Asianet Suvarna News Asianet Suvarna News

ಪಾಕ್, ಬಾಂಗ್ಲಾ, ಆಫ್ಘಾನ್‌ ವಲಸೆಗಾರರಿಂದ ಭಾರತೀಯ ಪೌರತ್ವಕ್ಕೆ ಅರ್ಜಿ ಅಹ್ವಾನಿಸಿದ ಕೇಂದ್ರ!

  • 2014ರ ಮೊದಲು ಭಾರತಕ್ಕೆ ಬಂದಿರುವ ಮುಸ್ಲೇಮೇತರ ವಲಸೆಗಾರರಿಗೆ ಪೌರತ್ವ
  • ಅರ್ಹ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಸೂಟಿಸಿದ ಕೇಂದ್ರ ಗೃಹ ಇಲಾಖೆ
  • ಭಾರತೀಯ ಪೌರತ್ವ ಪಡೆಯಲು ಸುಲಭ ವಿಧಾನ ಜಾರಿಮಾಡಿದ ಕೇಂದ್ರ
Center invite application for Indian citizenship from non muslim refugess ckm
Author
Bengaluru, First Published Jun 5, 2021, 5:24 PM IST

ನವದೆಹಲಿ(ಜೂ.05): ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲೇಮತರರಿಗೆ ಪೌರತ್ವ ಸಿಗುತ್ತಿದೆ. ಇದೀಗ ಕೇಂದ್ರ ಸರ್ಕಾರ 2014ರ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಮುಸ್ಲೇಮೇತರರಿಗೆ ಪೌರತ್ವ ನೀಡಲು ಅರ್ಜಿ ಆಹ್ವಾನಿಸಿದೆ.

 'ಭಾರತದ ಪೌರತ್ವ'  ಮೋದಿ ಸರ್ಕಾರ ಕೊಂಡಾಡಿದ ಸಿಖ್ ನಿರಾಶ್ರಿತರು

ಕಳೆದ ವಾರ ಕೇಂದ್ರ ಗೃಹ ಇಲಾಖೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದಿಂದ ಬಂದು ಗುಜರಾತ್, ರಾಜಸ್ಥಾನ, ಪಂಜಾಬ್, ಚತ್ತೀಸಘಡ ಹಾಗೂ ಪರ್ಯಾಣದ 13 ಜಿಲ್ಲೆಗಳಲ್ಲಿ ನೆಲೆಸಿರುವ ಅರ್ಹ ಮುಸ್ಲೇಮೇತರ ವಲಸೆಗಾರರಿಂದ ಭಾರತೀಯ ಪೌರತ್ವಕ್ಕೆ ಅರ್ಜಿ ಅಹ್ವಾನಿಸಿತ್ತು. ಇದೀಗ ದೇಶದ ಯಾವುದೇ ಮೂಲೆಯಲ್ಲಿರುವ ಅರ್ಹ ವ್ಯಕ್ತಿಗಳು ಭಾರತೀಯ ಪೌರತ್ವ ಪಡೆಯಬಹುದು ಎಂದು ಗೃಹ ಸಚಿವಾಲಯ ಹೇಳಿದೆ.

2014ರ ಡಿಸೆಂಬರ್ 31ರೊಳಗೆ ಭಾರತಕ್ಕೆ ವಲಸೆ ಬಂದ ಅಲ್ಪಸಂಖ್ಯಾತ ಸಮುದಾಯದವರಿಗೆ ಭಾರತ ಪೌರತ್ವ ನೀಡಲು ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಿದೆ. 2019ರಲ್ಲಿ ಮಾಡಿದ ಈ ತಿದ್ದುಪಡಿ ಭಾರಿ ವಿರೋಧಕ್ಕೂ ಕಾರಣವಾಯಿತು. 

ಪೌರತ್ವ ಕಾಯ್ದೆ ಹೋರಾಟಕ್ಕೆ PFI ಹಣ,  ಡಿಜಿಹಳ್ಳಿ ಗಲಭೆಯಲ್ಲೂ ಕೈವಾಡ.

ಸದ್ಯ ಕೇಂದ್ರ ಸರ್ಕಾರ 2009ರಲ್ಲಿ ರೂಪಿಸಲಾದ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅರ್ಹರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ದಾಖಲೆ ಸಮೇತ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದವರಿಗೆ ಕೇಂದ್ರ ಪೌರತ್ವ ನೀಡಲಿದೆ.

Follow Us:
Download App:
  • android
  • ios