* ಪಡಿತರ ಅಂಗಡಿ ವಾರವಿಡೀ ತೆರೆದಿಡಿ, ಅವಧಿಯೂ ವಿಸ್ತರಿಸಿ* ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ* ಹೀಗಾಗಿ ಸುರಕ್ಷಿತ ಖರೀದಿಗಾಗಿ ಈ ಕ್ರಮ ಜಾರಿ
ನವದೆಹಲಿ(ಮೇ.17): ಪಡಿತರ ವ್ಯವಸ್ಥೆಯಡಿ ವಿತರಿಸುವ ಆಹಾರ ಪದಾರ್ಥಗಳ ಸುರಕ್ಷತೆ ವಿತರಣೆಗಾಗಿ ನ್ಯಾಯಬೆಲೆ ಅಂಗಡಿಗಳು ವಾರದ ಎಲ್ಲಾ ದಿನವೂ ತೆರೆದಿರುವಂತೆ ನೋಡಿಕೊಳ್ಳಿ ಮತ್ತು ಅವುಗಳು ತೆರೆದಿರುವ ಸಮಯವನ್ನೂ ವಿಸ್ತರಿಸಿ ಎಂದು ಎಲ್ಲಾ ರಾಜ್ಯ ಸರ್ಕಾಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಬಹುತೇಕ ರಾಜ್ಯಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆದಿರುವ ಸಮಯವನ್ನು ಕಡಿತ ಮಾಡಲಾಗಿದೆ. ಹೀಗಾಗಿ ಇರುವ ಸೀಮಿತ ಅವಧಿಯಲ್ಲೇ ಖರೀದಿಯ ನಿಟ್ಟಿನಲ್ಲಿ ಜನ, ಕೋವಿಡ್ ನಿಯಮ ಮರೆತು ಖರೀದಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಜೊತೆಗೆ ಹಲವೆಡೆ ಜನರು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಖರೀದಿಯೂ ಸಾಧ್ಯವಾಗದೇ ಹಿಂದಿರುಗುತ್ತಿರುವ ವರದಿಗಳು ಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಇಂಥದ್ದೊಂದು ಆದೇಶ ಹೊರಡಿಸಿದೆ.
"
ಈ ಸಂಬಂಧ ಸುತ್ತೋಲೆ ಬಿಡುಗಡೆ ಮಾಡಿರುವ ಕೇಂದ್ರ ಆಹಾರ ಸಚಿವಾಲಯ, ‘ಲಾಕ್‌ಡೌನ್ ವೇಳೆ ನ್ಯಾಯಯುತ ಪಡಿತರ ಅಂಗಡಿಗಳ ಕಾರಾರಯವಧಿಯನ್ನು ಕಡಿತ ಮಾಡಲಾಗಿದೆ. ಆದರೆ ಇಷ್ಟುಸೀಮಿತ ಅವದಿಯಲ್ಲಿ ಎಲ್ಲಾ ಫಲಾನುಭವಿಗಳಿಗೂ ದಿನಸಿ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ತಿಂಗಳ ಎಲ್ಲಾ ದಿನದಲ್ಲಿಯೂ ಪಡಿತರ ಅಂಗಡಿ ತೆರೆಯುವಂತೆ ಕ್ರಮ ರೂಪಿಸಿ’ ಎಂದು ತಿಳಿಸಿದೆ.
ಕಾರಣ ಏನು?
ಸೀಮಿತ ಅವಧಿಯಲ್ಲೇ ಖರೀದಿ ಅನಿವಾರ್ಯ
ಹೀಗಾಗಿ ಕೋವಿಡ್ ನಿಯಮ ಮೂಲೆಗುಂಪು
ಹೀಗಾಗಿ ಸುರಕ್ಷಿತ ಖರೀದಿಗಾಗಿ ಈ ಕ್ರಮ ಜಾರಿ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
