Asianet Suvarna News Asianet Suvarna News

ನಷ್ಟದ ಸುಳಿಯಲ್ಲಿರುವ BSNLಗೆ ಗುಡ್‌ ನ್ಯೂಸ್ ಕೊಟ್ಟ ಕೇಂದ್ರ!

ಸರ್ಕಾರಿ ಕಚೇರಿಗಳಲ್ಲಿ ಬಿಎಸ್‌ಎನ್‌ಎಲ್‌ ಸೇವೆ ಬಳಕೆ ಕಡ್ಡಾಯ: ಕೇಂದ್ರ| ಇದು ಭಾರೀ ನಷ್ಟದ ಸುಳಿಯಲ್ಲಿರುವ ಬಿಎಸ್‌ಎನ್‌ಎಲ್‌ಗೆ ಸ್ವಲ್ಪ ಮಟ್ಟಿನ ಶುಭ ಸುದ್ದಿ

Centre mandates all ministries public depts CPSUs to use BSNL MTNL services pod
Author
Bangalore, First Published Oct 15, 2020, 12:17 PM IST

ನವದೆಹಲಿ(ಅ.15): ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯ, ಸರ್ಕಾರಿ ಕಚೇರಿ, ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ, ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್‌ಎನ್‌ಎಲ್‌ ಹಾಗೂ ಎಂಟಿಎನ್‌ಎಲ್‌ ಸೇವೆಗಳನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಈ ಕುರಿತ ಟಿಪ್ಪಣಿಯೊಂದನ್ನು ದೂರ ಸಂಪರ್ಕ ಸಚಿವಾಲಯವು ಎಲ್ಲಾ ಇಲಾಖೆಗಳಿಗೆ ರವಾನಿಸಿದೆ. ಇದು ಭಾರೀ ನಷ್ಟದ ಸುಳಿಯಲ್ಲಿರುವ ಬಿಎಸ್‌ಎನ್‌ಎಲ್‌ಗೆ ಸ್ವಲ್ಪ ಮಟ್ಟಿನ ಶುಭ ಸುದ್ದಿ ತಂದಿದೆ. 2019-20ನೇ ಸಾಲಿನಲ್ಲಿ ಬಿಎಸ್‌ಎನ್‌ಎಲ್‌ 15500 ಕೋಟಿ ರು. ಮತ್ತು ಎಂಟಿಎನ್‌ಎಲ್‌ 3694 ಕೋಟಿ ರು.ನಷ್ಟ ಅನುಭವಿಸಿದ್ದವು.

ಮತ್ತೊಂದೆಡೆ 2008ರಲ್ಲಿ ಬಿಎಸ್‌ಎನ್‌ಎಲ್‌ 2.9 ಕೋಟಿ ಸ್ಥಿರ ದೂರವಾಣಿ ಸಂಪರ್ಕ ಹೊಂದಿದ್ದರೆ 2020ರಲ್ಲಿ ಅದು ಕೇವಲ 80 ಲಕ್ಷಕ್ಕೆ ಇಳಿದಿತ್ತು.

Follow Us:
Download App:
  • android
  • ios