ಈಶಾನ್ಯದಲ್ಲಿ ಹೊಸ ಆಯುಷ್ ಕಾಲೇಜು ತೆರೆಯಲು ಕೇಂದ್ರ ಸಿದ್ಧ ಆಯುಷ್ ಕಾಲೇಜು ತೆರಯಲು ಆರ್ಥಿಕ ಸಹಾಯ ಹೆಚ್ಚಳ ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಮಹತ್ವದ ಘೋಷಣೆ

ನವದೆಹಲಿ(ಸೆ.11): ಭಾರತದಲ್ಲಿ ಆಯುಷ್ ಕಾಲೇಜುಗಳನ್ನು ತೆರೆಯಲು ಕೇಂದ್ರ ಸರ್ಕಾರ ಹಣಕಾಸಿ ನೆರವನ್ನು ಹೆಚ್ಚಳ ಮಾಡಿದೆ. ಆಯುಷ್ ಕಾಲೇಜು ತೆರೆಯಲು ಸದ್ಯ 9 ಕೋಟಿ ರೂಪಾಯಿ ನೀಡಲಾಗುತ್ತಿದ್ದ ಆರ್ಥಿಕ ಸಹಾಯವನ್ನು 70 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಘೋಷಿಸಿದ್ದಾರೆ.

Scroll to load tweet…

ಕೊರೋನಾ ವಿರುದ್ಧ ಹೋರಾಡಲು ಆಯುರ್ವೇದ ಸಂಜೀವಿನಿ ‘ಆಯುಷ್‌ 64’ ಮಾರುಕಟ್ಟೆಗೆ

ಗುವ್ಹಾಟಿಯಲ್ಲಿ ಆಯೋಜಿಸಿದ ಶಿಕ್ಷಣ, ಉದ್ಯಮಶೀಲತೆ ಮತ್ತು ಈಶಾನ್ಯ ರಾಜ್ಯಗಳ ಮೇಲೆ ಉದ್ಯೋಗದ ಗಮನ ಕುರಿತ ಸಮ್ಮೇಳನದಲ್ಲಿ ಸೋನೋವಾಲ್ ಹೇಳಿದರು. ಈಶಾನ್ಯದಲ್ಲಿ ಆಯುಷ್ ಕಾಲೇಜುಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಈಶಾನ್ಯಗಳಲ್ಲಿ ಹೆಚ್ಚಿನ ಆಯುಷ್ ಕಾಲೇಜು ತೆರೆಯಲು ಕೇಂದ್ರ ಉತ್ತೇಜನ ನೀಡಲಿದೆ. ಇಲ್ಲಿ ಹೆಚ್ಚಿನ ವೈದ್ಯರು ಲಭ್ಯವಾದರೆ, ಭಾರತೀಯ ಸಾಂಪ್ರದಾಯಿಕ ಔಷಧ ವ್ಯವಸ್ಥೆಯನ್ನು ಜನಪ್ರಿಯಗೊಳಿಸಬಹುದು ಎಂದು ಸೋನೋವಾಲ್ ಹೇಳಿದರು.

Scroll to load tweet…

ಕೇಂದ್ರದ ಅಯುಷ್ ಮಿಷನ್ ಯೋಜನೆಯಡಿ ಹೊಸ ಆಯುಷ್ ಕಾಲೇಜು ತೆರೆಯಲು ರಾಜ್ಯ ಸರ್ಕಾರಗಳಿಗೆ ಇದುವರೆಗೆ 9 ಕೋಟಿ ರೂಪಾಯಿ ನೀಡಲಾಗುತ್ತಿತ್ತು. ಇದೀಗ ಈ ಮೊತ್ತವನ್ನು 70 ಕೋಟಿ ರೂಪಾಯಿ ಹೆಚ್ಚಿಸಲಾಗಿದೆ. ರಾಜ್ಯಗಳು ಭೂಮಿ, ಮಾನವ ಸಂಪನ್ಮೂಲ ಗುರುತಿಸಬೇಕು. ಕೇಂದ್ರದ ಮಾರ್ಗಸೂಚಿ ಪ್ರಕಾರ ರಾಜ್ಯಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ಸೋನೋವಾಲ್ ಹೇಳಿದರು.

ದ.ಕ.ದಲ್ಲಿ 1.40 ಲಕ್ಷ ಮಂದಿಗೆ ರೋಗ ನಿರೋಧಕ ಔಷಧ

ಜಲುಕ್ಬರಿಯಲ್ಲಿನ ಸರ್ಕಾರಿ ಆಯುರ್ವೇದಿಕ್ ಕಾಲೇಜನ್ನು ಮೇಲ್ದರ್ಜೆಗೆ ಏರಿಸಲು ಕೇಂದ್ರ 10 ಕೋಟಿ ರೂಪಾಯಿ ಅನುದಾನ ಘೋಷಿಸಿದೆ. ಪದವಿಪೂರ್ವ ಬೋಧನಾ ಕಾಲೇಜುಗಳನ್ನು ಉನ್ನತೀಕರಿಸಲು 5 ಕೋಟಿ ಹಾಗೂ ಸ್ನಾತಕೋತ್ತರ ಸಂಸ್ಥೆಗಳ ಮೂಲಸೌಕರ್ಯವನ್ನು ಸುಧಾರಿಸಲು 6 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

Scroll to load tweet…

ಗುವ್ಹಾಟಿಯಲ್ಲಿ 10+2 ವಿದ್ಯಾರ್ಥಿಗಳಿಗೆ 10 ಸೀಟುಗಳು, ಪಂಚಕರ್ಮ ಚಿಕಿತ್ಸೆಗೆ ನುರಿತ ಮಾನವಶಕ್ತಿಯನ್ನು ಉತ್ಪಾದಿಸಲು ಆರೋಗ್ಯ ವಲಯ ಕೌಶಲ್ಯ ಮಂಡಳಿ ಹಾಗೂ ಪಂಚಕರ್ಮ ತಂತ್ರಜ್ಞರ ಕೋರ್ಸ್ ಆರಂಭಿಸುವುದರಾಗಿ ಸೋನೋವಾಲ್ ಘೋಷಿಸಿದರು.