ಲೂಧಿಯಾನ(ಮೇ 30)   ಸಿಖ್ ನಿರಾಶ್ರಿತರು ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಕೊಂಡಾಡಿದ್ದಾರೆ.   ಭಾರತೀಯ ಪೌರತ್ವಕ್ಕೆ ಅರ್ಜಿ ಹಾಕಬಹುದು ಎಂದು ತಿಳಿಸಿರುವುದು ಅವರ ಸಂತಸಕ್ಕೆ ಕಾರಣ.

ವಿವಿಧ ಕಾರಣಕ್ಕೆ ನಿರಾಶ್ರಿತರ ಹಣೆಪಟ್ಟಿ ಕಟ್ಟಿಕೊಂಡಿರುವ ಹಿಂದುಗಳು, ಸಿಖ್ಖರು, ಬೌದ್ಧರು, ಜೈನರು ಭಾರತೀಯ ಪೌರತ್ವ ಪಡೆದುಕೊಳ್ಳಬಹುದು ಎಂಬ ಮಸೂದೆಯನ್ನು ಕೇಂದ್ರ ಪಾಸ್ ಮಾಡಿತ್ತು. ಗುಜರಾತ್, ರಾಜಸ್ಥಾನ, ಛತ್ತೀಸಘಡ, ಹರ್ಯಾಣ ಮತ್ತು ಪಂಜಾಬ್ ನಲ್ಲಿ ನೆಲೆ ಕಂಡುಕೊಂಡಿರುವ  ಸಿಖ್ಖರು ಕೇಂದ್ರ ಸರ್ಕಾರದ ಕ್ರಮ ಸ್ವಾಗತ ಮಾಡಿದ್ದಾರೆ.

ಲಕ್ಷದ್ವೀಪ ಉಳಿಸಿ ಎಂದ ನಟನಿಗೆ ಸೋಶಿಯಲ್ ಮೀಡಿಯಾ ಕೌಂಟರ್ 

ಕೇಂದ್ರ ಸರ್ಕಾರ  ಪೌರತ್ವ ತಿದ್ದುಪಡಿ  ವಿಧೇಯಕವನ್ನು 2019 ರ ಡಿಸೆಂಬರ್ ನಲ್ಲಿ ಪಾಸ್ ಮಾಡಿತ್ತು. ಆದರೆ ಪರ ಮತ್ತು ವಿರೋಧದ ಅಭಿಪ್ರಾಯಗಳು ಮಂಡನೆಯಾಗುತ್ತಲೆ ಇವೆ.  ಸಿಎಎ ಅಡಿಯಲ್ಲಿ ಸರ್ಕಾರ ಇನ್ನೂ ನಿಯಮಗಳನ್ನು ರೂಪಿಸಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕಾರ 2015 ಕ್ಕಿಂತ ಮೊದಲು ನೆರೆಯ ರಾಷ್ಟ್ರಗಳಾದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಧಾರ್ಮಿಕ ವಿಚಾರಕ್ಕೆ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಬಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ನೀಡಲಾಗುತ್ತದೆ. ದೇಶಾದ್ಯಂತ ತೀವ್ರ ವಿರೋಧ, ಪ್ರತಿಭಟನೆಗಳ ನಡುವೆಯೂ  ಸಿಎಎ ಅಂಗೀಕರಿಸಲ್ಪಟ್ಟಿತ್ತು.

 ಮೊರ್ಬಿ, ರಾಜ್ ಕೋಟ್, ಪಠಾಣ್, ವಡೋದರಾ, ದುರ್ಗ್ ,ಛತ್ತೀಸ್ ಗಢದ ಬಾಲೋಡಬಜಾರ್, ಜಾಲೊರ್, ಉದಯ್ ಪುರ, ಪಾಲಿ,ಬರ್ಮೆರ್, ಮತ್ತು ರಾಜಸ್ಥಾನದ ಶಿರೊಹಿ, ಹರಿಯಾಣದ ಪರಿದಾಬಾದ್, ಪಂಜಾಬ್ ನ ಜಲಂಧರ್ ಜಿಲ್ಲೆಯಲ್ಲಿ ವಾಸಿಸುತ್ತಿರುವ ನಿರಾಶ್ರಿತರು ಭಾರತೀಯ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಬಹುದು. ಕರ್ನಾಟಕದ ಜನಸಂಖ್ಯೆಯಲ್ಲಿ  ಶೇ. 0.05 ರಷ್ಟು ಸಿಖ್ ಸಮುದಾಯದವರಿದ್ದಾರೆ.