅಗತ್ಯ ಕಂಡುಬಂದಲ್ಲಿ ಕಾಲಕಾಲಕ್ಕೆ ನಿವೃತ್ತಿಗೊಳಿಸುತ್ತಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪೇಟಿಎಂ ಮಾಲ್‌ ಡೇಟಾ ಹ್ಯಾಕ್!

ಇನ್ನು, ಈ ಕಡ್ಡಾಯ ನಿವೃತ್ತಿಯು ಭ್ರಷ್ಟಅಥವಾ ಅದಕ್ಷ ನೌಕರರಿಗೆ ವಿಧಿಸುವ ಶಿಕ್ಷೆಯಲ್ಲ. ಕೇಂದ್ರ ನಾಗರಿಕ ಸೇವೆಗಳ 1965ರ ನಿಯಮದಡಿ ಹೇಳಲಾದ ‘ಕಡ್ಡಾಯ ನಿವೃತ್ತಿ’ ಇದಾಗಿರುವುದಿಲ್ಲ. ಜೊತೆಗೆ, ವಯೋನಿವೃತ್ತಿಗೆ ಒಂದು ವರ್ಷ ಮಾತ್ರ ಬಾಕಿಯಿರುವ ನೌಕರರ ವಿರುದ್ಧ ಈ ಕ್ರಮ ಕೈಗೊಳ್ಳುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

Follow Us:
Download App:
  • android
  • ios