ಕೊರೋನಾ ವಿರುದ್ಧದ ಹೋರಾಟ ಚುರುಕುಗೊಳಿಸಿದ ಕೇಂದ್ರ 18-44 ವಯೋಮಿತಿಯವರಿಗೆ ಲಸಿಕೆ ಕೇಂದ್ರದಲ್ಲಿ ನೋಂದಣಿ ಮಾಡಲು ಅವಕಾಶ ಸರ್ಕಾರಿ ಕೇಂದ್ರಗಳಲ್ಲಿ ಲಸಿಕೆ ನೀಡಲು ಅವಕಾಶ

ನವದೆಹಲಿ(ಮೇ.24): ಭಾರತದ ವಿರುದ್ಧದ ಕೊರೋನಾ ಹೋರಾಟಕ್ಕೆ ಲಸಿಕೆ ಪ್ರಬಲ ಅಸ್ತ್ರವಾಗಿದೆ. ಹಂತ ಹಂತವಾಗಿ ಲಸಿಕೆ ಅಭಿಯಾನ ವಿಸ್ತರಿಸಿದ ಕೇಂದ್ರ ಸರ್ಕಾರ, 18 ರಿಂದ 44 ವರ್ಷದವರ ಲಸಿಕೆಗೆ ಮೇ.01 ರಿಂದ ಗ್ರೀನ್ ಸಿಗ್ನಿಲ್ ನೀಡಿತ್ತು. ಆದರೆ ಲಸಿಕೆ ಅಭಾವದಿಂದ ಹಲವು ರಾಜ್ಯಗಳಲ್ಲಿ ಇನ್ನೂ ಆರಂಭಗೊಂಡಿಲ್ಲ. ಇನ್ನು ಈ ವಯೋಮಾನದವರು ಆನ್‌ಲೈನ್, ಮೊಬೈಲ್ ಮೂಲಕ ರಿಜಿಸ್ಟ್ರೇಶನ್ ಮಾಡಿಸಿಬೇಕಿತ್ತು. ಇದೀಗ ಲಸಿಕಾ ಕೇಂದ್ರದಲ್ಲೂ ರಿಜಿಸ್ಟ್ರೇಶನ್ ಮಾಡಿ ಲಸಿಕೆ ಪಡೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಭಾರತ್ ಬಯೋಟೆಕ್‌ನಿಂದ ಕೊರೋನಾಗೆ ಮತ್ತೊಂದು ರಾಮಬಾಣ!

ಆನ್‌ಲೈನ್ ಅಥವಾ ಸ್ಮಾರ್ಟ್‌ಫೋನ್ ಮೂಲಕ ಲಸಿಕೆ ರಿಜಿಸ್ಟ್ರೇಶನ್ ಮಾಡಿಕೊಳ್ಳಲು ಸಾಧ್ಯವಾಗದವರು ಅಥವಾ ಅರಿವಿಲ್ಲದರಿಗೆ ಕೇಂದ್ರ ಸರ್ಕಾರ ಈ ಲಸಿಕಾ ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡು ಲಸಿಕೆ ಪಡೆಯಲು ಅವಕಾಶ ನೀಡಿದೆ. ಇದರ ಜೊತೆಗೆ ಲಸಿಕೆ ವ್ಯರ್ಥವಾಗುತ್ತಿರುವುದನ್ನು ತಡೆಯಲು ಈ ನಿರ್ಧಾರ ತೆಗೆದುಕೊಂಡಿದೆ.

Scroll to load tweet…

ಕೇಂದ್ರದ ಈ ನಿರ್ಧಾರದಿಂದ ಇದೀಗ 18 ರಿಂದ 44 ವರ್ಷದವರು ನೇರವಾಗಿ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಬಹುದು. ಆದರೆ ಅಂತಿಮ ನಿರ್ಧಾರ ರಾಜ್ಯ ಸರ್ಕಾರದ್ದು ಎಂದು ಕೇಂದ್ರ ಸರ್ಕಾರ ಹೇಳಿದೆ. ಇಲ್ಲೀವರೆಗೆ ಕೋವಿನ್ ಆ್ಯಪ್, ಆರೋಗ್ಯ ಸೇತು ಆನ್‌ಲೈನ್ ಮೂಲಕ ರಿಜಿಸ್ಟ್ರೇಶನ್ ಮಾಡಿ ಬಳಿಕ ಲಸಿಕಾ ಕೇಂದ್ರಕ್ಕೆ ತೆರಳಬೇಕಿತ್ತು.

ಇಮ್ಯುನಿಟಿ ವೃದ್ಧಿಸಲು ಲಸಿಕೆ ಡೋಸ್ ನಡುವೆ 3 ತಿಂಗಳ ಅಂತರ ಅಗತ್ಯ: ಆಕ್ಸ್‌ಫರ್ಡ್ 

ಆನ್‌ಲೈನ್ ಪ್ರಕ್ರಿಯೆಯಿಂದ ಇಂಟರ್‌ನೆಟ್ ಜ್ಞಾನವಿಲ್ಲದ ಹಲವು ಲಸಿಕೆಯಿಂದ ವಂಚಿತರಾಗುವು ಸಾಧ್ಯತೆ ಇದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರ ತನ್ನ ನೀತಿಯಲ್ಲಿ ಬದಲಾವಣೆ ಮಾಡಿದೆ. ಲಸಿಕೆ ಲಭ್ಯತೆ ಸೇರಿದಂತೆ ಇತರ ಮಾಹಿತಿ ಆಧರಿಸಿ ಆಯಾ ರಾಜ್ಯ ಸರ್ಕಾರಗಳು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಹೇಳಿದೆ.