ನವದೆಹಲಿ(ಡಿ.09): ಭಾರತದಲ್ಲೂ ಕೊರೋನಾ ಲಸಿಕೆ ವಿತರಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ, ವಿತರಣೆಯ ಇಡೀ ಪ್ರಕ್ರಿಯೆ ನಿರ್ವಹಣೆ ಮತ್ತು ಕಣ್ಗಾವಲಿಗೆ ಕೋ-ವಿನ್‌ ಎಂಬ ಆ್ಯಪ್‌ ಅಭಿವೃದ್ಧಿಪಡಿಸಿದೆ. ಈ ಆ್ಯಪ್‌ ಬಳಸಿ ಅಧಿಕಾರಿಗಳು ಹೇಗೆ ಕಾರ್ಯನಿರ್ವಹಿಸುತ್ತಾರೆ, ಲಸಿಗೆ ಅಗತ್ಯವಿರುವವರು ಹೆಸರು ನೊಂದಾಯಿಸಿಕೊಳ್ಳುವುದು ಹೇಗೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Covid-19 ವಿರುದ್ಧ ಲಸಿಕೆ ಹೋರಾಟ ಆರಂಭ; ಫೈಝರ್ ವ್ಯಾಕ್ಸಿನ್ ಪಡೆದ 2ನೇ ವ್ಯಕ್ತಿ ವಿಲಿಯಂ ಶೇಕ್ಸ್‌ಪಿಯರ್!

ಕೋ ವಿನ್‌ ಆ್ಯಪ್‌ ಹೇಗೆ ಕೆಲಸ ಮಾಡುತ್ತದೆ?

- ಕೋ ವಿನ್‌ ಆ್ಯಪ್‌ನಲ್ಲಿ 5 ವಿಭಾಗಗಳಿವೆ: ಅಡ್ಮಿನಿಸ್ಪ್ರೇಟರ್‌, ರಿಜಿಸ್ಪ್ರೇಶನ್‌, ವ್ಯಾಕ್ಸಿನೇಶನ್‌, ಬೆನಿಫೀಶಿಯರಿ ಅಕ್ನಾಲೆಡ್ಜ್‌ಮೆಂಟ್‌, ರಿಪೋರ್ಟ್‌ ಮಾಡ್ಯೂಲ್‌.

- ‘ಅಡ್ಮಿನಿಸ್ಪ್ರೇಟರ್‌ ಮಾಡ್ಯೂಲ್‌’ ಲಸಿಕೆ ಶಿಬಿರ ಆಯೋಜಿಸುವವರಿಗೆ ಸೇರಿದ್ದು. ಇದರಲ್ಲಿ ಅವರು ಶಿಬಿರಗಳು, ವ್ಯಾಕ್ಸಿನೇಟರ್‌ಗಳ ಬಗ್ಗೆ ವಿವರ ನೀಡುತ್ತಾರೆ.

- ರಿಜಿಸ್ಪ್ರೇಶನ್‌ ಮಾಡ್ಯೂಲ್‌ನಲ್ಲಿ ಲಸಿಕೆ ಬಯಸುವವರು ಹೆಸರು ನೋಂದಣಿ ಮಾಡಿಕೊಳ್ಳಬೇಕು. ವ್ಯಕ್ತಿಯ ಪೂರ್ವ ಅನಾರೋಗ್ಯ ವಿವರಗಳು ಇರಲ್ಲಿರುತ್ತವೆ.

- ವ್ಯಾಕ್ಸಿನೇಶನ್‌ ಮಾಡ್ಯೂಲ್‌ನಲ್ಲಿ ಫಲಾನುಭವಿಯ ವಿವರಗಳನ್ನು ಹಾಗೂ ಅಪ್‌ಡೇಟ್‌ ನೀಡಲಾಗುತ್ತದೆ.

- ಲಸಿಕೆ ಪಡೆದ ಫಲಾನುಭವಿಯ ದೃಢೀಕರಣವನ್ನು ಎಸ್ಸೆಮ್ಮೆಸ್‌ನಲ್ಲಿ ಕಳಿಸಲಾಗುತ್ತದೆ. ಕ್ಯುಆರ್‌ ಕೋಡ್‌ ಆಧರಿತ ಸರ್ಟಿಫಿಕೇಟ್‌ಗಳೂ ಲಭ್ಯ.

ವಿಶ್ವದ ಮೊದಲ ಫೈಝರ್ ಕೊರೋನಾ ಲಸಿಕೆ ಪಡೆದ 90 ವರ್ಷದ ವೃದ್ಧೆ!

- ವರದಿಯಲ್ಲಿ ವಿಭಾಗದಲ್ಲಿ ಲಸಿಕೆ ಆಂದೋಲನಕ್ಕೆ ಎಷ್ಟುಜನ ಬಂದರು ಹಾಗೂ ಎಷ್ಟುಜನರನ್ನು ಕೈಬಿಡಲಾಗಿದೆ ಎಂಬ ವಿವರ ಇರುತ್ತದೆ.

- ಲಸಿಕೆ ಬೇಕೆಂದವರು ಆ್ಯಪ್‌ ಡೌನ್‌ಲೋಡ್‌ ಮಾಡಿ ರಿಜಿಸ್ಪ್ರೇಷನ್‌ ಮಾಡ್ಯೂಲ್‌ನಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು.

- ಒಬ್ಬರಿಗೆ ಲಸಿಕೆ ನೀಡಲು 30 ನಿಮಿಷ ಬೇಕು. ಹೀಗಾಗಿ ಪ್ರತಿ ಸೆಷನ್‌ನಲ್ಲಿ 100 ಜನರಿಗೆ ಮಾತ್ರವೇ ಕೊರೋನಾ ಲಸಿಕೆ ನೀಡಲಾಗುತ್ತದೆ.