ಕೋವಿಡ್‌ ಪ್ರಥಮ ಹಾಗೂ ದ್ವಿತೀಯ ಅಲೆಯ ಸಂದರ್ಭ ಆಯುಷ್‌ ಇಲಾಖೆಯಿಂದ ದ.ಕ. ಜಿಲ್ಲೆಯಲ್ಲಿ 1.40 ಲಕ್ಷ ಜನರಿಗೆ ಕೋವಿಡ್‌ ರೋಗ ನಿರೋಧಕ ಔಷಧಿ ಜಿಲ್ಲಾ ಆಯುಷ್‌ ಅಧಿಕಾರಿ ಡಾ. ಮುಹಮ್ಮದ್‌ ಇಕ್ಬಾಲ್‌ ಮಾಹಿತಿ ಕೊರೋನೋತ್ತರ ಅಗತ್ಯ ಮುತುವರ್ಜಿಯನ್ನು ಕೂಡಾ ಆಯುಷ್‌ ಇಲಾಖೆಯಿಂದ ವಹಿಸಲಾಗಿದೆ

ಮಂಗಳೂರು (ಜು.21):  ಕೋವಿಡ್‌ ಪ್ರಥಮ ಹಾಗೂ ದ್ವಿತೀಯ ಅಲೆಯ ಸಂದರ್ಭ ಆಯುಷ್‌ ಇಲಾಖೆಯಿಂದ ದ.ಕ. ಜಿಲ್ಲೆಯಲ್ಲಿ 1.40 ಲಕ್ಷ ಜನರಿಗೆ ಕೋವಿಡ್‌ ರೋಗ ನಿರೋಧಕ ಔಷಧಿ ವಿತರಿಲಾಗಿದೆ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ. ಮುಹಮ್ಮದ್‌ ಇಕ್ಬಾಲ್‌ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಆಯುಷ್‌ ವಿಭಾಗ ಹಾಗೂ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಪತ್ರಕರ್ತರಿಗೆ ರೋಗ ನಿರೋಧಕ ಔಷಧ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಯುಷ್‌ ಸಾಂಪ್ರದಾಯಿಕ ಖಾದ್ಯ ಪಟ್ಟಿಯಲ್ಲಿ ಕರಾವಳಿ, ಮಲೆನಾಡಿನ ಪತ್ರೊಡೆ!

ಕೋವಿಡ್‌ 2ನೇ ಅಲೆಯ ಸಂದರ್ಭ ಹೋಂ ಐಸೋಲೇಶನ್‌ನಲ್ಲಿರುವವರಿಗೆ ಪ್ರತಿನಿತ್ಯ ಕರೆ ಮಾಡಿ ಅವರ ಬಗ್ಗೆ ನಿಗಾ ಇರಿಸಲಾಗಿತ್ತು. ಕೊರೋನೋತ್ತರ ಅಗತ್ಯ ಮುತುವರ್ಜಿಯನ್ನು ಕೂಡಾ ಆಯುಷ್‌ ಇಲಾಖೆಯಿಂದ ವಹಿಸಲಾಗಿದೆ ಎಂದು ಅವರು ಹೇಳಿದರು.

ವೈದ್ಯಾಧಿಕಾರಿ ಡಾ. ಕೃಷ್ಣ ಪ್ರಸಾದ್‌ ಅವರು ಆಯುಷ್‌ ಇಲಾಖೆ ಕೋವಿಡ್‌ ಸಂದರ್ಭದಲ್ಲಿ ನಿರ್ವಹಿಸಿದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಡಾ. ಮುರಳೀಧರ್‌ ಇದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ್‌ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು. ಅನ್ಸಾರ್‌ ಇನೋಳಿ ವಂದಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona