ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಜೆನೆಟಿಕ್‌ ಎಂಜಿನಿಯರಿಂಗ್‌ ಮೌಲ್ಯಮಾಪನ ಸಮಿತಿಯು ಕುಲಾಂತರಿ ಸಾಸಿವೆಯ ವಾಣಿಜ್ಯ ಕೃಷಿಯ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು ವಿವಾದ ಸೃಷ್ಟಿಸಿದೆ.

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಜೆನೆಟಿಕ್‌ ಎಂಜಿನಿಯರಿಂಗ್‌ ಮೌಲ್ಯಮಾಪನ ಸಮಿತಿಯು ಕುಲಾಂತರಿ ಸಾಸಿವೆಯ ವಾಣಿಜ್ಯ ಕೃಷಿಯ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು ವಿವಾದ ಸೃಷ್ಟಿಸಿದೆ. ಈ ನಿರ್ಧಾರವನ್ನು ವಿರೋಧಿಸಿ ಸ್ವದೇಶಿ ಜಾಗರಣ್‌ ಮಂಚ್‌ (ಎಸ್‌ಜೆಎಂ) ಸದಸ್ಯರು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ಅವರಿಗೆ ಪತ್ರ ಬರೆದಿದ್ದಾರೆ. ಕುಲಾಂತರಿ ಬೆಳೆಗಳು ಪರಿಸರಕ್ಕೆ ಮಾತ್ರವಲ್ಲ ಮಾನವನ ಆರೋಗ್ಯಕ್ಕೂ ಹಾನಿಕರವಾಗಿದ್ದು, ಇಂತಹ ಬೆಳೆಗಳನ್ನು ಬೆಳೆಯಲು ಕೇಂದ್ರ ಸರ್ಕಾರ ಎಂದಿಗೂ ಅನುಮತಿಸಬಾರದು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ. ಅ. 18 ರಂದು ನಡೆದ ಜಿಇಎಸಿ ಸಭೆಯು ಎರಡು ವಿಧದ ಕುಲಾಂತರಿ ಸಾಸಿವೆಗಳನ್ನು ಕೃಷಿಗೆ ಅನುಮೋದನೆ ನೀಡಿತ್ತು.

2 ದೇಶಗಳಿಗೆ ಭಾರತದ ಕುಲಾಂತರಿ ತಳಿಯಿಂದ ಹೊಸ ಆತಂಕ
GM Crops: ಆಹಾರ ಭದ್ರತೆಗಾಗಿ ಜೀನ್ ಎಡಿಟೆಡ್ ಬೆಳೆಗಳ ಮೊರೆ ಹೋಗಲಿರುವ ಚೀನಾ!