ಕೇಂದ್ರ ಸರ್ಕಾರದಿಂದ ಕರಡು ಅಧಿಸೂಚನೆಶೀಘ್ರದಲ್ಲಿಯೇ ನಿಯಮವಾಗಿ ಜಾರಿಫಿಟ್ನೆಸ್ ಸರ್ಟಿಫಿಕೇಟ್ ಸ್ಟಿಕ್ಕರ್ ಇರದಿದ್ದರೆ ಭಾರೀ ದಂಡ
ನವದೆಹಲಿ (ಮಾ. 3): ವಾಹನ ಮಾಲೀಕರೆ ಎಚ್ಚರ, ಫಿಟ್ನೆಸ್ ಸರ್ಟಿಫಿಕೇಟ್ (Fitness Certificate ) ಅಂದರೆ ಎಫ್ ಸಿ (FC) ಇಲ್ಲದೆ ಇನ್ನು ಮುಂದೆ ವಾಹನವನ್ನು(vehicles ) ರಸ್ತೆಗೆ ಇಳಿಸುವಂತಿಲ್ಲ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ರಸ್ತೆಗೆ ಇಳಿಯಲಿರುವ ಎಲ್ಲಾ ವಾಹನಗಳಿಗೆ ಫಿಟ್ನೆಸ್ ಪ್ರಮಾಣ ಪತ್ರವನ್ನು ಕಡ್ಡಾಯ ಮಾಡಿದೆ. ಫಿಟ್ನೆಸ್ ಪ್ರಮಾಣ ಪತ್ರ ಹಾಗೂ ಅದರ ನೋಂದಣಿ ಚಿಹ್ನೆಯ (registration mark) ನಿಗದಿತ ಮಾನದಂಡದ ರೀತಿಯಲ್ಲಿ ತೋರಿಸಬೇಕಾಗುತ್ತದೆ. ಈ ಕುರಿತಾದ ಕರಡು ಅಧಿಸೂಚನೆಯನ್ನು (draft rules) ಕೇಂದ್ರ ಸರ್ಕಾರ ಗುರುವಾರ ಹೊರಡಿಸಿದ್ದು, ಶೀಘ್ರದಲ್ಲಿಯೇ ನಿಯಮವಾಗಿ ಜಾರಿಯಾಗಲಿದೆ.
ಫಿಟ್‌ನೆಸ್ ಪ್ರಮಾಣಪತ್ರದ ಫಲಕವು ವಾಹನದ ನಂಬರ್ ಪ್ಲೇಟ್‌ನಂತೆಯೇ (Number Plate) ಇರಲಿದ್ದು, ವಾಹನದ ಫಿಟ್‌ನೆಸ್‌ನ ಮುಕ್ತಾಯ ದಿನಾಂಕವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಫಿಟ್‌ನೆಸ್ ಪ್ರಮಾಣಪತ್ರವು ಡಿಡಿ-ಎಂಎಂ-ವೈವೈ (DD-MM-YY)ಸ್ವರೂಪದಲ್ಲಿರಬೇಕು ಎಂದು ಸಚಿವಾಲಯವು (Ministry Of Road Transport) ಸುತ್ತೋಲೆಯಲ್ಲಿ ತಿಳಿಸಿದೆ. ಈ ಮಾದರಿಯಲ್ಲಿ ಇರದಿದ್ದಲ್ಲಿ ದೊಡ್ಡ ಪ್ರಮಾಣದ ದಂಡವನ್ನು (Fine) ವಿಧಿಸಲಾಗುತ್ತದೆ.
ಭಾರೀ ಸರಕುಗಳು/ಪ್ರಯಾಣಿಕರ ವಾಹನಗಳು (heavy goods/passenger vehicles), ಮಧ್ಯಮ ಸರಕುಗಳು/ಪ್ರಯಾಣಿಕರ ವಾಹನಗಳು (medium goods/passenger vehicles) ಮತ್ತು ಲಘು ಮೋಟಾರು ವಾಹನಗಳ (light motor vehicles) ಸಂದರ್ಭದಲ್ಲಿ ಪ್ರಮಾಣಪತ್ರವನ್ನು ವಿಂಡ್‌ಸ್ಕ್ರೀನ್‌ನ (windscreen) ಎಡಭಾಗದ ಮೇಲಿನ ಅಂಚಿನಲ್ಲಿ ಪ್ರದರ್ಶಿಸಬೇಕು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಆಟೋ-ರಿಕ್ಷಾಗಳು (auto-rickshaws), ಇ-ರಿಕ್ಷಾಗಳು, ಇ-ಕಾರ್ಟ್‌ಗಳು ಮತ್ತು ಕ್ವಾಡ್ರಿಸೈಕಲ್‌ಗಳ ವಿಚಾರದಲ್ಲಿ, ಪ್ರಮಾಣಪತ್ರವನ್ನು ವಿಂಡ್‌ಸ್ಕ್ರೀನ್‌ನ ಎಡಭಾಗದ ಮೇಲಿನ ಅಂಚಿನಲ್ಲಿ ಕೂರುವುದಾದಲ್ಲಿ ಅಲ್ಲಿ ಪ್ರದರ್ಶನ ಮಾಡಬೇಕು ಎಂದು ಹೇಳಲಾಗಿದೆ.
ಇನ್ನು ಮೋಟಾರು ಸೈಕಲ್‌ಗಳಲ್ಲಿ ಆಯಾ ವಾಹನದಲ್ಲಿ ಎದ್ದು ಕಾಣುವ ಪ್ರದೇಶದಲ್ಲಿ ಫಿಟ್ನೆಸ್ ಪ್ರಮಾಣಪತ್ರವನ್ನು ಪ್ರದರ್ಶನ ಮಾಡಬೇಕು. ಸಚಿವಾಲಯದ ಅಧಿಸೂಚನೆಯ ಪ್ರಕಾರ, ವಾಹನಗಳು ನೀಲಿ ಹಿನ್ನೆಲೆಯಲ್ಲಿ ಹಳದಿ ಬಣ್ಣದ ಏರಿಯಲ್ ಬೋಲ್ಡ್ ಲಿಪಿಯಲ್ಲಿ (Arial bold script) ಮಾಹಿತಿಯನ್ನು ಪ್ರದರ್ಶಿಸಬೇಕು. ಇದಲ್ಲದೆ, ರಸ್ತೆ ಸಾರಿಗೆ ಸಚಿವಾಲಯವು ಮುಂದಿನ 30 ದಿನಗಳಲ್ಲಿ ಸಾರ್ವಜನಿಕರು ಮತ್ತು ಇತರ ಮಧ್ಯಸ್ಥಗಾರರಿಂದ ಸಲಹೆಗಳನ್ನು ಆಹ್ವಾನಿಸಿದೆ.
CEA For Central Government Employees:ಮಕ್ಕಳ ಶಿಕ್ಷಣ ಭತ್ಯೆ ಕ್ಲೇಮ್ ಮಾಡಲು ಕೇಂದ್ರ ಸರ್ಕಾರಿ ನೌಕರರಿಗೆ ಮಾ.31 ಗಡುವು
ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ 20 ವರ್ಷಕ್ಕಿಂತ ಹಳೆಯದಾದ 51 ಲಕ್ಷ ಲಘು ಮೋಟಾರು ವಾಹನಗಳಿವೆ ಮತ್ತು 34 ಲಕ್ಷ ವಾಹನಗಳು 15 ವರ್ಷಕ್ಕಿಂತ ಹಳೆಯವುಗಳಾಗಿವೆ. 15 ವರ್ಷಕ್ಕಿಂತ ಹಳೆಯದಾದ ಇನ್ನೂ 17 ಲಕ್ಷ ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು ಮಾನ್ಯ ಫಿಟ್‌ನೆಸ್ ಪ್ರಮಾಣಪತ್ರಗಳಿಲ್ಲದೆ ರಸ್ತೆಗಳಲ್ಲಿವೆ.
ಇನ್ನು ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಲು ಹಣ ಪಾವತಿ ಅನಿವಾರ್ಯ. ಫಿಟ್ನೆಸ್ ಸರ್ಟಿಫಿಕೇಟ್ ಮೋಟಾರು ವಾಹನಕ್ಕೆ 1,000 ರೂಪಾಯಿ. ಮೂರು ಚಕ್ರವಾಹನದ ಫಿಟ್ನೆಸ್ ಸರ್ಟಿಫಿಕೇಟ್ 3,500 ರೂಪಾಯಿ. ಕಾರು ಸೇರಿದಂತೆ ಲಘುವಾಹನಕ್ಕೆ 7,500 ರೂಪಾಯಿ. ಮೀಡಿಯಂ ಗೂಡ್ಸ್ ಹಾಗೂ ಪ್ಯಾಸೇಂಜರ್ ವಾಹನಕ್ಕೆ 10,000 ರೂಪಾಯಿ, ಘನ ವಾಹನ ಹಾಗೂ ಘನ ಪ್ಯಾಸೇಂಜರ್ ವಾಹನಕ್ಕೆ 12,500 ರೂಪಾಯಿ ಪ್ರತಿ ವರ್ಷ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಲು ಪಾವತಿಸಬೇಕು. 15 ವರ್ಷಕ್ಕಿಂತ ಹಳೇ ವಾಹನಕ್ಕೆ ಪ್ರತಿ ವರ್ಷ ಹಸಿರು ತೆರಿಗೆ ಪಾವತಿಸಬೇಕು. ಇದು ನಗರದಿಂದ ನಗರಕಕ್ಕೆ, ಪಟ್ಟಣ, ಹಳ್ಳಿಗಳಲ್ಲಿ ವ್ಯತ್ಯಾಸವಾಗಲಿದೆ. ದೆಹಲಿಯಲ್ಲಿ ವಾಹನದ ರಸ್ತೆ ತರಿಗೆಯೆ ಶೇಕಡಾ 50 ರಷ್ಟು ಮೊತ್ತವನ್ನು ಗ್ರೀನ್ ಟ್ಯಾಕ್ಸ್ ಆಗಿ ಪಾವತಿಸಬೇಕು.
