Asianet Suvarna News Asianet Suvarna News

ಸೆಂಟ್ರಲ್‌ ವಿಸ್ತಾ ಅಗತ್ಯ, ಕೆಲಸ ಮುಂದುವರೆಸಿ: 1 ಲಕ್ಷ ದಂಡ, ಅರ್ಜಿ ರದ್ದುಗೊಳಿಸಿದ ಕೋರ್ಟ್!

* ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸೆಂಟ್ರಲ್ ವಿಸ್ತಾ

* ಸೆಂಟ್ರಲ್ ವಿಸ್ತಾ ಕಾಮಕಾರಿ ತಡೆಯುವ ಪ್ರಯತ್ನಕ್ಕೆ ಹಿನ್ನಡೆ

* ಸೆಂಟ್ರಲ್ ವಿಸ್ತಾ ಯೋಜನೆ ಅತೀ ಅಗತ್ಯ, ಹೀಗಾಗಿ ಇದರ ಕಾಮಗಾರಿ ಮುಂದುವರೆಸಿ ಎಂದು ಆದೇಶಿಸಿದ ದೆಹಲಿ ಹೈಕೋರ್ಟ್

* ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ದಂಡ

Central Vista Essential Work To Continue Delhi High Court Dismisses Challenge pod
Author
Bangalore, First Published May 31, 2021, 12:26 PM IST

ನವದೆಹಲಿ(ಮೇ.31): ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸೆಂಟ್ರಲ್ ವಿಸ್ತಾ ಕಾಮಕಾರಿ ತಡೆಯುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಸೋಮವಾರ ಅರ್ಜಿ ವಿಚಾರಣೆ ನಡೆಸಿ ತೀರ್ಪು ನೀಡಿದ ದೆಹಲಿ ಹೈಕೋರ್ಟ್‌ ಸೆಂಟ್ರಲ್ ವಿಸ್ತಾ ಯೋಜನೆ ಅತೀ ಅಗತ್ಯ, ಹೀಗಾಗಿ ಇದರ ಕಾಮಗಾರಿ ಮುಂದುವರೆಸಿ ಎಂದು ಆದೇಶಿಸಿದೆ. ಅರ್ಜಿ ರದ್ದುಗೊಳಿಸಿದ ಹೈಕೋರ್ಟ್‌ ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದ್ದು, ಈ ಅರ್ಜಿ ದುರುದ್ದೇಶಪೂರಿತವಾಗಿ ಸಲ್ಲಿಸಲಾಗಿದೆ ಎಂಬ ಅನುಮಾನ ಮೂಡಿದೆ ಎಂದಿದೆ. 

ಪ್ರಧಾನಿ ನಿವಾಸಕ್ಕೆ ಟೀಕೆ: ವಿಸ್ಟಾ ಸೈಟ್‌ನಲ್ಲಿ ಫೋಟೋ ವಿಡಿಯೋ ನಿಷೇಧ

ಈ ಕಟ್ಟಡ ನಿರ್ಮಾಣವಾಗುತ್ತಿರುವ ಸ್ಥಳದಲ್ಲೇ ಕಾರ್ಮಿಕರು ಉಳಿದುಕೊಂಡಿದ್ದಾರೆ. ಹೀಗಿರುವಾಗ ಕೊರೋನಾ ವೈರಸ್ ಸೋಂಕು ಹರಡುತ್ತದೆ ಎಂಬ ಕಾರಣ ನೀಡಿ ಕೆಲಸ ಸ್ಥಗಿತಗೊಳಿಸುವ ಮಾತೇ ಬರುವುದಿಲ್ಲ. ಶಪೂರ್ಜಿ ಪಲ್ಲೊಂಜಿ ಗ್ರೂಪ್‌ಗೆ ನೀಡಿರುವ ಒಪ್ಪಂದದ ಪ್ರಕಾರ ನವೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕು. ಹೀಗಾಘಿ ಕಾಮಗಾರಿ ಮುಂದುವರೆಸಲು ಕೋರ್ಟ್‌ ಆದೇಶಿಸಿದೆ.

ಏನಿದು ಸೆಂಟ್ರಲ್ ವಿಸ್ತಾ ಯೋಜನೆ?

 ರಾಷ್ಟ್ರ ರಾಜಧಾನಿ ದೆಹಲಿಯ ಹೃದಯಭಾಗವಾದ ಸಂಸತ್ ಭವನ ಹಾಗೂ ಸುತ್ತಮುತ್ತಲಿನ ಕಚೇರಿಗಳಿರುವ ‘ಸೆಂಟ್ರಲ್ ವಿಸ್ತಾ’ ಪ್ರದೇಶದ ಮರುವಿನ್ಯಾಸ ಯೋಜನೆಯ ಭಾಗವಾಗಿ ಹೊಸ ತ್ರಿಕೋನ ಆಕಾರದ ಬೃಹತ್ ಸಂಸತ್ ಭವನ ತಲೆಯೆತ್ತಲಿದೆ. ವಿಶೇಷವೆಂದರೆ ಹೊಸ ಸಂಸತ್ ಭವನದಲ್ಲಿನ ಲೋಕಸಭೆಯು 900 ಸಂಸದರು ಕೂಡಬಹುದಾದಷ್ಟು ದೊಡ್ಡದಾಗಿರಲಿದೆ. ಅಲ್ಲದೆ, ಸಂಸತ್ತಿನ ಜಂಟಿ ಅಧಿವೇಶನ ನಡೆದರೆ ರಾಜ್ಯಸಭಾ ಸದಸ್ಯರು ಸೇರಿದಂತೆ  1,350 ಸಂಸದರು ಇಲ್ಲಿ ಕೂರಲು ಅವಕಾಶ ಸಿಗಲಿದೆ.

ಸೆಂಟ್ರಲ್ ವಿಸ್ಟಾ ಯೋಜನೆ-ಕೊರೋನಾ; ರಾಹುಲ್ ಗಾಂಧಿ ಆದ್ಯತೆ ಪಾಠಕ್ಕೆ ಬಿಜೆಪಿ ತಿರುಗೇಟು!

2022 ರೊಳಗೆ ಈಗಿರುವ ಹಳೆಯ ಸಂಸತ್ ಭವನದ ಪಕ್ಕದಲ್ಲೇ ತ್ರಿಕೋನಾಕಾರದಲ್ಲಿ ಹೊಸ ಸಂಸತ್ ಭವನ ತಲೆಯೆತ್ತಲಿದೆ. ಪ್ರತಿ ಸಂಸದರಿಗೂ ಇಬ್ಬರು ಕುಳಿತುಕೊಳ್ಳಲು ಅವಕಾಶ ಇರುವಷ್ಟು ವಿಶಾಲವಾದ ‘ಟು-ಸೀಟರ್’ ಬೆಂಚ್ ಇರಲಿದೆ. 5 ಅಲ್ಲದೆ, ಸಂಸದರು ತಮ್ಮ ವಸ್ತುಗಳನ್ನು ಇಟ್ಟುಕೊಳ್ಳಲು ಪ್ರತ್ಯೇಕ ಡೆಸ್ಕ್‌ಗಳನ್ನು ಅದು ಹೊಂದಿರಲಿದೆ. 

ತಲೆ ಎತ್ತಲಿದೆ ಹೊಸ ಸಂಸತ್‌ ಭವನ: 75ನೇ ಸ್ವಾತಂತ್ರ್ಯ ದಿನಕ್ಕೆ ಉಡುಗೊರೆ!..

ಅಧಿವೇಶ ನದ ಸಂದರ್ಭದಲ್ಲಿ ಸಾಲಾಗಿ ಕುಳಿತುಕೊಂಡಾಗ ಒಬ್ಬರ ನ್ನೊಬ್ಬರು ಸರಾಗವಾಗಿ ದಾಟಿ ಆಚೆಯಿಂದ ಈಚೆ, ಈಚೆ ಯಿಂದ ಆಚೆ ಓಡಾಡುವಷ್ಟು ವಿಶಾಲ ಜಾಗವು ಬೆಂಚ್ ಗಳ ಮಧ್ಯೆ ಇರಲಿದೆ ಎಂದು ವರದಿಯೊಂದು ತಿಳಿಸಿದೆ. ಈಗಿನ ಲೋಕಸಭೆ ಇಕ್ಕಟ್ಟು ಎಂಬುದು ಸಂಸದರ ಅಳಲು. ಈ ಸಮಸ್ಯೆಗೆ ಹೊಸ ಲೋಕಸಭೆಯಲ್ಲಿ ಪರಿಹಾರ ಸಿಗಲಿದೆ ಎಂದು ಹೇಳಲಾಗುತ್ತಿದೆ. ಅಹಮದಾ ಬಾದ್ ಮೂಲದ ಎಚ್‌ಸಿಪಿ ಡಿಸೈನ್ ಮರುವಿನ್ಯಾಸ ಮಾಡುವ ಗುತ್ತಿಗೆ ಪಡೆದುಕೊಂಡಿದ್ದು, ಅದರ ಪ್ರಾತ್ಯಕ್ಷಿಕೆಯಲ್ಲಿ ಈ ಮಾಹಿತಿ ಗಳು ಇವೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಈಗ ಇರುವ ಸಂಸತ್ ಭವನದ ಸನಿಹವೇ ಹೊಸ ಸಂಸತ್ ಭವನ ತಲೆಯೆತ್ತಲಿದೆ.

ಪ್ರಧಾನಿ ನಿವಾ​ಸ​ದಿಂದ ಸಂಸ​ತ್ತಿಗೆ ಸುರಂಗ ಮಾರ್ಗ

ದೊಡ್ಡ ಲೋಕಸಭೆಯ ಉದ್ದೇಶ ಏನು?: 

ಲೋಕಸಭೆಗೆ ಈಗ 543 ಮಂದಿ ಸದಸ್ಯರಿದ್ದಾರೆ. ಆದರೆ 2026 ರಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ಮರುವಿಂಗಡಣೆ ಆಗುವ ಸಾಧ್ಯತೆ ಇದೆ. ಕ್ಷೇತ್ರ ಮರುವಿಂಗಡಣೆ ಆದರೆ ಲೋಕಸಭಾ ಕ್ಷೇತ್ರಗಳ ಸಂಖ್ಯೆ 848 ಕ್ಕೆ ಏರಬಹುದು ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ. ಹೀಗಾಗಿ 900 ಸದಸ್ಯರು ಕೂಡಬಹುದಾದ ಲೋಕಸಭೆಯ ನಿರ್ಮಾಣ ಮಾಡುವುದು ಸರ್ಕಾರದ ಉದ್ದೇಶ. 

Follow Us:
Download App:
  • android
  • ios