* ಕೇಂದ್ರ ಸರ್ಕಾ​ರದಿಂದ ಹೊಸ ಮಾರ್ಗ​ಸೂ​ಚಿ* ಶಾಸ​ಕ, ಸಂಸ​ದರ ವಿರುದ್ಧ ತನಿ​ಖೆಗೆ ಅನು​ಮತಿ ಕಡ್ಡಾ​ಯ

ನವದೆಹಲಿ(ಸೆ.07): ಸಾರ್ವಜನಿಕ ಸೇವಕರ (ಶಾ​ಸ​ಕ/ಸಂಸ​ದ​ರು​) ವಿರುದ್ಧ ಕೇಳಿಬರುವ ಯಾವುದೇ ಭ್ರಷ್ಟಾಚಾರ ಪ್ರಕರಣದ ತನಿಖೆ ಕೈಗೊಳ್ಳುವ ಮುನ್ನ ಇನ್ನು ಮುಂದೆ ಪೊಲೀಸ್‌ ಅಧಿಕಾರಿಗಳು ಕಡ್ಡಾಯ ಅನುಮತಿ ಪಡೆಯಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

1988ರ ಭ್ರಷ್ಟಾಚಾರ ನಿಯಂತ್ರಣದ ಕಾಯ್ದೆಗೆ 2018ರಲ್ಲಿ ತಿದ್ದುಪಡಿ ಮಾಡುವ ಮುಖಾಂತರ ಸಾರ್ವಜನಿಕ ಸೇವಕರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಕಡ್ಡಾಯ ಅನುಮತಿ ಪಡೆಯುವ ಕಾನೂನು ಜಾರಿಗೊಳಿಸಲಾಗಿತ್ತು. ಇದರ ಅನುಷ್ಠಾನಕ್ಕಾಗಿ ಸೋಮವಾರ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಪ್ರಕಾರ ಕೇಂದ್ರ ಸಚಿವರು, ಸಂಸದರು, ರಾಜ್ಯಗಳ ಸಚಿವರು, ಶಾಸಕರು, ಸುಪ್ರೀಂ ಮತ್ತು ಹೈಕೋರ್ಟ್‌ ನ್ಯಾಯಾಧೀಶರು, ಸಾರ್ವಜನಿಕ ವಲಯದ ಸಂಸ್ಥೆಗಳ ಅಧ್ಯಕ್ಷರು ಅಥವಾ ವ್ಯವಸ್ಥಾಪಕ ನಿರ್ದೇಶಕರು, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮಂಡಳಿ ಹಂತದ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ದೂರುಗಳ ತನಿಖೆಗೆ ಕಡ್ಡಾಯ ಅನುಮತಿಯನ್ನು ಪಡೆಯಲೇಬೇಕು. ಪೊಲೀಸರು ಮತ್ತು ಸಿಬಿಐ ಸೇರಿದಂತೆ ಇನ್ನಿತರ ತನಿಖಾ ಸಂಸ್ಥೆಗಳಿಗೆ ಇಂಥ ಅನುಮತಿ ನೀಡಲು ಕಾರ್ಯದರ್ಶಿಗಿಂತಲೂ ಕೆಳಗಿನ ರಾರ‍ಯಂಕ್‌ನ ಅಧಿಕಾರಿಯನ್ನು ನೇಮಿಸಬಾರದು ಎಂದು ಇದರಲ್ಲಿ ಸೂಚಿಸಲಾಗಿದೆ.