ಪುಲ್ವಾಮಾ(ಆ.29): ಜಮ್ಮು ಕಾಶ್ಮೀರದ ಪುಲ್ವಾಮಾದ ಜದುರಾ ಪ್ರದೇಶದಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಘರ್ಷಣೆಯಲ್ಲಿ ಭಾರತೀಯ ಸೇನೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಈ ಚಕಮಕಿಯಲ್ಲಿ ಭಾರತೀಯ ಸೇನೆಯ ಓರ್ವ ಯೋಧ ಕೂಡ ಹುತಾತ್ಮರಾಗಿದ್ದಾರೆ.

ವಾಯುದಾಳಿ ತಡೆಗೆ ಏರ್‌ಡಿಫೆನ್ಸ್ ಕಮಾಂಡ್ ಸ್ಥಾಪನೆ..?

ಆ.29 ರಂದು ಈ ಘಟನೆ ವರದಿಯಾಗಿದ್ದು, ಗುಂಡಿನ ಚಕಮಕಿ ರಾತ್ರಿ ಸುಮಾರು ಒಂದ ಗಂಟೆಗೆ ನಡೆದಿದೆ ಎನ್ನಲಾಗಿದೆ. ಜಮ್ಮು-ಕಾಶ್ಮೀರ ಪೊಲೀಸ್, ಭಾರತೀಯ ಸೇನೆ, ಸಿಆರ್ ಪಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಪುಲ್ವಾಮದ ಜದುರಾದಲ್ಲಿ ಉಗ್ರರನ್ನು ಎನ್‌ಕೌಂಟರ್ ಮಾಡಲಾಗಿದೆ. 

ಎನ್‌ಕೌಂಟರ್ ನಡೆದ ಸ್ಥಳದಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತರಾದ ಉಗ್ರರು ಯಾವ ಸಂಘಟನೆಯವರೆಂದು ಇನ್ನಷ್ಟೇ ತಿಳಿಯಬೇಕಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 18 ಗಂಟೆಗಳಲ್ಲಿ 7 ಭಯೋತ್ಪಾದಕರು ಹತರಾಗಿದ್ದಾರೆ. ಶನಿವಾರ ಪುಲ್ವಾಮಾದಲ್ಲಿ 3 ಭಯೋತ್ಪಾದಕರನ್ನು ಹೊಡೆದುರುಳಿಸಿದ್ದರೆ, ನಿನ್ನೆ ಶೋಪಿಯಾನ್‌ನಲ್ಲಿ 4 ಭಯೋತ್ಪಾದಕರು ಸಾವನ್ನಪ್ಪಿದ್ದು, ಓರ್ವನನ್ನು ಜೀವಂತವಾಗಿ ಹಿಡಿಯಲಾಯಿತು. 

40 ಯೋಧರ ಬಲಿ ಪಡೆದ ಪುಲ್ವಾಮಾ ದಾಳಿಗೆ ಖರ್ಚಾಗಿದ್ದು ಐದೇ ಲಕ್ಷ..!

ಪೊಲೀಸ್ ಐಜಿ ವಿಜಯ್ ಕುಮಾರ್ ಅವರ ಪ್ರಕಾರ ಶೋಪಿಯಾನ್‌ನ ಕಿಲುರಾ ಗ್ರಾಮದಲ್ಲಿ ನಿನ್ನೆ ಎರಡೂವರೆ ಗಂಟೆಗಳಲ್ಲಿ 4 ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ ಮತ್ತು 2 ಎಕೆ 47 ಮತ್ತು 4 ಪಿಸ್ತೂಲ್‌ಗಳನ್ನು ಸಹ ಭಯೋತ್ಪಾದಕರಿಂದ ವಶಪಡಿಸಿಕೊಳ್ಳಲಾಗಿದೆ. ಸರ್ಪಂಚ್ ಸುಹೇಲ್ ಭಟ್ ಅವರನ್ನು ಕೊಂದು ಅಪಹರಿಸಿದ ಭಯೋತ್ಪಾದಕನನ್ನು ಸಹ ಕೊಲ್ಲಲಾಗಿದೆ. ಈ ವರ್ಷ ಇಲ್ಲಿಯವರೆಗೆ ಕಣಿವೆಯಲ್ಲಿ 150 ಭಯೋತ್ಪಾದಕರು ಹತರಾಗಿದ್ದಾರೆ.