Covid-19 ವಿರುದ್ಧ ಲಸಿಕೆ ಹೋರಾಟ ಆರಂಭ; ಫೈಝರ್ ವ್ಯಾಕ್ಸಿನ್ ಪಡೆದ 2ನೇ ವ್ಯಕ್ತಿ ವಿಲಿಯಂ ಶೇಕ್ಸ್‌ಪಿಯರ್!

ಕೊರೋನಾ  ಮಾಹಾಮಾರಿ ವಿರುದ್ಧ ಲಸಿಕೆ ಹೋರಾಟ ಆರಂಭಗೊಂಡಿದೆ. ಇಷ್ಟು ದಿನ ಪ್ರಯೋಗದ ಹಂತದಲ್ಲಿದಿದ ಲಸಿಕೆ ಇದೀಗ ಕೊರೋನಾದಿಂದ ಹೆಚ್ಚು ಅಪಾಯವಿರುವರಿಗೆ ಫೈಜರ್ ಲಸಿಕೆ ಹಾಕಲಾಗುತ್ತಿದೆ. ಫೈಜರ್  ಲಸಿಕೆ ಪಡೆದ ವಿಶ್ವದ ಎರಡನೇ ವ್ಯಕ್ತಿ ಅನ್ನೋ ಹೆಗ್ಗಳಿಕೆಗೆ ವಿಲಿಯಂ ಶೇಕ್ಸ್‌ಪಿಯರ್ ಪಾತ್ರರಾಗಿದ್ದಾರೆ.

Second person to receive Pfizer coronavirus vaccine is named William Shakespeare ckm

ಲಂಡನ್(ಡಿ.08)  ಕೊರೋನಾ ವಿರುದ್ಧ ಶುಚಿತ್ವ, ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿದ ರಾಷ್ಟ್ರಗಳು ವೈರಸ್ ನಿಯಂತ್ರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಲಸಿಕೆಯೊಂದೇ ಮಾರ್ಗಎಂದು ವ್ಯಾಕ್ಸಿನ್‌ಗೆ ಎದುರು ನೋಡುತ್ತಿದೆ. ಇದೀಗ ಪ್ರಾಯೋಗಿಕ ಹಂತ ಮುಗಿಸಿ ಇದೀಗ ಕೊರೋನಾ ಲಸಿಕೆ ಫೈಜರ್ ತನ್ನ ಹೋರಾಟ ಆರಂಭಿಸಿದೆ. ಇಂಗ್ಲೆಂಡ್‌ನ ವಿಲಿಯಂ ಶೇಕ್ಸ್‌ಪಿಯರ್ ಫೈಜರ್ ಲಸಿಕೆ ಪಡೆದ ವಿಶ್ವದ 2ನೇ ವ್ಯಕ್ತಿಯಾಗಿದ್ದಾರೆ.

ವಿಶ್ವದ ಮೊದಲ ಫೈಝರ್ ಕೊರೋನಾ ಲಸಿಕೆ ಪಡೆದ 90 ವರ್ಷದ ವೃದ್ಧೆ!

ಇದೀಗ ಲಂಡನ್‌ನ ವಾರ್‌ವಿಕ್‌ಶೈರ್ ವಲಯದ ವಿಲಿಯಂ ಶೇಕ್ಸ್‌ಪಿಯರ್  ಫೈಜರ್ ಲಸಿಕೆ ಪಡೆದ ವಿಶ್ವದ ಎರಡನೇ ವ್ಯಕ್ತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಖ್ಯಾತ ಇಂಗ್ಲೀಷ್ ಕಾದಂಬರಿಗಾರ ವಿಲಿಯಂ ಶೇಕ್ಸ್‌ಪಿಯರ್ ಹುಟ್ಟಿದ ಸ್ಟಾರ್ಟ್‌ಫೋರ್ಡ್‌ನಿಂದ 20 ಮೈಲಿ ದೂರದ ನಿವಾಸಿಯಾಗಿರುವ  90 ವರ್ಷದ ಕೊರೋನಾ ಸೋಂಕಿತ ವಿಲಿಯಂ ಶೇಕ್ಸ್‌ಪಿಯರ್ ಇದೀಗ ಲಿಸಿಕೆ ಹಾಕಿಸಿಕೊಂಡಿದ್ದಾರೆ.

 

ಇದಕ್ಕೂ ಮೊದಲು 90 ವರ್ಷದ ಮಾರ್ಗರೇಟ್ ಕಿನನ್ ಫೈಝರ್ ಲಸಿಕೆ ಪಡೆದ ವಿಶ್ವದ ಮೊದಲ ಮಹಿಳೆ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂದು(ಡಿ.08) ರಂದು ಕೊವೆಂಟ್ರಿಯ ಸ್ಥಳೀಯ ಆಸ್ಪತ್ರೆಯಲ್ಲಿ ಬೆಳಗ್ಗೆ ಲಸಿಕೆ ಹಾಕಿಸಿಕೊಂಡಿದ್ದಾರೆ. 

ಭೀತಿ ದೂರಕ್ಕೆ ಸ್ವತಃ ಲಸಿಕೆ ಪಡೆಯಲಿರುವ ಒಬಾಮಾ, ಕ್ಲಿಂಟನ್‌, ಬುಷ್‌!

ಫೈಜರ್ ಲಸಿಕೆ ಮೊದಲ ಹಂತದಲ್ಲಿ ವೈರಸ್‌ನಿಂದ ಹೆಚ್ಚು ಅಪಾಯವಿರುವರಿಗೆ ನೀಡಲಾಗುತ್ತಿದೆ. 80 ವರ್ಷ ವಯಸ್ಸಿನ ಹೆಚ್ಚಿನ ವ್ಯಕ್ತಿಗಳಿಗೆ ಲಸಿಕೆ ನೀಡಲು ಮೊದಲ ಆದ್ಯತೆ ನೀಡಲಾಗುತ್ತಿದೆ. ಫೈಜರ್ ಲಸಿಕೆ ಕೊರೋನಾ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲಿದೆ ಅನ್ನೋದು ಪ್ರಾಯೋಗಿಕ ಹಂತದ ಅಧ್ಯಯನದಲ್ಲಿ ದೃಢಪಟ್ಟಿದೆ.

Latest Videos
Follow Us:
Download App:
  • android
  • ios